ನವದೆಹಲಿ: ದಕ್ಷಿಣ ಆಫ್ರಿಕಾದ ಹಾಶಿಮ್ ಆಮ್ಲಾ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಪಾಕಿಸ್ತಾನದ ವಿರುದ್ಧ ನಡೆದ  ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅವರು ತಮ್ಮ 27ನೇ ಶತಕವನ್ನು ಗಳಿಸಿದರು.


COMMERCIAL BREAK
SCROLL TO CONTINUE READING

ಆ ಮೂಲಕ ಕಡಿಮೆ ಪಂದ್ಯಗಳಲ್ಲಿ 27 ಶತಕಗಳನ್ನು ಗಳಿಸಿದ ಸಾಧನೆಯನ್ನು ಆಮ್ಲಾ ಮಾಡಿದ್ದಾರೆ.ಆಮ್ಲಾ ಈ ದಾಖಲೆಯನ್ನು ಮಾಡಲು ಕೇವಲ 167 ಇನಿಂಗ್ಸ್ ಗಳನ್ನು ತಗೆದುಕೊಂಡಿದ್ದರೆ ವಿರಾಟ್ ಕೊಹ್ಲಿ ಈ ಸಾಧನೆಯನ್ನು ಮಾಡಲು 169 ಇನ್ನಿಂಗ್ಸ್ ಗಳನ್ನು ತಗೆದುಕೊಂಡಿದ್ದಾರೆ.ವಿಶೇಷವೆಂದರೆ ವಿರಾಟ್ ಕೊಹ್ಲಿ ಈ ಸಾಧನೆ ಮಾಡುವ ಮೊದಲು ಭಾರತ ತಂಡದ ಮಾಸ್ಟರ್ ಬ್ಲಾಸ್ಟರ್ 254 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು.ಆದರೆ ಕೊಹ್ಲಿ ಇಂಗ್ಲೆಂಡ್ ವಿರುದ್ದ ಪುಣೆಯಲ್ಲಿ 2017 ಜನವರಿಯಲ್ಲಿ ನಡೆದ ಪಂದ್ಯದಲ್ಲಿ ಶತಕ ಗಳಿಸುವುದರ ಮೂಲಕ ಸಚಿನ್ ದಾಖಲೆಯನ್ನು ಅಳಿಸಿ ಹಾಕಿದ್ದರು.


ಸದ್ಯ 39 ಏಕದಿನ ಶತಕಗಳನ್ನು ಹೊಂದಿರುವ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ನಡೆದ ದ್ವಿಪಕ್ಷೀಯ ಏಕದಿನ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದರು. ಭಾರತವು ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು.ಆ ಮೂಲಕ 71 ವರ್ಷಗಳಲ್ಲಿ ಮೊದಲ ಟೆಸ್ಟ್ ಸರಣಿಯ ಜಯ ಮತ್ತು ಮೂರು-ಪಂದ್ಯಗಳ ಟಿ 20 ಸರಣಿಯಲ್ಲಿ 1-1 ಡ್ರಾ ಸಾಧಿಸುವ ಮೂಲಕ ಭಾರತ ಇದೆ ಮೊದಲ ಬಾರಿಗೆ ಆಸಿಸ್ ನೆಲದಲ್ಲಿ ಅದ್ವೀತಿಯ ಸಾಧನೆ ಮಾಡಿದೆ.