ಗಾಯವಾದಂತೆ ನಾಟಕವಾಡಿದ ಅಫ್ಘನ್ ಆಟಗಾರ!? ನಿನ್ನ ಆಕ್ಟಿಂಗ್’ಗೆ ಆಸ್ಕರ್ ಕೊಡ್ಬೇಕು ಗುರು ಅಂದ ಕ್ರಿಕೆಟ್ ದಿಗ್ಗಜ-ವಿಡಿಯೋ ವೈರಲ್
Gulbadin Naib Acting Video: ಸೆಮಿಫೈನಲ್’ನಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯವು ಟ್ರಿನಿಡಾಡ್’ನ ತರೋಬಾದ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ.
Gulbadin Naib Acting Video: ಬಾಂಗ್ಲಾದೇಶ ವಿರುದ್ಧ ಟಿ20 ವಿಶ್ವಕಪ್ ಸೂಪರ್-8ರ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ಜಯ ದಾಖಲಿಸಿದೆ. ರಶೀದ್ ಖಾನ್ ಅವರ ಈ ತಂಡವು ಇತಿಹಾಸವನ್ನು ಸೃಷ್ಟಿಸಿದ್ದು, ಮೊದಲ ಬಾರಿಗೆ T20 ವಿಶ್ವಕಪ್’ನ ಸೆಮಿಫೈನಲ್’ಗೆ ಟಿಕೆಟ್ ಪಡೆದಿದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನದ ವೇಗಿ ಗುಲ್ಬದಿನ್ ನೈಬ್ ಮಾಡಿದ ನಾಟಕವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಸೆಮಿಫೈನಲ್’ನಲ್ಲಿ ಅಫ್ಘಾನಿಸ್ತಾನವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಪಂದ್ಯವು ಟ್ರಿನಿಡಾಡ್’ನ ತರೋಬಾದ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಭಾರತೀಯ ಕಾಲಮಾನ ಬೆಳಿಗ್ಗೆ 6 ಗಂಟೆಗೆ ನಡೆಯಲಿದೆ.
ಇದನ್ನೂ ಓದಿ: ಅನುಷ್ಕಾಗೂ ಮುನ್ನ ಈ ನಟಿಯರ ಜೊತೆ ಡೇಟಿಂಗ್ ಮಾಡಿದ್ರು ವಿರಾಟ್! ಅದ್ರಲ್ಲಿ ಒಬ್ಬಳು ಕನ್ನಡದ ಪ್ರಖ್ಯಾತ ಹೀರೋಯಿನ್!!
ಸ್ಲಿಪ್’ನಲ್ಲಿ ನಿಂತಿದ್ದ ಗುಲ್ಬದಿನ್ ನೈಬ್ ತನ್ನ ಕಾಲಿಗೆ ಪೆಟ್ಟಾದಂತೆ ನಟಿಸುತ್ತಾ ಕುಸಿದು ಬಿದ್ದಿದ್ದಾರೆ. ಇದನ್ನು ನಿಜ ಎಂದು ನಂಬಿದ ಅಫ್ಘಾನಿಸ್ತಾನದ ತರಬೇತುದಾರ ಜೊನಾಥನ್ ಟ್ರಾಟ್, ಆಟಗಾರರ ಕಡೆಗೆ ತೋರಿಸಿ, ಆಟವನ್ನು ನಿಲ್ಲಿಸುವಂತೆ ಹೇಳಿದ್ದರು. ಇದರ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಇನ್ನು ಗುಲ್ಬದಿನ್’ಗೆ ಚಿಕಿತ್ಸೆ ನೀಡಿದ ನಂತರ ಅವರನ್ನು ಮೈದಾನದಿಂದ ಹೊರಗೆ ಕರೆದುಕೊಂಡು ಹೋಗಲಾಯಿತು. ಈ ಸಂದರ್ಭದಲ್ಲಿ ಜಿಂಬಾಬ್ವೆಯ ಕಾಮೆಂಟೇಟರ್ ಪೊಮ್ಮಿ ಎಂಬಾಗ್ವಾ, “ಯಾವುದೇ ಕಾರಣವಿಲ್ಲದೆ ಇದ್ದಕ್ಕಿದ್ದಂತೆ ಆಟಗಾರ ಕುಸಿದು ಬೀಳುವುದೆಂದರೆ ಅರ್ಥವೇನು? ಇದು ಸ್ವೀಕಾರಾರ್ಹವಲ್ಲ. ಈತನ ನಟನೆಗೆ ಆಸ್ಕರ್ ಅಥವಾ ಎಮ್ಮಿ ಪ್ರಶಸ್ತಿ ಕೊಡಬೇಕು” ಎಂದು ಹೇಳಿದರು.
ಇದನ್ನೂ ಓದಿ: “ಈಕೆಯ ಮಗುವಾಗಿ ಮರುಜನ್ಮ ಪಡೆಯುವೆ”- ರಾಮಚಂದ್ರ ಗುರೂಜಿ ಬಳಿ ಮಾತನಾಡಿದ ಪುನೀತ್ ರಾಜ್ ಕುಮಾರ್ ಆತ್ಮ ಹೇಳಿದ್ದೇನು?
ಇಷ್ಟೆಲ್ಲಾ ನಡೆದ ಬಳಿಕ, 13ನೇ ಓವರ್’ನಲ್ಲಿ ಮೈದಾನಕ್ಕೆ ಮರಳಿದ ನೈಬ್ 15ನೇ ಓವರ್’ನಲ್ಲಿ ತಂಝೀಮ್ ಹಸನ್ ವಿಕೆಟ್ ಪಡೆದರು. ಈ ಬೆನ್ನಲೇ ಭಾರತದ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ “ಗುಲ್ಬದಿನ್ ನೈಬ್’ಗೆ ರೆಡ್ ಕಾರ್ಡ್” ಎಂದು ತಮಾಷೆಯಾಗಿ ಪೋಸ್ಟ್ ಶೇರ್ ಮಾಡಿದ್ದರು. ಜೊತೆಗೆ ಇಂಗ್ಲೆಂಡ್’ನ ಮಾಜಿ ನಾಯಕ ಮೈಕಲ್ ವಾನ್ ಕೂಡ, “ಕ್ರಿಕೆಟ್ ಉತ್ಸಾಹ ಜೀವಂತವಾಗಿದೆ. ಬಿದ್ದು 25 ನಿಮಿಷಗಳ ನಂತರ ಮರಳಿ ಬಂದು ವಿಕೆಟ್ ಪಡೆದ ಗುಲ್ಬದಿನ್ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು” ಎಂದು ವ್ಯಂಗ್ಯವಾಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.