ನವದೆಹಲಿ: ಐಪಿಎಲ್‌ನ ಆಡಳಿತ ಮಂಡಳಿಯ ಸಭೆ ಮುಗಿದಿದೆ. ಬಿಸಿಸಿಐ ಪ್ರಕಾರ, ಐಪಿಎಲ್‌ಗೆ ಭಾರತ ಸರ್ಕಾರ ಅನುಮತಿ ನೀಡಿದೆ. ಈಗ ಈ ಪಂದ್ಯಾವಳಿಯನ್ನು ಸೆಪ್ಟೆಂಬರ್ 19 ರಿಂದ ನವೆಂಬರ್ 10 ರವರೆಗೆ ಯುಎಇಯಲ್ಲಿ ನಡೆಯಲಿದೆ.


ಇದಲ್ಲದೆ ಮಹಿಳಾ ಐಪಿಎಲ್ ಸಹ ಆಡಲಾಗುವುದು ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಐಪಿಎಲ್‌ನ ಎಲ್ಲಾ ಪ್ರಾಯೋಜಕರು ಹಾಗೇ ಉಳಿದಿದ್ದಾರೆ, ಅಂದರೆ ಚೀನಾದ ಪ್ರಾಯೋಜಕ ವಿವೋ ಐಪಿಎಲ್‌ನ ಮುಖ್ಯ ಪ್ರಾಯೋಜಕ ಕಂಪನಿಯಾಗಿ ಉಳಿಯಲಿದೆ.

COMMERCIAL BREAK
SCROLL TO CONTINUE READING


ನವೆಂಬರ್ 10 ರಂದು ಫೈನಲ್ ಪಂದ್ಯ
ಪಂದ್ಯಾವಳಿ ಸೆಪ್ಟೆಂಬರ್ 19 ರಂದು ಪ್ರಾರಂಭವಾಗಿ 53 ದಿನಗಳವರೆಗೆ ನಡೆಯಲಿದೆ. ಐಪಿಎಲ್ ಫೈನಲ್ ನವೆಂಬರ್ 10 ರಂದು ನಡೆಯಲಿದ್ದು, ಇದರಿಂದ ದೀಪಾವಳಿಯ ವಾರದ ಲಾಭ ಪ್ರಸಾರಕರಿಗೆ ಸಿಗಲಿದೆ. ಈ ಬಾರಿ ಐಪಿಎಲ್‌ನ 10 ಡಬಲ್ ಹೆಡರ್ (ದಿನದಲ್ಲಿ ಎರಡು ಪಂದ್ಯಗಳು) ಪಂದ್ಯಗಳನ್ನು ಆಡಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಸಂಜೆಯ ಪಂದ್ಯಗಳು 7.30ಕ್ಕೆ ಆರಂಭಗೊಳ್ಳಲಿವೆ
ಈ ಬಾರಿ ಸಂಜೆಯ ಪಂದ್ಯಗಳು 7.30ಕ್ಕೆ ಆರಂಭಗೊಳ್ಳಲಿವೆ ಎಂದು ಬಿಸಿಸಿಐ ಅಧಿಕಾರಿ ಹೇಳಿದ್ದಾರೆ. ಈ ಪಂದ್ಯಗಳನ್ನು 'ಐಪಿಎಲ್ ನಿಯಮಿತ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ನಡೆಸಲು ನಿರ್ಧರಿಸಿದೆ. ಇದಕ್ಕೂ ಮೊದಲು ರಾತ್ರಿ 8 ಗಂಟೆಗೆ ಈ ಪಂದ್ಯಗಳನ್ನು ಆಡಲಾಗುತ್ತಿತ್ತು.