ಪರ್ತ್: ಕ್ರಿಕೆಟ್ ಅನಿಶ್ಚಿತತೆಗಳ ಆಟ ಎಂಬುದು ನಮ್ಮ ನಿಮ್ಮೆಲ್ಲರಿಗೂ ತಿಳಿದ ವಿಷಯ. ಈ ಆಟದ ವೇಳೆ ನಿತ್ಯ ಹಲವು ವಿಶಿಷ್ಟ ಹಾಗೂ ವಿನೂತನ ಸನ್ನಿವೇಶಗಳು ಸೃಷ್ಟಿಯಾಗುತ್ತವೆ. ಇಂತಹುದೇ ಒಂದು ಸನ್ನಿವೇಶಕ್ಕೆ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಶ್ ಲೀಗ್ ಸಾಕ್ಷಿಯಾಗಿದೆ.


COMMERCIAL BREAK
SCROLL TO CONTINUE READING

ಬಿಗ್ ಬ್ಯಾಶ್ ಲೀಗ್ ನಲ್ಲಿ ಶನಿವಾರ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಪರ್ತ್​ ಸ್ಕೊರ್ಚರ್ಸ್​ ಮತ್ತು ಮೆಲ್ಬೋರ್ನ್​ ರೆನೆಗೆಡ್ಸ್ ತಂಡಗಳ ಮಧ್ಯೆ ನಡೆದ ಪಂದ್ಯ ಒಂದು ರೋಚಕ ಹಾಗೂ ವಿಲಕ್ಷಣ ಅನುಭವಕ್ಕೆ ಸಾಕ್ಷಿಯಾಗಿದೆ. ಹೌದು, ಬಿಗ್ ಬ್ಯಾಶ್ ಲೀಗ್ ಈ ಕುರಿತಾದ ವಿಡಿಯೋವೊಂದನ್ನು ತನ್ನ ಟ್ವಿಟ್ಟರ್ ಖಾತೆಗೆ ಹರಿಬಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರೀ ವೈರಲ್ ಆಗುತ್ತಿದೆ. ಶನಿವಾರ ನಡೆದ ಪಂದ್ಯದಲ್ಲಿ ಮೆಲ್ಬೋರ್ನ್​ ರೆನೆಗೆಡ್ಸ್ ತಂಡ ನೀಡಿದ್ದ ಗುರಿಯನ್ನು ಪರ್ತ್​ ಸ್ಕೊರ್ಚರ್ಸ್ ತಂಡ ಬೆನ್ನಟ್ಟಿದೆ. ಈ ವೇಳೆ ಪಂದ್ಯದ ನಾಲ್ಕನೇ ಓವರ್ ನಲ್ಲಿ ಜೆ ರಿಚರ್ಡ್ಸನ್, ಸ್ಯಾಮ್ ಹಾರ್ಪರ್ ಅವರಿಗೆ ಬೌಲಿಂಗ್ ಮಾಡಿದ್ದು, ಅವರ ಈ ಬೌಲ್ ಬಳಿಕ ಇಡೀ ಕ್ರೀಡಾಂಗಣ ನಗೆಗಡಲಲ್ಲಿ ತೇಲಾಡಿದೆ. 


ಅಂತದ್ದೇನಿದೆ ಈ ವಿಡಿಯೋದಲ್ಲಿ
ತನ್ನ ಬೌಲಿಂಗ್ ನಲ್ಲಿ ಕ್ರೀಸ್ ಬಿಟ್ಟು ಚಂಡನ್ನು ಹೊಡೆಯಲು ಬಂದ ಮೆಲ್ಬೋರ್ನ್​ ರೆನೆಗೆಡ್ಸ್ ತಂಡದ ಆರಂಭಿಕ ಆಟಗಾರ ಸ್ಯಾಮ್ ಹಾರ್ಪರ್ ಅವರಿಗೆ ಕನ್ಫ್ಯೂಸ್ ಮಾಡಲು ಜೇ ರಿಚರ್ಡ್ಸನ್ ಪ್ರಯತ್ನಿಸಿದ್ದಾರೆ. ಈ ಪ್ರಯತ್ನದಲ್ಲಿ ಅವರು ಚೆನನ್ನು ಪಿಚ್ ನಿಂದ ಹೊರಗೆ ಎಸದಿದ್ದಾರೆ. ಆದಾಗ್ಯೂ ಪಟ್ಟು ಬಿಡದ ಬ್ಯಾಟ್ಸ್ ಮ್ಯಾನ್ ಹಾರ್ಪರ್ ಚೆಂಡನ್ನು ಅಟ್ಟಾಡಿಸಿ, ಬೆನ್ನಟ್ಟಿ ಹೊಡೆದಿದ್ದಾರೆ.



ಮೈದಾನದಲ್ಲಿ ನೆರೆದಿದ್ದ ಪ್ರೇಕ್ಷಕರು ಹಾರ್ಪರ್ ಅವರ ಈ ಹೊಡೆತಕ್ಕೆ ರನ್ ಬಾರದೆ ಇದ್ದರೂ ಕೂಡ ನಕ್ಕು ನಲಿದಿದ್ದಾರೆ. ಈ ಪಂದ್ಯದಲ್ಲಿ ಗೆಲುವಿಗಾಗಿ ಪರ್ತ್​ ಸ್ಕೊರ್ಚರ್ಸ್ ನೀಡಿದ್ದ 197 ರನ್ ಗಳ ಗುರಿಯನ್ನು ತಲುಪಲು ವಿಫಲವಾಗಿರುವ ಮೆಲ್ಬೋರ್ನ್​ ರೆನೆಗೆಡ್ಸ್ ತಂಡ 11 ರನ್ ಗಳಿಂದ ಸೋಲನ್ನು ಅನುಭವಿಸಿದೆ.