ನವದೆಹಲಿ: 2020 ರ ಫೆಬ್ರವರಿ 21 ರಿಂದ 2020 ರ ಮಾರ್ಚ್ 8 ರವರೆಗೆ ನಡೆಯಲಿರುವ ಮುಂಬರುವ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹಿಳಾ ಟಿ 20 ವಿಶ್ವಕಪ್‌ನಲ್ಲಿ 15 ಸದಸ್ಯರ ಮಹಿಳಾ ತಂಡವನ್ನು ಭಾರತದ ಆಲ್‌ರೌಂಡರ್ ಹರ್ಮನ್‌ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಮತ್ತೊಂದೆಡೆ, ಭಾರತೀಯ ಓಪನರ್ ಸ್ಮೃತಿ ಮಂದಾನಾ, ಉಪನಾಯಕಿನಾಗಿ ಆಯ್ಕೆಯಾಗಿದ್ದಾರೆ.



COMMERCIAL BREAK
SCROLL TO CONTINUE READING

ಶಫಾಲಿ ವರ್ಮಾ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಋತುವಿನಲ್ಲಿ ಸ್ಥಿರ ಪ್ರದರ್ಶನ ನೀಡಿದ ನಂತರ ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದಲ್ಲಿ ಸ್ಥಾನಪಡೆದಿದ್ದಾರೆ ಪಡೆದಿದ್ದಾರೆ. 15 ವರ್ಷದ ಈ ಆಟಗಾರ್ತಿ ಐಸಿಸಿ ಸ್ಪರ್ಧೆಯಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳಲು ಸಜ್ಜಾಗಿದ್ದಾಳೆ.ಏತನ್ಮಧ್ಯೆ, ಭಾರತದ ಮಹಿಳಾ ಟಿ 20 ಐ ತಂಡದಲ್ಲಿ ಬಂಗಾಳದ ರೂಕಿ ಬ್ಯಾಟ್ಸ್ ವುಮನ್ ರಿಚಾ ಘೋಷ್ ಮಾತ್ರ ಹೊಸ ಮುಖ. ಮಹಿಳಾ ಚಾಲೆಂಜರ್ ಟ್ರೋಫಿಯಲ್ಲಿ ಅವರು ಇತ್ತೀಚೆಗೆ ಒಂದು ಪಂದ್ಯದಲ್ಲಿ ಕೇವಲ 26 ಎಸೆತಗಳಲ್ಲಿ 36 ರನ್ ಗಳಿಸಿದ್ದರಿಂದಾಗಿ ಆಯ್ಕೆದಾರದ ಗಮನ ಸೆಳೆದು ಸ್ಥಾನಗಿಟ್ಟಿಸಿಕೊಂಡಿದ್ದಾರೆ.


ಗ್ರೂಪ್ ಎ ಯಲ್ಲಿ ಆತಿಥೇಯ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳೊಂದಿಗೆ ಭಾರತ ಸ್ಥಾನ ಪಡೆದರೆ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್, ಪಾಕಿಸ್ತಾನ ಮತ್ತು ಥೈಲ್ಯಾಂಡ್ ಗ್ರೂಪ್ ಬಿ ನಲ್ಲಿವೆ. ಫೆಬ್ರವರಿ 21 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಐಸಿಸಿ ಟಿ 20 ಐ ವಿಶ್ವಕಪ್‌ನಲ್ಲಿ ವುಮೆನ್ ಇನ್ ಬ್ಲೂ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದ್ದಾರೆ.


ಪೂರ್ಣ ಭಾರತೀಯ ಮಹಿಳಾ ವಿಶ್ವಕಪ್ ಟಿ 20 ಐ ತಂಡ ಹೀಗಿದೆ:


ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರೊಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ವೇದ ಕೃಷ್ಣಮೂರ್ತಿ, ರಿಚಾ ಘೋಷ್, ತಾನಿಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ರಾಜೇಶ್ವರಿ ಗೈಕಾವಾಡ್, ಶಿಖವಾಡ್.