ಚೊಚ್ಚಲ ಟೆಸ್ಟ್ ಶತಕ ಗಳಿಸಿ ತಂದೆಗೆ ಅರ್ಪಿಸಿದ ಹನುಮ ವಿಹಾರಿ
ಶನಿವಾರ ಜಮೈಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿ ತಂದೆಗೆ ಅರ್ಪಿಸಿದ್ದಾರೆ.
ನವದೆಹಲಿ: ಶನಿವಾರ ಜಮೈಕಾದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ ಗಳಿಸಿ ತಂದೆಗೆ ಅರ್ಪಿಸಿದ್ದಾರೆ.
12ನೇ ವಯಸ್ಸಿನಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡ ಹನುಮ ವಿಹಾರಿ ವೆಸ್ಟ್ ಇಂಡೀಸ್ ವಿರುದ್ಧದ ಶತಕವನ್ನು ಅವರಿಗೆ ಸಮರ್ಪಿಸಿದ್ದಾರೆ. ಅಲ್ಲದೆ ತಮ್ಮ ಜೊತೆ ಉತ್ತಮ ಸಾಥ್ ನೀಡಿದ ಸಹ ಆಟಗಾರ ಇಶಾಂತ್ ಶರ್ಮಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.ಹನುಮಾ ವಿಹಾರಿ 16 ಬೌಂಡರಿಗಳು ಸೇರಿದಂತೆ 225 ಎಸೆತಗಳಲ್ಲಿ 111 ರನ್ ಗಳಿಸಿದರು.ಭಾರತ ಎಲ್ಲ ವಿಕೆಟ್ ಕಳೆದುಕೊಂಡು 416 ರನ್ ಗಳಿಸಿತು.
ತಮ್ಮ ಚೊಚ್ಚಲ ಶತಕದ ಕುರಿತಾಗಿ ಮಾತನಾಡಿರುವ ಹನುಮ ವಿಹಾರಿ 'ವಾಸ್ತವವಾಗಿ, ನಾನು 12 ವರ್ಷದವನಿದ್ದಾಗ ನನ್ನ ತಂದೆ ತೀರಿಕೊಂಡರು, ನಾನು ಅಂತರರಾಷ್ಟ್ರೀಯ ಕ್ರಿಕೆಟ್ ಆಡುವಾಗ ನನ್ನ ಮೊದಲ ಶತಕವನ್ನು ಅವನಿಗೆ ಅರ್ಪಿಸಲು ಬಯಸುತ್ತೇನೆ ಎಂದು ನಾನು ನಿರ್ಧರಿಸಿದ್ದೇನೆ. ಇಂದು ಭಾವನಾತ್ಮಕ ದಿನವಾಗಿದೆ ಮತ್ತು ಅವರು ಎಲ್ಲಿದ್ದರೂ ನನ್ನ ಬಗ್ಗೆ ಹೆಮ್ಮೆಪಡುತ್ತಾರೆ ಎಂದು ನಾನು ಭಾವಿಸುತ್ತೇನೆ ಮತ್ತು ನಾನು ಅದನ್ನು ಸಾಧಿಸಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ" ಎಂದು ಅವರು ಹೇಳಿದರು.
ಮೊದಲ ಅರ್ಧಶತಕವನ್ನು ಗಳಿಸಿದ ಇಶಾಂತ್ (80 ಎಸೆತಗಳಲ್ಲಿ 57), ವಿಹಾರಿ ಜೊತೆಗೂಡಿ ಎಂಟನೇ ವಿಕೆಟ್‌ಗೆ 28.3 ಓವರ್‌ಗಳಲ್ಲಿ 112 ರನ್ ಜೊತೆಯಾಟವಾಡಿದ್ದು ವಿಂಡೀಸ್ ಬೌಲರನ್ನು ಬೆವರಿಳಿಸುವಂತಾಯಿತು. ಇದೇ ವೇಳೆ ತಮಗೆ ಸಾಥ್ ನೀಡಿದ ಇಶಾಂತ್ ಶರ್ಮಾ ಅವರನ್ನು ವಿಹಾರಿ ಸ್ಮರಿಸಿದರು.ನನಗೆ ಶತಕ ಗಳಿಸಿದ್ದು ಸಂತಸವಾಗಿದೆ ಆದರ ಶ್ರೇಯ ಇಶಾಂತ್ ಗೆ ಹೋಗಬೇಕು' ಎಂದರು.
ಇನ್ನೊಂದೆಡೆ ಬ್ಯಾಟಿಂಗ್ ಆರಂಭಿಸಿರುವ ವೆಸ್ಟ್ ಇಂಡೀಸ್ ತಂಡಕ್ಕೆ ಜಸ್ಪ್ರಿತ್ ಬುಮ್ರಾ 6 ವಿಕೆಟ್ ಗಳನ್ನು ಪಡೆಯುವ ಮೂಲಕ ಅಪಾಯಕಾರಿಯಾಗಿ ಪರಿಣಮಿಸಿದರು. ಸದ್ಯ ವೆಸ್ಟ್ ಇಂಡೀಸ್ 7 ವಿಕೆಟ್ ನಷ್ಟಕ್ಕೆ 87 ರನ್ ಗಳಿಸಿದೆ.