IND vs SA : ಅಪಾಯದಲ್ಲಿದೆ ಈ ಆಟಗಾರನ ವೃತ್ತಿ ಜೀವನ! 2ನೇ ಟಿ20ಯಲ್ಲೂ ಪಂತ್ ನೀಡಿಲ್ಲ ಚಾನ್ಸ್!
ತಂಡದ ಕಳಪೆ ಬೌಲಿಂಗ್‌ನಿಂದಾಗಿ ಭಾರತ ಸೋಲನುಭವಿಸಿತು, ಹೀಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ XI ನಲ್ಲಿ ಬದಲಾವಣೆ ಇದೆ, ಆದರೆ ಯುವ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಗುವುದು ಇನ್ನೂ ಕಷ್ಟಕರವಾಗಿದೆ.
IND vs SA : ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಎರಡನೇ ಟಿ20 ಪಂದ್ಯವು ಟೀಂ ಇಂಡಿಯಾಕ್ಕೆ ಬಹಳ ಮಹತ್ವದ್ದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲು ಕಂಡಿತ್ತು. ತಂಡದ ಕಳಪೆ ಬೌಲಿಂಗ್‌ನಿಂದಾಗಿ ಭಾರತ ಸೋಲನುಭವಿಸಿತು, ಹೀಗಾಗಿ ಟೀಂ ಇಂಡಿಯಾ ಪ್ಲೇಯಿಂಗ್ XI ನಲ್ಲಿ ಬದಲಾವಣೆ ಇದೆ, ಆದರೆ ಯುವ ಆಟಗಾರನಿಗೆ ತಂಡದಲ್ಲಿ ಸ್ಥಾನ ಸಿಗುವುದು ಇನ್ನೂ ಕಷ್ಟಕರವಾಗಿದೆ.
ಪ್ಲೇಯಿಂಗ್ XI ನಿಂದ ಹೊರಗಿಡಲಾಗಿದೆ ಈ ಆಟಗಾರನನ್ನು
ಟೀಂ ಇಂಡಿಯಾ ಕ್ಯಾಪ್ಟನ್ ರಿಷಬ್ ಪಂತ್ ಈ ಸರಣಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಬಹುದು, ಆದರೆ 27 ವರ್ಷದ ಆಲ್ ರೌಂಡರ್ ವೆಂಕಟೇಶ್ ಅಯ್ಯರ್ ಆಡುವ XI ನಲ್ಲಿ ಸ್ಥಾನ ಪಡೆಯುವುದು ಕಷ್ಟಕರವಾಗಿದೆ. ಹಾರ್ದಿಕ್ ಪಾಂಡ್ಯ ಅವರನ್ನು ಆಲ್ ರೌಂಡರ್ ಆಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ವೆಂಕಟೇಶ್ ಅಯ್ಯರ್ ಅವರನ್ನು ಪ್ಲೇಯಿಂಗ್ XI ನಿಂದ ಹೊರಗಿಡಲಾಗಿದೆ.
ಇದನ್ನೂ ಓದಿ : "ಇಂಗ್ಲಿಷ್ ಪ್ರೀಮಿಯರ್ ಲೀಗ್‌ಗಿಂತ ಐಪಿಎಲ್ ಹೆಚ್ಚಿನ ಆದಾಯವನ್ನು ಗಳಿಸುತ್ತಿದೆ"
ವೃತ್ತಿ ಜೀವನದ ಮೇಲೆ ಭಯ
ವೆಂಕಟೇಶ್ ಅಯ್ಯರ್ ಗೆ ಟಿ 20 ವಿಶ್ವಕಪ್ 2021 ರಿಂದ ನಿರಂತರವಾಗಿ ಟೀಂ ಇಂಡಿಯಾದ ಪ್ಲೇಯಿಂಗ್ XI ನ ಭಾಗವಾಗಿದ್ದರು, ಆದರೆ ಆ ಸಮಯದಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡಿದ್ದರು. ಹಾರ್ದಿಕ್ ಪಾಂಡ್ಯ ಮರಳುವುದರೊಂದಿಗೆ ವೆಂಕಟೇಶ್ ಅಯ್ಯರ್ ಅವರ ವೃತ್ತಿಜೀವನದ ಮೇಲೆ ತುಂಬಾ ಪ್ರಭಾವ ಬೀರುತ್ತಿದೆ. ಅಯ್ಯರ್ ನನ್ನ ಈಗ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಬ್ಯಾಕಪ್ ಆಗಿ ಇರಿಸಲಾಗಿದೆ.
ಕಳಪೆ ಫಾರ್ಮ್‌ನಲ್ಲಿ ಅಯ್ಯರ್
ಟೀಂ ಇಂಡಿಯಾದಲ್ಲಿ ತಮ್ಮ ಅದ್ಭುತ ಆಟದ ಮೂಲಕ ಛಾಪು ಮೂಡಿಸಿರುವ ವೆಂಕಟೇಶ್ ಅಯ್ಯರ್ ಅತ್ಯಂತ ಕಳಪೆ ಫಾರ್ಮ್‌ನಿಂದ ಸಂಕಷ್ಟದಲ್ಲಿದ್ದಾರೆ. ಐಪಿಎಲ್ 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪರ ಆಡುವಾಗ ವೆಂಕಟೇಶ್ ಅಯ್ಯರ್ ಅತ್ಯಂತ ಕಳಪೆ ಪ್ರದರ್ಶನ ನೀಡಿದರು. ಅವರು ಐಪಿಎಲ್ 2022 ರಲ್ಲಿ 16.55 ರ ಸರಾಸರಿಯಲ್ಲಿ ಆಡಿದ 12 ಪಂದ್ಯಗಳಲ್ಲಿ ಕೇವಲ 182 ರನ್ ಗಳಿಸಿದರು. ಕಳಪೆ ಆಟದ ಕಾರಣ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಇದನ್ನೂ ಓದಿ : Ind vs SA : ಎರಡನೇ ಟಿ20ಯಿಂದ ದಿನೇಶ್ ಕಾರ್ತಿಕ್ ಔಟ್! ಈ ಆಟಗಾರನಿಗೆ ಅವಕಾಶ ನೀಡಬೇಕು?
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.