Delhi Capitals: ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ. 


COMMERCIAL BREAK
SCROLL TO CONTINUE READING

ಐಪಿಎಲ್‌ ಮೆಗಾ ಹರಾಜಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಎಲ್ಲಾ ತಂಡಗಳಲ್ಲಿ ಪ್ರಮುಖ ಬದಲಾವಣೆಗಳು ಆಗುವುದು ಖಚಿತ. ಆದರೆ ಅದಕ್ಕೂ ಮುನ್ನ ಕೆಲವು ಫ್ರಾಂಚೈಸಿಗಳಲ್ಲಿ ಕೋಚಿಂಗ್ ಸಿಬ್ಬಂದಿಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಡೆಲ್ಲಿ ಕ್ಯಾಪಿಟಲ್ಸ್ ಈಗಾಗಲೇ ರಿಕಿ ಪಾಂಟಿಂಗ್ ಅವರನ್ನು ಕೈಬಿಟ್ಟಿದೆ. ಇನ್ನೂ ಟಿ20 ವಿಶ್ವಕಪ್‌ ಗೆದ್ದ ನಂತರ ಭಾರತ ತಂಡದ ಕೋಚ್‌ ಅದೀಕಾರ ಅವದಿ ಮುಗಿದ ಕಾರಣ ರಾಹುಲ್‌ ದ್ರಾವಿಡ್‌ ತಂಡಕ್ಕೆ ಗುಡ್‌ ಬೈ ಹೇಳಿದ್ದು ಗೊತ್ತೇ ಇದೆ. ಆದರೆ, ಇದೀಗ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ರಾಜಸ್ಥಾನ ಫ್ರಾಂಚೈಸಿಯಲ್ಲಿದ್ದ ದ್ರಾವಿಡ್ ಅದೇ ಕ್ಲಬ್‌ಗೆ ಮರಳುತ್ತಿದ್ದಾರೆ ಎಂದು ವರದಿಯಾಗಿದೆ.


ಇದನ್ನೂ ಓದಿ: IND vs SL: ಶ್ರೀಲಂಕಾ ತಂಡದಲ್ಲಿ ಭಾರಿ ಬದಲಾವಣೆ.. ತಂಡಕ್ಕೆ ಎಂಟ್ರಿ ಕೊಟ್ಟ ಹೊಸ ಕ್ಯಾಪ್ಟನ್‌..!


ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿ ಬದಲಾವಣೆಯಾಗಲಿದೆ. ಮುಖ್ಯ ಕೋಚ್ ಆಶಿಶ್ ನೆಹ್ರಾ ಮತ್ತು ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಗುಜರಾತ್ ಟೈಟಾನ್ಸ್ ತೊರೆಯಲಿದ್ದಾರೆ ಎಂದು ವರದಿಯಾಗಿದೆ. ಆದರೆ, ಈ ಇಬ್ಬರು ತಾವಾಗಿಯೇ ನಿರ್ಗಮಿಸುತ್ತಿದ್ದಾರೋ ಅಥವಾ ಫ್ರಾಂಚೈಸಿ ಈ ಇಬ್ಬರನ್ನು ಕೈಬಿಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಆದರೆ ಫ್ರಾಂಚೈಸಿಯೊಂದಿಗಿನ ಅವರ ಸಂಬಂಧ ಕೊನೆಗೊಂಡಿದೆ ಎಂಬ ಸುದ್ದಿ ರಾಷ್ಟ್ರೀಯ ಮಾಧ್ಯಮಗಳಲ್ಲಿ ಫುಲ್‌ ಸೌಂಡ್‌ ಮಾಡುತ್ತಿದೆ.


ನೆಹ್ರಾ ಮೊದಲಿನಿಂದಲೂ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯಲ್ಲಿದ್ದಾರೆ. ಇವರ ಆಡಳಿತದಲ್ಲಿ ಮೂರು ಋತುಗಳಲ್ಲಿ ಎರಡು ಬಾರಿ ತಂಡವನ್ನು ಫೈನಲ್‌ಗೆ ಕೊಂಡೊಯ್ದಿದ್ದಾರೆ. ಫುಟ್‌ಬಾಲ್ ಕೋಚ್‌ನಂತೆ ಬೌಂಡರಿಯಲ್ಲಿ ಸುತ್ತಾಡಿದ ನೆಹ್ರಾ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಜರಾತ್‌ ತಂಡದಲ್ಲಿ ಹಾರ್ದಿಕ್ ಹಾಗೂ ನೆಹ್ರಾ ಕಾಂಬಿನೇಷನ್ ಹಿಟ್ ಆಗಿತ್ತು. ಆದರೆ ಹಾರ್ದಿಕ್ ಮುಂಬೈ ಇಂಡಿಯನ್ಸ್‌ಗೆ ತೆರಳಿದ ನಂತರ, ಶುಭಮನ್ ಗಿಲ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಮತ್ತೊಂದೆಡೆ, ಮೊಹಮ್ಮದ್ ಶಮಿ ಕೂಡ ಗಾಯದ ಕಾರಣ ತಂಡದಿಂದ ದೂರ ಉಳಿದಿದ್ದರು, ಗಿಲ್-ನೆಹ್ರಾ ಜೋಡಿ ಕಳೆದ ಋತುವಿನಲ್ಲಿ ವಿಫಲವಾಯಿತು.ಗುಜರಾತ್ ಟೈಟಾನ್ಸ್ ಐಪಿಎಲ್ 2024 ರಲ್ಲಿ ಪ್ಲೇಆಫ್‌ಗೆ ಕೂಡ ಪ್ರವೇಶಿಸಲಿಲ್ಲ. 


ಇದನ್ನೂ ಓದಿ: ಹಿಟ್ಲರ್‌ಗೆ ತಲೆಬಾಗಲು ನಿರಾಕರಿಸಿದ್ದ ಭಾರತದ ದಂತಕಥೆ.. ಹಾಕಿಯಲ್ಲಿ ಜರ್ಮನಿ ತಂಡವನ್ನು ಸೋಲಿಸಿದ ಕಥೆಯೇ ರೋಚಕ..!


ಈ ಹಿನ್ನೆಲೆಯಲ್ಲಿ ಸಿಕ್ಸರ್ ಹೀರೋ ಯುವರಾಜ್ ಸಿಂಗ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಲು ಗುಜರಾತ್ ಫ್ರಾಂಚೈಸಿ ಸ್ಕೆಚ್‌ ಹಾಕಿದೆ. ಯುವಿ ಜೊತೆ ಫ್ರಾಂಚೈಸಿ ಮಾತುಕತೆಯನ್ನೂ ನಡೆಸುತ್ತಿದ್ದು, ಯುವರಾಜ್ ಕೂಡ ಆಸಕ್ತಿ ತೋರಿದ್ದಾರೆ. "ಪ್ರಮುಖ ಬದಲಾವಣೆಗಳು ನಡೆಯುತ್ತಿವೆ. ನೆಹ್ರಾ ಮತ್ತು ವಿಕ್ರಮ್ ಸೋಲಂಕಿ ತಂಡ ತೊರೆಯುತ್ತಿದ್ದಾರೆ. ಯುವರಾಜ್ ಜೊತೆ ಮಾತುಕತೆ ನಡೆಯುತ್ತಿದೆ. ಆದರೆ ಇನ್ನೂ ಯಾವುದನ್ನೂ ಅಂತಿಮಗೊಳಿಸಿಲ್ಲ. ಆದರೆ ಬದಲಾವಣೆಗಳಾಗಬೇಕು ಅದು ಖಚಿತ" ಎಂದು ಗುಜರಾತ್ ಟೈಟಾನ್ ಫ್ರಾಂಚೈಸಿಯ ಮೂಲಗಳು ತಿಳಿಸಿವೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.