ಈ ಆಟಗಾರ ಟೆಸ್ಟ್ ನಲ್ಲಿ 50 ಎಸೆತದಲ್ಲಿ 100 ರನ್ ಗಳಿಸಬಹುದು ಎಂದ ಗೌತಮ್ ಗಂಭೀರ್ !
ಮಂಗಳವಾರ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ 2 ನೇ ಟಿ 20 ಯಲ್ಲಿ ಕೆ.ಎಲ್. ರಾಹುಲ್ ಸ್ಟ್ರೋಕ್ ಪ್ಲೇಯಿಂದ ಪ್ರಭಾವಿತರಾದ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಲಗೈ ಆಟಗಾರನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ನವದೆಹಲಿ: ಮಂಗಳವಾರ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ 2 ನೇ ಟಿ 20 ಯಲ್ಲಿ ಕೆ.ಎಲ್. ರಾಹುಲ್ ಸ್ಟ್ರೋಕ್ ಪ್ಲೇಯಿಂದ ಪ್ರಭಾವಿತರಾದ ಭಾರತದ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಬಲಗೈ ಆಟಗಾರನ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಕೆ.ಎಲ್.ರಾಹುಲ್, ರೋಹಿತ್ ಶರ್ಮಾರೊಂದಿಗೆ ಟಿ-20 ಯಲ್ಲಿ ಆರಂಭಿಕ ಖಾತೆ ತೆರೆಯಲು ಶಿಖರ್ ಧವನ್ ಗಿಂತ ಸೂಕ್ತ ಎಂದು ಹೇಳಿದರು.ಲಂಕಾ ನೀಡಿದ 143 ರನ್‌ಗಳ ಬೆನ್ನಟ್ಟಿದ ರಾಹುಲ್, ಪವರ್‌ಪ್ಲೇನಲ್ಲಿ ಚುರುಕಾಗಿ ರನ್ ಗಳಿಸುವ ಮೂಲಕ ಭಾರತಕ್ಕೆ ಅದ್ಭುತ ಆರಂಭ ನೀಡಿದರು. 32 ಎಸೆತಗಳಲ್ಲಿ 45 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆಲುವಿನತ್ತ ಸಾಗಿಸಿದರು.
ಲೋಕೇಶ್ ರಾಹುಲ್ ಅವರು ತಮ್ಮ ನೈಸರ್ಗಿಕ ಆಟವನ್ನು ಆಡಿದರೆ ಟೆಸ್ಟ್ ಪಂದ್ಯಗಳಲ್ಲಿ 50 ಎಸೆತಗಳ ಶತಕವನ್ನು ಗಳಿಸಬಲ್ಲವರು ಎಂದು ಗಂಭೀರ್ ಹೇಳಿದ್ದಾರೆ.'ಕೆಎಲ್ ರಾಹುಲ್ ನಾನು ನಂಬಲಾಗದ ರೂಪದಲ್ಲಿದ್ದಾರೆ.ನಾನು ರಾಹುಲ್ ಬ್ಯಾಟ್ ಅನ್ನು ನೋಡಿದಾಗಲೆಲ್ಲಾ ಇದು ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ, ಯಾಕೆಂದರೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಅದೇ ರೀತಿ ಆಡಲಿಲ್ಲ. ಇದು ಕೇವಲ ವೈಟ್-ಬಾಲ್ ಕ್ರಿಕೆಟ್ ಬಗ್ಗೆ ಅಲ್ಲ; ಇದು ಟೆಸ್ಟ್ ಕ್ರಿಕೆಟ್ ಬಗ್ಗೆಯೂ ಕೂಡ. ಅವರು ಯಾವ ರೀತಿಯ ಗುಣಮಟ್ಟವನ್ನು ಹೊಂದಿದ್ದಾರೆಂದರೆ, ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 50 ಎಸೆತಗಳಲ್ಲಿ 100 ರನ್ ಗಳಿಸಬಹುದು. ಅವರು ಹೊಂದಿರುವ ಹೊಡೆತಗಳು ಅದ್ಭುತವಾಗಿದೆ,'ಗಂಭೀರ್ ಹೇಳಿದರು.