ನವದೆಹಲಿ: ಸಚಿನ್ ತೆಂಡೂಲ್ಕರ್ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಕ್ರಿಕೆಟ್ ಮೈದಾನದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ಬೌಂಡರಿ ಹಾಗೂ ಸಿಕ್ಸರ್ ಬಾರಿಸಲು ಸಜ್ಜಾಗಿದ್ದಾರೆ. ‘ಕ್ರಿಕೆಟ್ ದೇವರು’ ಖ್ಯಾತಿಯ ತೆಂಡೂಲ್ಕರ್ ಆಟವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳಿಗೆ ಮತ್ತೊಂದು ಅವಕಾಶ ಸಿಗುತ್ತಿದೆ. ಸಚಿನ್ ತಮ್ಮ ವೃತ್ತಿಜೀವನದಲ್ಲಿ ಏಕದಿನದಲ್ಲಿ 18,426 ರನ್ ಮತ್ತು ಟೆಸ್ಟ್‌ನಲ್ಲಿ 15,921 ರನ್ ಗಳಿಸಿದ್ದಾರೆ. ಸಚಿನ್ 100 ಅಂತಾರಾಷ್ಟ್ರೀಯ ಶತಕಗಳ ಸರದಾರರಾಗಿ ಕ್ರಿಕೆಟ್ ಇತಿಹಾಸದಲ್ಲಿಯೇ ಅಚ್ಚಳಿಯದ ಸಾಧನೆ ಮಾಡಿದ್ದಾರೆ.   


COMMERCIAL BREAK
SCROLL TO CONTINUE READING

ಮತ್ತೆ ಮೈದಾನಕ್ಕೆ ಇಳಿಯಲಿರುವ ಸಚಿನ್


ಸಚಿನ್ ತೆಂಡೂಲ್ಕರ್ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ದ್ವಿಶತಕ ಬಾರಿಸಿದ ದಾಖಲೆಯನ್ನೂ ಹೊಂದಿದ್ದಾರೆ. 24 ಫೆಬ್ರವರಿ 2010ರಂದು ಸಚಿನ್ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಮೊದಲ ದ್ವಿಶತಕ ದಾಖಲಿಸಿದರು. 2013ರಲ್ಲಿ ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಸಚಿನ್ ತೆಂಡೂಲ್ಕರ್ ಮತ್ತೊಮ್ಮೆ ಅಭಿಮಾನಿಗಳಿಗಾಗಿ ಕ್ರಿಕೆಟ್ ಮೈದಾನಕ್ಕೆ ಇಳಿಯಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.


ಇದನ್ನೂ ಓದಿ: ಈ ಮಾರಕ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಕ್ಕೆ ಟಿ20 ವಿಶ್ವಕಪ್ ನೀಡಲಿದ್ದಾರೆ- ರಿಕಿ ಪಾಂಟಿಂಗ್


ಭಾರತ ತಂಡದ ನಾಯಕರಾಗಲಿರುವ ಸಚಿನ್


ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಇದೇ ಸೆಪ್ಟೆಂಬರ್ 10ರಿಂದ ಅಕ್ಟೋಬರ್ 1ರವರೆಗೆ ನಡೆಯಲಿರುವ ರಸ್ತೆ ಸುರಕ್ಷತೆ ವಿಶ್ವ ಸರಣಿಯ 2ನೇ ಋತುವಿನಲ್ಲಿ ಹಾಲಿ ಚಾಂಪಿಯನ್ ಇಂಡಿಯನ್ ಲೆಜೆಂಡ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಈ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಪಂದ್ಯಗಳು ಕಾನ್ಪುರ್, ರಾಯ್‌ಪುರ್, ಇಂದೋರ್ ಮತ್ತು ಡೆಹ್ರಾಡೂನ್‌ನಲ್ಲಿ ನಡೆಯಲಿವೆ. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಮೊದಲ ಪಂದ್ಯ ಕಾನ್ಪುರದಲ್ಲಿ ನಡೆಯಲಿದ್ದು, ರಾಯ್‌ಪುರ 2 ಸೆಮಿಫೈನಲ್ ಮತ್ತು ಫೈನಲ್‌ಗೆ ಆತಿಥ್ಯ ವಹಿಸಲಿದೆ.


ಟೂರ್ನಿಯಲ್ಲಿ ಈ ದೇಶಗಳು ಇರಲಿವೆ


ನ್ಯೂಜಿಲೆಂಡ್ ಲೆಜೆಂಡ್ಸ್ ಈ ಋತುವಿನ ಹೊಸ ತಂಡವಾಗಿರುತ್ತದೆ. ಈ ತಂಡವು ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ಧ 22 ದಿನಗಳ ಈವೆಂಟ್‌ನಲ್ಲಿ ಆಡಲಿದೆ. ಮುಖ್ಯವಾಗಿ ದೇಶ ಮತ್ತು ಪ್ರಪಂಚದಾದ್ಯಂತ ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಈ ಟೂರ್ನಿ ನಡೆಯಲಿದೆ. ಹೀಗಾಗಿ ಕ್ರಿಕೆಟ್ ಜಗತ್ತಿನ ಲೆಜೆಂಡ್ಸ್‍ಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.


ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ 360 ಡಿಗ್ರಿ ಬ್ಯಾಟಿಂಗ್ ಗೆ ಬೆಚ್ಚಿದ ಹಾಂಗ್ ಕಾಂಗ್..!


ಈ ವಾಹಿನಿಯಲ್ಲಿ ನೇರ ಪ್ರಸಾರ


ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್‌ನ ಮುಂಬರುವ ಸೀಸನ್ ಕಲರ್ಸ್ ಸಿನೆಪ್ಲೆಕ್ಸ್, ಕಲರ್ಸ್ ಸಿನೆಪ್ಲೆಕ್ಸ್ ಸೂಪರ್‌ಹಿಟ್ ಮತ್ತು ಹೊಸದಾಗಿ ಪ್ರಾರಂಭಿಸಲಾದ ಸ್ಪೋರ್ಟ್ಸ್ 18 ಖೇಲ್‌ನಲ್ಲಿ ಪ್ರಸಾರವಾಗಲಿದೆ. ಇದಲ್ಲದೆ ವೋಟ್ ಮತ್ತು ಜಿಯೋದಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಸಹ ಆಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.