23 ಶತಕ, 45 ಅರ್ಧಶತಕ ಬಾರಿಸಿದ ಈ ಕ್ರಿಕೆಟಿಗ Team India ಬಿಟ್ಟು ಬೇರೆ ತಂಡಕ್ಕೆ ಜಂಪ್! ಖುಲಾಯಿಸುತ್ತಾ ಲಕ್?
Hanuma Vihari: ಹನುಮ ವಿಹಾರಿ ಈ ದೇಶೀಯ ಋತುವಿನಲ್ಲಿ ಮಧ್ಯಪ್ರದೇಶ ತಂಡದೊಂದಿಗೆ ಆಡಲು ಸಿದ್ಧರಾಗಿದ್ದಾರೆ. ಆದರೆ, ಇಡೀ ವಿಷಯವು ಈಗ ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ACA) ನಿಂದ NOC ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ.
Hanuma Vihari: 29ರ ಹರೆಯದ ಹನುಮ ವಿಹಾರಿ ಕೆಲ ದಿನಗಳಿಂದ ಟೀಂ ಇಂಡಿಯಾದ ಭಾಗವಾಗಲು ಸಾಧ್ಯವಾಗುತ್ತಿಲ್ಲ. ಅವರು ಪ್ರಸ್ತುತ ದುಲೀಪ್ ಟ್ರೋಫಿಯಲ್ಲಿ ದಕ್ಷಿಣ ವಲಯದ ನಾಯಕರಾಗಿದ್ದಾರೆ. ಇದೀಗ ಟೀಂ ಇಂಡಿಯಾಗೆ ಕಮ್ ಬ್ಯಾಕ್ ಮಾಡಲು ಹನುಮ ವಿಹಾರಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಈ ಋತುವಿನಲ್ಲಿ ಹೊಸ ತಂಡದೊಂದಿಗೆ ರಣಜಿ ಟ್ರೋಫಿಯನ್ನು ಆಡಲಿದ್ದಾರೆ. ಹನುಮ ವಿಹಾರಿ ಇದುವರೆಗೆ ಆಂಧ್ರಪ್ರದೇಶ ತಂಡದಿಂದ ದೇಶಿ ಕ್ರಿಕೆಟ್ ಆಡುತ್ತಿದ್ದರು.
ಇದನ್ನೂ ಓದಿ: 1 ಟೆಸ್ಟ್’ನಲ್ಲಿ 11 ವಿಕೆಟ್ ಕಿತ್ತ ಘಾತಕ ಆಲ್’ರೌಂಡರ್ Team Indiaಗೆ ಎಂಟ್ರಿ: ವಿಂಡೀಸ್ ಸರಣಿಯಲ್ಲಿ ಭಾರತಕ್ಕೆ ಆನೆಬಲ!
ಹನುಮ ವಿಹಾರಿ ಈ ದೇಶೀಯ ಋತುವಿನಲ್ಲಿ ಮಧ್ಯಪ್ರದೇಶ ತಂಡದೊಂದಿಗೆ ಆಡಲು ಸಿದ್ಧರಾಗಿದ್ದಾರೆ. ಆದರೆ, ಇಡೀ ವಿಷಯವು ಈಗ ಅವರು ಆಂಧ್ರ ಕ್ರಿಕೆಟ್ ಅಸೋಸಿಯೇಷನ್ (ACA) ನಿಂದ NOC ಪಡೆಯುತ್ತಾರೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿದೆ. ಹೊಸ ತಂಡದ ಮೂಲಕ ಹನುಮ ವಿಹಾರಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸಲಿದ್ದಾರೆ. ವರದಿಗಳ ಪ್ರಕಾರ, ವಿಹಾರಿ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಅಡಿಯಲ್ಲಿ ಆಡಲು ಬಯಸಿದ್ದರು, ಅದಕ್ಕಾಗಿಯೇ ಅವರು ತಮ್ಮ ರಾಜ್ಯವನ್ನು ಬದಲಾಯಿಸಿದ್ದಾರೆ.
ಹನುಮ ವಿಹಾರಿ ಕಳೆದ ವರ್ಷ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ಹ್ಯಾಮ್ ನಲ್ಲಿ ಭಾರತಕ್ಕಾಗಿ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದರು. ಹನುಮ ವಿಹಾರಿ ಈ ಪಂದ್ಯದಲ್ಲಿ ಸೋಲು ಕಂಡಿದ್ದರು. ಇಂಗ್ಲೆಂಡ್ ವಿರುದ್ಧ ಬರ್ಮಿಂಗ್ ಹ್ಯಾಮ್ ನಲ್ಲಿ ಹನುಮ ವಿಹಾರಿ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 20 ರನ್ ಮತ್ತು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 11 ರನ್ ಗಳಿಸಲು ಶಕ್ತರಾದರು.
ಹನುಮ ವಿಹಾರಿ ಅವರು ತಮ್ಮ ವೃತ್ತಿಜೀವನವನ್ನು ಹೈದರಾಬಾದ್ ನಿಂದ ಪ್ರಾರಂಭಿಸಿದರು. ನಂತರ 2015-16ರ ಋತುವಿನಲ್ಲಿ ಆಂಧ್ರಪ್ರದೇಶದಿಂದ ಕ್ರಿಕೆಟ್ ಆಡಿದರು, 2021-22 ಋತುವಿನಲ್ಲಿ ಅವರು ಮತ್ತೊಮ್ಮೆ ಹೈದರಾಬಾದ್‌ಗೆ ಹೋಗಿ ಆಂಧ್ರಪ್ರದೇಶದಿಂದ ಮತ್ತೆ ಕೊನೆಯ ಋತುವಿನಲ್ಲಿ ಆಡಿದರು. ವಿಹಾರಿ ಈ ಹಿಂದೆ ದೇಶೀಯ ಕ್ರಿಕೆಟ್‌ನಲ್ಲಿ ಆಂಧ್ರಪ್ರದೇಶ ರಣಜಿ ತಂಡದ ನಾಯಕರಾಗಿದ್ದರು. ಅವರು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 113 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 23 ಶತಕ ಹಾಗೂ 45 ಅರ್ಧಶತಕ ಸೇರಿದಂತೆ 53.41ರ ಸರಾಸರಿಯಲ್ಲಿ 8600 ರನ್ ಗಳು ಕಲೆ ಹಾಕಿದ್ದಾರೆ.
ಇದನ್ನೂ ಓದಿ: Most Centuries: ಆಸ್ಟ್ರೇಲಿಯಾ ಪರ ಅತಿಹೆಚ್ಚು ಟೆಸ್ಟ್ ಶತಕ ಗಳಿಸಿದ ಟಾಪ್ 5 ಆಟಗಾರರು!
ಇನ್ನೊಂದೆಡೆ ಟೀಂ ಇಂಡಿಯಾ ಪರ 16 ಟೆಸ್ಟ್ ಗಳಲ್ಲಿ 33.56 ಸರಾಸರಿಯಲ್ಲಿ 839 ರನ್ ಗಳಿಸಿದ್ದಾರೆ. ಭಾರತದ ಪರ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದು ಶತಕ ಮತ್ತು 5 ಅರ್ಧ ಶತಕಗಳನ್ನು ಗಳಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ