Shubman Gill : IPL 2024ರ ಹರಾಜಿನ ಮೊದಲು, ಎಲ್ಲಾ ಫ್ರಾಂಚೈಸಿಗಳು ಆಟಗಾರರನ್ನು ರಿಟೈನ್ ಮತ್ತು ರಿಲೀಜ್ ಮಾಡುತ್ತಿದೆ. ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು ಟ್ರೇಡ್ ಮಾಡಿದೆ ಎನ್ನವ ಸುದ್ದಿ ಇದೀಗ ಹೊರ ಬಿದ್ದಿದೆ. ಹಾಗಾಗಿ ಮೂಲಗಳ ಪ್ರಕಾರ ಇನ್ನು 2024 ರ ಐಪಿಎಲ್ ನಲ್ಲಿ ಗುಜರಾತ್ ಟೈಟಾನ್ಸ್ ನಾಯಕನಾಗಿ ಶುಭಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ.


COMMERCIAL BREAK
SCROLL TO CONTINUE READING

ಶುಭಮನ್ ಗಿಲ್ ನಾಯಕ! :
ಗುಜರಾತ್ ಟೈಟಾನ್ಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಐಪಿಎಲ್ 2024 ರಲ್ಲಿ ತಂಡದ ನಾಯಕತ್ವ ವಹಿಸಲಿದ್ದಾರೆ. ಆದರೆ, ಫ್ರಾಂಚೈಸಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ. ಇನ್ನು ಮುಂಬೈ ಇಂಡಿಯನ್ಸ್‌ಗೆ ಹಾರ್ದಿಕ್ ಪಾಂಡ್ಯ ಸೇರ್ಪಡೆಯಾಗುವ ಕುರಿತು ಬಿಸಿಸಿಐನ ಹಿರಿಯ ಅಧಿಕಾರಿ ಮತ್ತು ಐಪಿಎಲ್ ಆಡಳಿತ ಮಂಡಳಿಯ ಸದಸ್ಯರೊಬ್ಬರು ಮಾತನಾಡಿದ್ದಾರೆ. 'ಹೌದು, ಹಾರ್ದಿಕ್ ಅವರ 'ಟ್ರೇಡ್ ಆಫ್' ಸಂಜೆ 5 ಗಂಟೆಯ ನಂತರ ಪೂರ್ಣಗೊಂಡಿದೆ. ಈ ಒಪ್ಪಂದ  ಈಗ ಅಧಿಕೃತವಾಗಿದ್ದು, ಪಾಂಡ್ಯ ಈಗ ಮುಂಬೈ ಇಂಡಿಯನ್ಸ್ ಆಟಗಾರರಾಗಿದ್ದಾರೆ ಎಂದಿದ್ದಾರೆ. 


ಇದನ್ನೂ ಓದಿ : ಅರ್ಧಶತಕದ ಜೊತೆ ಧೋನಿಯ ಶ್ರೇಷ್ಠ ದಾಖಲೆ ಮುರಿದ ಇಶಾನ್ ಕಿಶನ್: ಈ ವಿಷಯದಲ್ಲಿ ಗುರುವನ್ನೇ ಮೀರಿಸಿಬಿಟ್ಟನಲ್ಲ ಶಿಷ್ಯ…!


ಹಾರ್ದಿಕ್‌ಗಾಗಿ 17.5 ಕೋಟಿ ರೂಪಾಯಿ ಮೌಲ್ಯದ ಆಟಗಾರನನ್ನು  ರಿಲೀಜ್ ಮಾಡಿದ ಮುಂಬೈ : 
ಮುಂಬೈ ಇಂಡಿಯನ್ಸ್ ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು 'ಆಲ್ ಕ್ಯಾಶ್'  ಡೀಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ  ಟ್ರೇಡ್ ಮಾಡಲಾಗಿದೆ. ಇದಾದ ನಂತರ, ಫ್ರಾಂಚೈಸ್ ಗುಜರಾತ್ ಟೈಟಾನ್ಸ್‌ನೊಂದಿಗೆ 'ಆಲ್ ಇನ್ ಕ್ಯಾಶ್ ಟ್ರೇಡ್' ಮಾಡಲು ಅಗತ್ಯವಾದ ಹಣವನ್ನು ಹೊಂದಿತ್ತು. ಐಪಿಎಲ್ 2023 ರ ಹರಾಜಿನಲ್ಲಿ ಮುಂಬೈ ಗ್ರೀನ್ ಅವರನ್ನು 17.5 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಾವತಿಸಿ ಖರೀದಿಸಿತ್ತು. ಆದ್ದರಿಂದ, ಅವರ  ಡೀಲ್ ಅನ್ನು ಹೊಂದಿಸುವವರೆಗೂ ಹಾರ್ದಿಕ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್  ಬಳಿ ಅಗತ್ಯ ಹಣ ಲಭ್ಯವಿರಲಿಲ್ಲ.


ಚೊಚ್ಚಲ ಸೀಸನ್ ನಲ್ಲೇ ಗುಜರಾತ್ ಚಾಂಪಿಯನ್  : 
ಐಪಿಎಲ್ 2022 ರಲ್ಲಿ ಪಾದಾರ್ಪಣೆ  ಮಾಡಿದ್ದ ಗುಜರಾತ್ ಟೈಟಾನ್ಸ್ ತಂಡ ಹಾರ್ದಿಕ್ ಪಾಂಡ್ಯ ಅವರನ್ನು 15 ಕೋಟಿ ರೂಪಾಯಿ ನೀಡಿ ತಂಡದ ನಾಯಕನನ್ನಾಗಿ ಮಾಡಿದೆ. ಪಾಂಡ್ಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ತಂಡದ ನಾಯಕತ್ವ ವಹಿಸಿ ಗುಜರಾತ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದರು.  ಇದಾದ ಬಳಿಕ ಮತ್ತೆ 2023ರಲ್ಲಿ ಫೈನಲ್‌ಗೆ ತಲುಪುವಲ್ಲಿ ಯಶಸ್ವಿಯಾಗಿದ್ದರು. ಆದರೆ, ಚೆನ್ನೈ ಸೂಪರ್ ಕಿಂಗ್ಸ್ ಕೈಯಲ್ಲಿ ಸೋಲು ಅನುಭವಿಸಬೇಕಾಯಿತು. ಮುಂಬೈ ಇಂಡಿಯನ್ಸ್ ತಮ್ಮ ಭವಿಷ್ಯದ ಯೋಜನೆಗಳನ್ನು ಗಮನದಲ್ಲಿಟ್ಟುಕೊಂಡು ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡಿದೆ. ಏಕೆಂದರೆ 2025 ರಲ್ಲಿ 'ಮೆಗಾ ಹರಾಜು' ನಡೆಯಲಿದೆ. ಈ ವೇಳೆ ಪ್ರತಿ ಫ್ರಾಂಚೈಸಿಯು ಯುವ ಆಟಗಾರರೊಂದಿಗೆ ಹೊಸ ತಂಡವನ್ನು ಕಟ್ಟಲು ಪ್ರಯತ್ನಿಸುತ್ತದೆ.


ಇದನ್ನೂ ಓದಿ : 4 4 4 6 6 0… ಬ್ಯಾಕ್ ಟು ಬ್ಯಾಕ್ ಸಿಕ್ಸರ್-ಬೌಂಡರಿ… ಟೀಂ ಇಂಡಿಯಾ ಆಟಗಾರನ ಅಬ್ಬರದ ‘ಯಶಸ್ವಿ’ ಅರ್ಧಶತಕ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ