ಹರ್ಯಾಣದ ಮಹಿಳೆಯನ್ನು ಮದುವೆಯಾಗಲಿರುವ ಪಾಕ್ ಕ್ರಿಕೆಟಿಗ ಹಸನ್ ಅಲಿ
ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಭಾರತೀಯ ಮಹಿಳೆಯನ್ನು ಮದುವೆಯಾಗಲಿದ್ದಾರೆ ಎಂದು ಐಎಎನ್‌ಎಸ್ ಜಿಯೋ ನ್ಯೂಸ್ ವರದಿ ಮಾಡಿದೆ.
ನವದೆಹಲಿ: ಪಾಕಿಸ್ತಾನದ ಕ್ರಿಕೆಟಿಗ ಹಸನ್ ಅಲಿ ಭಾರತೀಯ ಮಹಿಳೆಯನ್ನು ಮದುವೆಯಾಗಲಿದ್ದಾರೆ ಎಂದು ಐಎಎನ್‌ಎಸ್ ಜಿಯೋ ನ್ಯೂಸ್ ವರದಿ ಮಾಡಿದೆ.
ಈ ವರದಿಯ ಪ್ರಕಾರ ಪಾಕಿಸ್ತಾನದ ವೇಗದ ಬೌಲರ್ ಶಾಮಿಯಾ ಅರ್ಜೂ ಅವರನ್ನು ಮದುವೆಯಾಗಲಿದ್ದಾರೆ. ಆಗಸ್ಟ್ 20 ರಂದು ದುಬೈನಲ್ಲಿ ನಿಕ್ಕಾ ಸಮಾರಂಭ ನಡೆಯಲಿದೆ ಎಂದು ವರದಿ ತಿಳಿಸಿದೆ. ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುವ ಶಾಮಿಯಾ ಹರಿಯಾಣ ಮೂಲದವಳು ಎಂದು ವರದಿ ತಿಳಿಸಿದೆ. ಅವರು ಇಂಗ್ಲೆಂಡ್‌ನಿಂದ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದು ಈಗ ದುಬೈನಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಹಸನ್ ಅವರು ಮೊದಲು ದುಬೈನಲ್ಲಿ ಆಪ್ತ ಸ್ನೇಹಿತನ ಮೂಲಕ ಶಾಮಿಯಾಳನ್ನು ಭೇಟಿಯಾದರು ಎನ್ನಲಾಗಿದೆ
ಪಾಕ್ ಪರವಾಗಿ ಇದುವರೆಗೆ ಒಂಬತ್ತು ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡಿದ ಹಸನ್ ಅಲಿ ಅವರು ಪಾಕಿಸ್ತಾನದ 2017 ರ ಚಾಂಪಿಯನ್ಸ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಅವರು ಕೆಲವು ವರ್ಷಗಳಿಂದ ಈಗ ಫಾರ್ಮ್ ನಲ್ಲಿ ಇಲ್ಲದೆ ಇರುವುದರಿಂದ ಇಂಗ್ಲೆಂಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು.
ಪಾಕಿಸ್ತಾನದ ಆಲ್‌ರೌಂಡರ್ ಶೋಯೆಬ್ ಮಲಿಕ್ ಅವರು ಏಪ್ರಿಲ್ 12, 2010 ರಂದು ಭಾರತೀಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು ವಿವಾಹವಾದರು. ಈ ದಂಪತಿಗೆ ಇಜಾನ್ ಮಿರ್ಜಾ-ಮಲಿಕ್ ಎಂಬ ಮಗ ಇದ್ದಾನೆ.