Harmanpreet Kaur Breaks Silence: ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಭಾಗವಹಿಸುವ ಬಗ್ಗೆ ಆರಂಭದಲ್ಲಿ ಅನುಮಾನವಿತ್ತು. ಆದರೆ ನಂತರ ಕ್ರೀಸ್ ನಲ್ಲಿ ಕಾಣಿಸಿಕೊಂಡ ಅವರು ಅರ್ಧ ಶತಕವನ್ನೂ ಸಹ ಬಾರಿಸಿದ್ದರು. ಇನ್ನು ಅತ್ಯಂತ ವಿಲಕ್ಷಣ ಶೈಲಿಯಲ್ಲಿ ರನ್ ಔಟ್ ಆಗುವ ಮೊದಲು ಭಾರತವನ್ನು ಗೆಲುವಿನ ಸಮೀಪಕ್ಕೆ ಕೊಂಡೊಯ್ದರು. ಕೇವಲ 34 ಎಸೆತಗಳಲ್ಲಿ 52 ರನ್ ಗಳಿಸಿದ್ದರು ಹರ್ಮನ್.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂದು ಧೋನಿ, ಇಂದು ಹರ್ಮನ್: ಇದು ಅಭಿಮಾನಿಗಳ ಹೃದಯ ಒಡೆಯುವಂತೆ ಮಾಡಿದ ನಾಯಕರ ರನ್ ಔಟ್ ದೃಶ್ಯ!


ಆರು ಬೌಂಡರಿ ಮತ್ತು ಒಂದು ಸಿಕ್ಸರ್‌ನಿಂದ ಈ ರನ್ ಗಳಿಕೆ ಮಾಡಿದ್ದರು. ಆದರೆ ಮಧ್ಯದಲ್ಲಿಯೇ ಶಾಕಿಂಗ್ ರೀತಿಯಲ್ಲಿ ಅವರು ರನ್ ಔಟ್ ಆದರು. ಈ ಸನ್ನಿವೇಶವನ್ನು ದುರದೃಷ್ಟಕರ ಎಂದು ಒಪ್ಪಿಕೊಂಡ ಹರ್ಮನ್‌ಪ್ರೀತ್, ತಂಡವು ಹೆಚ್ಚಿನ ಪ್ರಯತ್ನವನ್ನು ಮಾಡಬೇಕಾಗಿದೆ ಎಂದು ಹೇಳಿದರು.


"ನಾನು ಮತ್ತು ಜೆಮಿ ಬ್ಯಾಟಿಂಗ್ ಮಾಡುವಾಗ ಆ ವೇಗವನ್ನು ಮರಳಿ ಪಡೆಯಲು ಸಾಧ್ಯವಾಗಲಿಲ್ಲ. ಇದಕ್ಕಿಂತ ದುರದೃಷ್ಟಕರ ಇನ್ನೊಂದಿಲ್ಲ. ಇಂದು ನಾವು ಇದನ್ನು ನಿರೀಕ್ಷಿಸಿರಲಿಲ್ಲ. ನಾನು ರನೌಟ್ ಆದ ರೀತಿಯು ಅದಕ್ಕಿಂತ ದುರದೃಷ್ಟ” ಎಂದು ಪಂದ್ಯದ ಬಳಿಕ ಹರ್ಮನ್‌ಪ್ರೀತ್ ಹೇಳಿದರು.


ಇನ್ನು 15 ನೇ ಓವರ್‌ನಲ್ಲಿನ ಒಂದು ವಿಲಕ್ಷಣ ಕ್ಷಣವು ಹರ್ಮನ್‌ಪ್ರೀತ್ ಅವರನ್ನು ತಾಳ್ಮೆ ಕಳೆದುಕೊಳ್ಳುವಂತೆ ಮಾಡಿತ್ತು. ಆಕೆಯ ಬ್ಯಾಟ್ ಸ್ಟ್ರೈಕರ್‌ನ ತುದಿಗೆ ಓಡುತ್ತಿರುವಾಗ ನೆಲಕ್ಕೆ ತಗುಲಿ ಅಲ್ಲೇ ಜಾಮ್ ಆಯಿತು. ಇದರ ಪರಿಣಾಮವೇ ಆಕೆ ರನ್ ಔಟ್ ಆಗಬೇಕಾಯಿತು.


ಹರ್ಮನ್‌ಪ್ರೀತ್ ಮತ್ತು ಜೆಮಿಮಾ ರೊಡ್ರಿಗಸ್ ನಡುವೆ 41 ಎಸೆತಗಳಲ್ಲಿ 69 ರನ್‌ಗಳ ಜೊತೆಯಾಟವಿತ್ತು. ಇದರ ಹೊರತಾಗಿಯೂ ಭಾರತ ತನ್ನ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆ ಹಾಕಿದೆ.  


"ನಾವು ಕೊನೆಯ ಎಸೆತದವರೆಗೂ ಹೋರಾಡಲು ಬಯಸಿದ್ದೆವು. ಇಂದು ನಾವು ಮೊದಲು ಚೇಸ್ ಮಾಡಲು ಬಯಸಿದ್ದೆವು ಆದ್ದರಿಂದ ಅವರು ಬ್ಯಾಟಿಂಗ್ ಆಯ್ಕೆ ಮಾಡಿದಾಗ ಅದು ಉತ್ತಮವಾಗಿತ್ತು. ಮೊದಲೆರಡು ವಿಕೆಟ್‌ಗಳನ್ನು ಕಳೆದುಕೊಂಡ ನಂತರವೂ ನಾವು ಉತ್ತಮ ಬ್ಯಾಟಿಂಗ್ ಲೈನ್‌ಅಪ್ ಹೊಂದಿದ್ದೇವೆ ಎಂದು ತಿಳಿದಿದ್ದೆವು. ನಾನು ಜೆಮಿಮಾ ಅವರಿಗೆ ಮನ್ನಣೆ ನೀಡಬೇಕು. ಅವರು ನಮಗೆ ಆ ವೇಗವನ್ನು ನೀಡಿದ್ದಾರೆ” ಎಂದು ಹರ್ಮನ್‌ಪ್ರೀತ್ ಹೇಳಿದರು.


ಇದನ್ನೂ ಓದಿ:  Viral Video: ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗಲೇ ಕುಸಿದುಬಿದ್ದು ಪೊಲೀಸ್ ಪೇದೆ ಸಾವು!


ಇನ್ನು ಹರ್ಮನ್ ಔಟ್ ಆದ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡ ಅವರು, ಮೈದಾನದಲ್ಲಿಯೇ ಬ್ಯಾಟ್ ನ್ನು ನೆಲಕ್ಕೆ ಎಸೆದಿದ್ದಾರೆ. ಈ ಸಂದರ್ಭದಲ್ಲಿ ಅವರ ಮುಖದಲ್ಲಿ ಹತಾಶೆ, ನೋವು, ಕೋಪ, ಬೇಸರ ಕಂಡುಬಂದಿತ್ತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.