ರಾಹುಲ್, ಸೂರ್ಯ ಬದಲು ಈ ಆಟಗಾರ ಭಾರತದ ಮುಂದಿನ ODI ನಾಯಕ! 30ರ ಹರೆಯದ ಜೂ.ಕಪಿಲ್ ದೇವ್’ಗೆ ಸಿಗಲಿದೆ ಕ್ಯಾಪ್ಟನ್ಸಿ
Team India ODI Captain: 2023ರ ಏಕದಿನ ವಿಶ್ವಕಪ್’ನ ಸೋಲಿನ ನಂತರ, 36 ವರ್ಷದ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಟೀಮ್ ಇಂಡಿಯಾದ ಹೊಸ ನಾಯಕನನ್ನಾಗಿ ಮಾಡುವ ಎಲ್ಲಾ ಸಾಧ್ಯತೆಗಳಿವೆ.
Team India ODI Captain: 2023ರ ವಿಶ್ವಕಪ್’ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 6 ವಿಕೆಟ್’ಗಳ ಸೋಲನ್ನು ಎದುರಿಸಬೇಕಾಯಿತು. ಇದರೊಂದಿಗೆ 12 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಟ್ರೋಫಿ ಗೆಲ್ಲುವ ಭಾರತದ ಕನಸು ಭಗ್ನಗೊಂಡಿದೆ. ಮುಂಬರುವ ದಿನಗಳಲ್ಲಿ 36ರ ಹರೆಯದ ರೋಹಿತ್ ಶರ್ಮಾ ತಮ್ಮ ನಾಯಕತ್ವ ಮತ್ತು ಕ್ರಿಕೆಟ್ ವೃತ್ತಿಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹೀಗಿರುವಾಗ ಟೀಂ ಇಂಡಿಯಾದ ಮುಂದಿನ ನಾಯಕ ಯಾರಾಗುತ್ತಾರೆ ಎಂಬುದು ಸದ್ಯದ ಪ್ರಶ್ನೆ.
ಇದನ್ನೂ ಓದಿ: ಬಿಗ್’ಬಾಸ್ ಆನೆ ವಿನಯ್ ಗೌಡ ಪ್ರತಿ ಎಪಿಸೋಡ್’ಗೆ ಪಡೆಯುವ ಸಂಭಾವನೆ ಎಷ್ಟು ಲಕ್ಷ ಗೊತ್ತಾ?
ಈ ಆಟಗಾರ ಮುಂದಿನ ದಿನಗಳಲ್ಲಿ ಏಕದಿನದಲ್ಲಿ ಟೀಂ ಇಂಡಿಯಾದ ಖಾಯಂ ನಾಯಕನಾಗಬಹುದು. 2023ರ ಏಕದಿನ ವಿಶ್ವಕಪ್’ನ ಸೋಲಿನ ನಂತರ, 36 ವರ್ಷದ ರೋಹಿತ್ ಶರ್ಮಾ ಬದಲಿಗೆ ಸ್ಟಾರ್ ಆಲ್’ರೌಂಡರ್ ಹಾರ್ದಿಕ್ ಪಾಂಡ್ಯ ಅವರನ್ನು ಟೀಮ್ ಇಂಡಿಯಾದ ಹೊಸ ನಾಯಕನನ್ನಾಗಿ ಮಾಡುವ ಎಲ್ಲಾ ಸಾಧ್ಯತೆಗಳಿವೆ.
ಹಾರ್ದಿಕ್ ಪಾಂಡ್ಯ ಅವರು ತಮ್ಮ ಚೊಚ್ಚಲ ನಾಯಕತ್ವದಲ್ಲೇ ಗುಜರಾತ್ ಟೈಟಾನ್ಸ್ ತಂಡವನ್ನು IPL 2022ರ ವಿಜೇತರನ್ನಾಗಿ ಮಾಡಿದ್ದರು.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ, ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಶೈಲಿಯ ಒಂದು ನೋಟವನ್ನು ಕಾಣಬಹುದು. ಬ್ಯಾಟಿಂಗ್ ಮಾಡುವಾಗ ಸಂಯಮದಿಂದ ಆಡುವ ಹಾರ್ದಿಕ್, 140 ಕಿಮೀ ವೇಗದಲ್ಲಿ ಬೌಲಿಂಗ್ ಕೂಡ ಮಾಡುತ್ತಾರೆ. ಫೀಲ್ಡಿಂಗ್’ನಲ್ಲೂ ಹಾರ್ದಿಕ್ ಪಾಂಡ್ಯಗೆ ಸರಿಸಾಟಿ ಯಾರೂ ಇಲ್ಲ. ಹಾರ್ದಿಕ್ ಪಾಂಡ್ಯ ಅವರನ್ನು ಭಾರತದ ಮಾಜಿ ನಾಯಕ ಕಪಿಲ್ ದೇವ್ ಎಂದೇ ಕರೆಯಲಾಗುತ್ತದೆ.
ಇದನ್ನೂ ಓದಿ: “ನನ್ನನ್ನು ಕ್ಷಮಿಸಿ” -ವಿಶ್ವಕಪ್ ಗೆದ್ದ ಬಳಿಕ ಭಾರತೀಯರ ಬಳಿ ಕ್ಷಮೆ ಕೇಳಿದ ವಾರ್ನರ್! ಕಾರಣವೇನು?
ಇವರ ಹೊರತಾಗಿ ರೋಹಿತ್ ಶರ್ಮಾ ನಂತರ ನಾಲ್ವರು ಆಟಗಾರರು ನಾಯಕ ಸ್ಥಾನದ ರೇಸ್’ನಲ್ಲಿದ್ದಾರೆ. ಕೆಎಲ್ ರಾಹುಲ್, ರಿಷಬ್ ಪಂತ್ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಈ ಹಿಂದೆ ನಾಯಕತ್ವದ ಸ್ಪರ್ಧಿಗಳೆಂದು ಪರಿಗಣಿಸಲಾಗಿತ್ತಿತ್ತು. ಆದರೆ ಈಗ ಹಾರ್ದಿಕ್ ನಾಯಕತ್ವದ ಈ ಓಟದಲ್ಲಿ ಕೊಂಚ ಮುಂಚೂಣಿಯಲ್ಲಿದ್ದಾರೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ