ನವದೆಹಲಿ: ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಹಶಿಮ್ ಆಮ್ಲಾ ಸದ್ಯದಲ್ಲೇ ಭಾರತದ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಅವರ ಅತಿ ವೇಗದ 8000 ಸಾವಿರ ರನ್ ಗಳ ದಾಖಲೆಯನ್ನು ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಳಿಸಿ ಹಾಕಲಿದ್ದಾರೆ. ಈಗ ಆಮ್ಲಾ ಅವರಿಗೆ ಈ ದಾಖಲೆಯನ್ನು ಮಾಡಲು ಕೇವಲ 90 ರನ್ ಗಳ ಕೊರತೆ ಮಾತ್ರವಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಇಂಗ್ಲೆಂಡ್ ವಿರುದ್ದ ಆರಂಭಿಕ ಪಂದ್ಯ ಆಡಲಿರುವ ದಕ್ಷಿಣ ಆಫ್ರಿಕಾ ದಂಡವು ಈ ಭಾರಿ ವಿಶ್ವಕಪ್ ಗೆಲ್ಲುವ ಶ್ರೇಷ್ಠ ತಂಡಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ. ಕೊಹ್ಲಿ ಅವರು 175 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ಆಮ್ಲಾ ಅವರು ಇದೇ ಸಾಧನೆಯನ್ನು171 ಇನ್ನಿಂಗ್ಸ್ ನಲ್ಲಿ ಮಾಡಿದ್ದಾರೆ. ಈಗಾಗಲೇ ಅವರು 2000, 3000, 4000, 5000, 6000 ಮತ್ತು 7000 ರನ್ ಗಳಿಸಿದ ವೇಗದ ಬ್ಯಾಟ್ಸ್ಮನ್ ಎನ್ನುವ ಖ್ಯಾತಿಯನ್ನು ಪಡೆದಿದ್ದಾರೆ.


ಜಾಕ್ ಕಾಲಿಸ್, ಎಬಿ ಡಿ ವಿಲಿಯರ್ಸ್, ಮತ್ತು ಹರ್ಷಲ್ ಗಿಬ್ಸ್ ಇತರ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ ಮನ್ ಗಳು ಈ ಬೆಂಚ್ಮಾರ್ಕ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಏಕದಿನ ಪಂದ್ಯಗಳಲ್ಲಿ ಕ್ಯಾಲಿಸ್ 11,550 ರನ್ಗಳನ್ನು ಗಳಿಸಿದರೆ, ವಿಲಿಯರ್ಸ್ ಮತ್ತು ಗಿಬ್ಸ್ 9427 ಮತ್ತು 8094 ರನ್ ಗಳನ್ನು ಗಳಿಸಿದ್ದಾರೆ.