Hardik Pandya Ananya Pandey: ಭಾರತದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿ ನತಾಶಾ ಅವರಿಂದ ವಿಚ್ಛೇದನ ಪಡೆದಿದ್ದಾರೆ. ನಾಲ್ಕು ವರ್ಷಗಳ ದಾಂಪತ್ಯಕ್ಕೆ ಈ ಮೂಲಕ ಅಂತ್ಯ ಹಾಡಿದ್ದಾರೆ. ಇದಾದ ಬಳಿಕ ಹಾರ್ದಿಕ್ ಪಾಂಡ್ಯ‌ ಹೆಸರು ಖ್ಯಾತ ಬಾಲಿವುಡ್‌ ನಟಿ ಜೊತೆ ಸೇರಿಕೊಂಡಿದೆ. ಅನಂತ್ ಅಂಬಾನಿ ರಾಧಿಕಾ ಮದುವೆ ಬಳಿಕವಂತೂ ಹಲವಾರು ವದಂತಿಗಳು ಶುರುವಾಗಿವೆ. 


COMMERCIAL BREAK
SCROLL TO CONTINUE READING

ಹಾರ್ದಿಕ್ ಪಾಂಡ್ಯ ಮತ್ತು ಅನನ್ಯಾ ಪಾಂಡೆ Instagram ನಲ್ಲಿ ಒಬ್ಬರನ್ನೊಬ್ಬರು ಫಾಲೋ ಮಾಡಲು ಆರಂಭಿಸಿದ್ದಾರೆ. ಈ ಬೆನ್ನಲ್ಲೇ ಇಬ್ಬರ ನಡುವೆ ಏನೋ ಶುರುವಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ.  ಅಲ್ಲದೇ ಅನಂತ್ ಅಂಬಾನಿ ಮದುವೆಯಲ್ಲೂ ಹಾರ್ದಿಕ್‌ ಮತ್ತು ಅನನ್ಯಾ ಒಟ್ಟಾಗಿ ಕಾಣಿಸಿಕೊಂಡಿದ್ದರು.


ಇದನ್ನೂ ಓದಿ: ಹುಡುಗಿಯರೊಂದಿಗೆ ಮೋಜು ಮಸ್ತಿ ಮಾಡಿ ಸಿಕ್ಕಿಬಿದ್ದ ಶ್ರೇಯಸ್‌ ಐಯ್ಯರ್‌..ಸಾಮಾಜಿಕ ಜಾಲತಾಣದಲ್ಲಿ ಆಟಗಾರನ ಫೋಟೋಸ್‌ ಫುಲ್‌ ವೈರಲ್‌..!


ಮದುವೆಯಲ್ಲಿ ಅನನ್ಯಾ ಪಾಂಡೆಯೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಇವರಿಬ್ಬರು ಡ್ಯಾನ್ಸ್ ಮಾಡಿ ಪರಸ್ಪರ ಖುಷಿ ಪಡುತ್ತಿರುವ ವಿಡಿಯೋಗಳು ವೈರಲ್ ಆಗಿದ್ದು, ಊಹಾಪೋಹವನ್ನು ಮತ್ತಷ್ಟು ಹೆಚ್ಚಿಸಿದೆ. ‌


ಸಾಮಾಜಿಕ ಮಾಧ್ಯಮಗಳಲ್ಲಿ ಪಾಂಡ್ಯ, ಅನನ್ಯಾ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ವದಂತಿಯೂ ಶುರುವಾಗಿದೆ. ಬಾಲಿವುಡ್ ನಟಿ ಅನನ್ಯಾ ಪಾಂಡೆ ಈ ಹಿಂದೆ ನಟ ಆದಿತ್ಯ ರಾಯ್ ಕಪೂರ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಇತ್ತೀಚಿನ ವರದಿಗಳ ಪ್ರಕಾರ ಅನನ್ಯಾ ಮತ್ತು ಆದಿತ್ಯ ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. 


ಹಾರ್ದಿಕ್ ಪಾಂಡ್ಯ ಮತ್ತು ಅನನ್ಯಾ ಪಾಂಡೆ ಇಬ್ಬರೂ ಅನೇಕ ಬಾರಿ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.  


ಇದನ್ನೂ ಓದಿ: IPL 2025: ಯುವ ಆಟಗಾರರಿಗಾಗಿ ಧೋನಿ ತ್ಯಾಗ..CSK ತಂಡ ತೊರದೇ ಬಿಟ್ರಾ ಮಾಹಿ..?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.