ನವದೆಹಲಿ: ಟೀಮ್ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಅವರ ಮನೆಗೆ ಖುಷಿ ಪ್ರವೇಶಿಸಿದ್ದು, ಪಾಂಡ್ಯಾಗೆ ತಂದೆಯಾಗುವ ಭಾಗ್ಯ ಲಭಿಸಿದೆ. ಅವರ ನಿಶ್ಚಿತ ವಧು ನತಾಶಾ ಸ್ಟಾಂಕೋವಿಚ್ ಗಂಡುಮಗುವಿಗೆ ಜನ್ಮ ನೀಡಿದ್ದಾಳೆ. ಸ್ವತಃ ಹಾರ್ದಿಕ್ ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಮಗನ ಚಿತ್ರವನ್ನು ಹಂಚಿಕೊಂಡಿರುವ ಪಾಂಡ್ಯಾ 'ನಮ್ಮ ಮನೆಯಲ್ಲಿ ಗಂಡು ಮಗು ಜನಿಸಿದೆ' ಎಂದು ಬರೆದುಕೊಂಡಿದ್ದಾರೆ. ಆದರೆ, ತಮ್ಮ ಪುತ್ರನ ಮುಖವನ್ನು ಅವರು ಮರೆಮಾಚಿದ್ದಾರೆ.



COMMERCIAL BREAK
SCROLL TO CONTINUE READING

ಇದಕ್ಕೂ ಮೊದಲು ಹಾರ್ದಿಕ್ ಪಾಂಡ್ಯಾ ಅವರ ಮನೆಯಲ್ಲಿ ನತಾಷಾಗೆ ಬೇಬಿ ಶಾವರ್ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇಳೆ ನತಾಷಾ ಹಸಿರು ಬಣ್ಣದ ಉಡುಗೆ ಧರಿಸಿದ್ದಳು ಹಾಗೂ ಅವಳ ಈ ಚಿತ್ರಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಬೇಬಿ ಶಾವರ್ ಕಾರ್ಯಕ್ರಮದಲ್ಲಿ ಪಾಂಡ್ಯಾ ಹಿರಿಯ ಅಣ್ಣ ಕ್ರುನಾಲ್ ಪಾಂಡ್ಯಾ, ಅತ್ತಿಗೆ ಪಾಖುಂಡಿ ಶರ್ಮಾ ಕೂಡ ಶಾಮೀಲಾಗಿದ್ದರು. ನತಾಷಾ ಗರ್ಭಿಣಿ ಅವಸ್ಥೆಯಲ್ಲಿದ್ದಾಗ ತನ್ನ ಬೇಬಿ ಬಂಪ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಿರಂತರವಾಗಿ ಹಂಚಿಕೊಂಡಿದ್ದಳು.



ಜನವರಿ 1, 2020 ರಂದು ತಾವು ಸರ್ಬಿಯಾದ ಪ್ರಜೆಯಾಗಿರುವ ಹಾಗೂ ಬಾಲಿವುಡ್ ನಟಿಯಾಗಿರುವ ನತಾಷಾ ಸ್ಟಾಂಕೋವಿಚ್ ಜೊತೆಗೆ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಘೋಷಿಸಿದ್ದರು. ಈ ವೇಳೆ ಕ್ಯಾಪ್ಶನ್ ಬರೆದುಕೊಂಡಿದ್ದ ಹಾರ್ದಿಕ್ 'ಮೈ ತೇರಾ, ಟೂ ಮೇರಿ ಜಾನೆ, ಸಾರಾ ಹಿಂದುಸ್ತಾನ್' ಎಂದಿದ್ದರು.