Harshal Patel Retirement: ಸದ್ಯ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ ಕ್ರಿಕೆಟ್ ಸರಣಿಗಳು ನಡೆಯುತ್ತಿವೆ. ಇತ್ತೀಚೆಗಷ್ಟೇ ಭಾರತ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು 1-0 ಅಂತರದಿಂದ ಗೆದ್ದುಕೊಂಡಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 3 ಪಂದ್ಯಗಳ ಏಕದಿನ ಸರಣಿಯು ಜುಲೈ 27 ರಿಂದ ಪ್ರಾರಂಭವಾಗಲಿದೆ. ಈ ನಡುವೆ, ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ನಿವೃತ್ತಿ ಪಡೆಯುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಒಂದು ವೇಳೆ ಟೀಂ ಇಂಡಿಯಾದ ಈ ಸ್ಟಾರ್ ಆಟಗಾರ ನಿವೃತ್ತಿ ಘೋಷಿಸಿದರೆ ಅದು ತಂಡಕ್ಕೆ ದೊಡ್ಡ ಹೊಡೆತ ಬೀಳುವುದು ಖಂಡಿತ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 1 ಶತಕಕ್ಕೆ 7 ವಿಶ್ವದಾಖಲೆಗಳು ಉಡೀಸ್..! ‘ಕಿಂಗ್’ ಕೊಹ್ಲಿ ಬತ್ತಳಿಕೆ ಸೇರಿದ ಸಚಿನ್, ಜಾಕ್ವೆಸ್ ಕಾಲಿಸ್’ರ ಈ ದಾಖಲೆ


ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಆಟಗಾರನನ್ನು ಟೀಂ ಇಂಡಿಯಾದಿಂದ ಕೈಬಿಟ್ಟ ರೀತಿ ಮಾತ್ರ ತುಂಬಾ ಆಶ್ಚರ್ಯಕರವಾಗಿದೆ. ಭವಿಷ್ಯದ ODI ಅಥವಾ T20 ಸರಣಿಗೆ ಆಯ್ಕೆಗಾರರು ಈ ಆಟಗಾರನನ್ನು ಆಯ್ಕೆ ಮಾಡದಿದ್ದರೆ ಆತ ನಂತರದಲ್ಲಿ ನಿವೃತ್ತಿ ಘೋಷಣೆ ಮಾಡಲೇವಬೇಕು. ಇಲ್ಲಿ ಮಾತನಾಡುವುದು ಟೀಂ ಇಂಡಿಯಾದಿಂದ ವೇಗದ ಬೌಲರ್ ಹರ್ಷಲ್ ಪಟೇಲ್ ಅವರ ಬಗ್ಗೆ.


ಐಪಿಎಲ್‌ ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್‌ಗೆ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿತು. ಆದರೆ 25 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ ಈ ಆಟಗಾರ ತನ್ನ ಕಳಪೆ ಪ್ರದರ್ಶನದಿಂದ ಜಗತ್ತಿನ ಕೆಂಗಣ್ಣಿಗೆ ಗುರಿಯಾದನು,


 ಭಾರತದ ಪರ 25 ಟಿ20 ಪಂದ್ಯಗಳನ್ನು ಆಡಿದ ಹರ್ಷಲ್ ಪಟೇಲ್ ಪಡೆದಿದ್ದು ಕೇವಲ 29 ವಿಕೆಟ್. ವೇಗದ ಬೌಲರ್ ಹರ್ಷಲ್ ಪಟೇಲ್ ಈ ವರ್ಷದ ಆರಂಭದಲ್ಲಿ ಶ್ರೀಲಂಕಾ ವಿರುದ್ಧ 3ಡ12ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಈ ಅಂತಾರಾಷ್ಟ್ರೀಯ ಟಿ20 ಸರಣಿಯ ನಂತರ ಆಯ್ಕೆದಾರರು ಹರ್ಷಲ್ ಪಟೇಲ್‌ಗೆ ಅವಕಾಶ ನೀಡಿಲ್ಲ.


ಇದನ್ನೂ ಓದಿ: ವಿರಾಟ್ ಸ್ಥಾನದಲ್ಲಿ ಇಶಾನ್ ಬ್ಯಾಟಿಂಗ್ ಮಾಡಿದ್ದೇಕೆ? ಈ ಬದಲಾವಣೆಗೆ ಅಚ್ಚರಿಯ ಕಾರಣ ಕೊಟ್ಟ ರೋಹಿತ್ ಶರ್ಮಾ


ಟೀಮ್ ಇಂಡಿಯಾ ಈಗ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಶಾರ್ದೂಲ್ ಠಾಕೂರ್ ಮತ್ತು ಜಯದೇವ್ ಉನದ್ಕತ್ ಅವರಂತಹ ಉತ್ತಮ ವೇಗದ ಬೌಲರ್‌ಗಳನ್ನು ಹೊಂದಿದೆ. ಹೀಗಿರುವಾಗ 32ರ ಹರೆಯದ ಹರ್ಷಲ್ ಪಟೇಲ್ ಮತ್ತೊಮ್ಮೆ ಟೀಂ ಇಂಡಿಯಾಗೆ ಮರಳಲು ಸಾಧ್ಯವಿಲ್ಲ. ಹರ್ಷಲ್ ಪಟೇಲ್ ಅವರು ತಮ್ಮ ಕೊನೆಯ 8 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 12 T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 5 ಬಾರಿ 40 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ