ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಸ್ಟೇಡಿಯಂನಲ್ಲಿ 3 ಪಂದ್ಯಗಳ ಸರಣಿಯ ಮೊದಲನೇ ಟಿ20 ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ. ಮೂರು ವರ್ಷಗಳ ಬಳಿಕ ಈ ಮೈದಾನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಸಾಕ್ಷಿಯಾಗಲಿದ್ದು, ಅಭಿಮಾನಿಗಳಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 World Cup : ಟಿ20 ವಿಶ್ವಕಪ್‌ಗೆ ಟೀಂ ಇಂಡಿಯಾದಲ್ಲಿ ಭಾರಿ ಬದಲಾವಣೆ!


ಆಸ್ಟ್ರೇಲಿಯಾ ವಿರುದ್ಧ ಅದ್ಭುತವಾಗಿ ಸರಣಿ ಗೆದ್ದ ಭಾರತ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದುಬೀಗುವ ತವಕದಲ್ಲಿದೆ. ಸದ್ಯ ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆಯಾಗಿದೆ. ಹಾರ್ದಿಕ್ ಪಾಂಡ್ಯ ಅಲಭ್ಯತೆಯು ಭಾರತ ತಂಡದ ಕೊಂಚ ಹಿನ್ನಡೆಯನ್ನುಂಟು ಮಾಡಬಹುದು.


ಇನ್ನು ದಕ್ಷಿಣ ಆಫ್ರಿಕಾ ಬಗ್ಗೆ ಮಾತನಾಡುವುದಾದರೆ ಇಡೀ ತಂಡವು T20 ಸ್ಪೆಷಲಿಸ್ಟ್‌ಗಳಿಂದ ತುಂಬಿದೆ. ಇವರೆಲ್ಲರೂ ಯಾವುದೇ ಪರಿಸ್ಥಿತಿಯಲ್ಲಿಯಾದರೂ ದೊಡ್ಡ ಮೊತ್ತದ ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ವೇಗಿಗಳಾದ ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ, ಲುಂಗಿ ಎನ್‌ಗಿಡಿ, ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ತಂಡಕ್ಕೆ ಉತ್ತಮ ಬಲ ತುಂಬುವ ಸಾಧ್ಯತೆಯಿದೆ.


ತಿರುವನಂತಪುರಂ ಸ್ಟೇಡಿಯಂ ಪಿಚ್ ರಿಪೋರ್ಟ್:


ಕೇರಳದ ತಿರುವನಂತಪುರಂನಲ್ಲಿರುವ ಗ್ರೀನ್‌ಫೀಲ್ಡ್ ಸ್ಟೇಡಿಯಂ ಇಲ್ಲಿಯವರೆಗೆ ಬೆರಳೆಣಿಕೆಯಷ್ಟು T20I ಗಳನ್ನು ಆಯೋಜಿಸಿದೆ. ಮೂರು ವರ್ಷಗಳ ನಂತರ ಈ ಮೈದಾನದಲ್ಲಿ ನಡೆಯುತ್ತಿರುವ ಮೊದಲ T20I ಆಗಿದೆ. ಐತಿಹಾಸಿಕ ಘಟನೆಗಳ ಆಧಾರದ ಮೇಲೆ ಈ ಟ್ರ್ಯಾಕ್‌ನಲ್ಲಿ ರನ್-ಸ್ಕೋರಿಂಗ್ ಅಷ್ಟು ಸುಲಭವಲ್ಲ. ಇಲ್ಲಿಯವರೆಗೆ ಸರಾಸರಿ 1 ನೇ ಇನ್ನಿಂಗ್ಸ್ T20Iಯಲ್ಲಿ ಅತೀ ಹೆಚ್ಚು ಸ್ಕೋರ್ ಮಾಡಿದ್ದು ಕೇವಲ 118 ರನ್.


ಈ ಮೈದಾನದಲ್ಲಿ ಒಟ್ಟು 14 T20 ದೇಶೀಯ ಪಂದ್ಯಗಳನ್ನು ಆಡಲಾಗಿದೆ. ಆ ಪಂದ್ಯಗಳಲ್ಲಿ ಸರಾಸರಿ 1 ನೇ ಇನ್ನಿಂಗ್ಸ್ ಸ್ಕೋರ್ ಕೇವಲ 127 ರನ್. ಅಷ್ಟೇ ಅಲ್ಲದೆ, ಈ ಐತಿಹಾಸಿಕ ದಾಖಲೆಗಳು ಬ್ಯಾಟರ್‌ಗಳ ಪರವಾಗಿಲ್ಲ. ಆಟ ಮುಂದುವರಿದಂತೆ ಈ ಮೈದಾನ ಬ್ಯಾಟಿಂಗ್‌ಗೆ ಕಠಿಣವಾಗುತ್ತಾ ಹೋಗುತ್ತದೆ.


ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ವಿರುದ್ಧ ಈ ಮೂವರು ಆಟಗಾರರಿಗೆ ತಂಡದಲ್ಲಿ ಅವಕಾಶ


ಸದ್ಯ ಭಾರತ ಮತ್ತು ದಕ್ಷಿಣಾ ಆಫ್ರಿಕಾ ನಡುವಿನ ಪಂದ್ಯದ ವೇಳೆ ಉತ್ತಮವಾದ ಪಿಚ್ ಕಾಣುವ ನಿರೀಕ್ಷೆಯಿದೆ. ಈ ಮೈದಾನದಲ್ಲಿ ಬೌಂಡರಿ ಬಾರಿಸುವುದೇ ದೊಡ್ಡ ಸವಾಲು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.