ಅಂತಾರಾಷ್ಟೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಭಾರಿ ಡಕೌಟ್ ಆದ ಟೀಂ ಇಂಡಿಯಾದ ಆಟಗಾರರಿವರು..
Cricketers with highest duckouts: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾದಲ್ಲಿ ಬ್ಯಾಟರ್‌ಗಳು ಫೀಲ್ಡ್‌ಗೆ ಇಳಿದರೆ ರನ್‌ಗಳ ಸುರಿಮಳೆ ಆಗಲಿದೆ ಎಂದೇ ಅರ್ಥ, ಆದರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಭಾರಿ ಡಕ್‌ಔಟ್ ಆಗಿದ್ದ ಟೀಂ ಇಂಡಿಯಾದ ಆ ಆಟಗಾರರು ಯಾರು ಎಂದು ತಿಳಿಯಲು, ಮುಂದೆ ಓದಿ...
Cricketers with highest duckouts: ಶ್ರೀಲಂಕಾ ಪ್ರವಾಸದ ನಂತರ ಟೀಂ ಇಂಡಿಯಾ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನೆ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಟೀಂ ಇಂಡಿಯಾದಲ್ಲಿ ಬ್ಯಾಟರ್‌ಗಳು ಫೀಲ್ಡ್‌ಗೆ ಇಳಿದರೆ ರನ್‌ಗಳ ಸುರಿಮಳೆ ಆಗಲಿದೆ ಎಂದೇ ಅರ್ಥ, ಆದರೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ ಅತಿ ಹೆಚ್ಚು ಭಾರಿ ಡಕ್‌ಔಟ್ ಆಗಿದ್ದ ಟೀಂ ಇಂಡಿಯಾದ ಆ ಆಟಗಾರರು ಯಾರು ಎಂದು ತಿಳಿಯಲು, ಮುಂದೆ ಓದಿ...
ಪ್ರಸ್ತುತ ಟೆಸ್ಟ್ ಕ್ರಿಕೆಟ್ ಸೀಸನ್ ಆರಂಭವಾಗಿದೆ, ಒಂದೆಡೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಟೆಸ್ಟ್ ಸರಣಿ ನಡೆಯುತ್ತಿದ್ದರೆ, ಇನ್ನೊಂದೆಡೆ ಇಂಗ್ಲೆಂಡ್ ಮತ್ತು ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ. ಸದ್ಯ ಟೀಂ ಇಂಡಿಯಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯುತ್ತಿದೆ. ರೋಹಿತ್ ಸೇನಾ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದ್ದು, ಇದಕ್ಕೂ ಮುಂಚಿತವಾಗಿ ದುಲೀಪ್ ಟ್ರೋಫಿಯಲ್ಲಿ ಟೀಂ ಇಂಡಿಯಾದ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ.
ಹರ್ಭಜನ್ ಸಿಂಗ್
ಭಾರತದ ಮಾಜಿ ಆಟಗಾರ ಹಾಗೂ ಸ್ಪಿನ್ನರ್ ಹರ್ಭಜನ್ ಸಿಂಗ್ ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ ಭಾರತಕ್ಕಾಗಿ 103 ಟೆಸ್ಟ್, 236 ODI ಮತ್ತು 28 T20I ಗಳನ್ನು ಆಡಿದ್ದಾರೆ. ಬೌಲಿಂಗ್‌ನಲ್ಲಿ ಭಾರತದ ಪರವಾಗಿ ಭಜ್ಜಿ ಟೆಸ್ಟ್‌ನಲ್ಲಿ 417, ಏಕದಿನದಲ್ಲಿ 269 ಮತ್ತು ಟಿ20 ಕ್ರಿಕೆಟ್‌ನಲ್ಲಿ 25 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಬೌಲಿಂಗ್‌ಗೆ ಇಳಿದರೆ ಎದುರಾಲಿ ತಂಡದ ಆಟಗಾರರ ಬೆವರಿಳಿಸುವ ಹರ್ಭಜನ್ ಸಿಂಗ್ ಹೆಚ್ಚು ಭಾರಿ ಡಕ್ ಔಟ್ ಆದ ಮೂರನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಧೊನಿ ಅಲ್ಲ ಭಾರತದ ಶ್ರೀಮಂತ ಕ್ರಿಕೆಟಿಗ ಈತ!ಯಾರು ಗೊತ್ತಾ?
ಇಶಾಂತ್ ಶರ್ಮಾ
ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶರ್ಮಾ ಭಾರತ ಪರ ಇದುವರೆಗೆ 105 ಟೆಸ್ಟ್, 80 ಏಕದಿನ ಮತ್ತು 14 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇಶಾಂತ್ ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 115 ಮತ್ತು ಟಿ20ಯಲ್ಲಿ 8 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಇಶಾಂತ್ ಶರ್ಮಾ ಹೆಚ್ಚು ಭಾರಿ ಡಕ್ ಔಟ್ ಆದ ಎರಡನೇ ಭಾರತೀಯ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ.
ಜಹೀರ್ ಖಾನ್
ಭಾರತದ ಮಾಜಿ ವೇಗಿ ಜಹೀರ್ ಖಾನ್ ಟೀಂ ಇಂಡಿಯಾ ಪರ ಸುದೀರ್ಘ ಕಾಲ ಕ್ರಿಕೆಟ್ ಆಡಿದ್ದರು. ಜಹೀರ್ 2011 ರಲ್ಲಿ ವಿಶ್ವಕಪ್ ಚಾಂಪಿಯನ್ ಟೀಮ್ ಇಂಡಿಯಾದ ಸದಸ್ಯರಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಜಹೀರ್ ಭಾರತಕ್ಕಾಗಿ 92 ಟೆಸ್ಟ್, 200 ODI ಮತ್ತು 17 T20I ಗಳನ್ನು ಆಡಿದ್ದಾರೆ. ಟೆಸ್ಟ್‌ನಲ್ಲಿ 311, ಏಕದಿನದಲ್ಲಿ 282 ಮತ್ತು ಟಿ20ಯಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ. ಆದರೆ, ಜಹೀರ್ ಖಾನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಭಾರಿ ಡಕೌಟ್ ಆದ ಟೀಂ ಇಂಡಿಯಾದ ಆಟಗಾರರ ಪಟ್ಟಿಯಲ್ಲಿ ಮೊದಲನೆ ಸ್ಥಾನದಲ್ಲಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.