Sanath Jayasuriya son Met Virat Kohli: ಟೀಂ ಇಂಡಿಯಾದ ಬ್ಯಾಟಿಂಗ್ ಪಿಲ್ಲರ್ ಎಂದೇ ಖ್ಯಾತಿ ಪಡೆದಿರುವ ವಿರಾಟ್ ಕೊಹ್ಲಿಗೆ ದೇಶ ವಿದೇಶಗಳಲ್ಲಿ ಅಭಿಮಾನಿಗಳಿರುವುದು ಗೊತ್ತೇ ಇದೆ.  ಬೆಂಗಳೂರಿನಲ್ಲಿ ನಡೆದ ಮೊದಲ ಮ್ಯಾಚ್‌ನಲ್ಲಿ 70 ರನ್ ಬಾರಿಸಿ ಮಿಂಚಿದ್ದ ಕೊಹ್ಲಿ ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯಕ್ಕೆ ತಯಾರಿ ನಡೆಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಈ ವೇಳೆ ಸ್ಟಾರ್ ಕ್ರಿಕೆಟಿಗನ ಮಗ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ಫೋಟೋ ಸಖತ್‌ ವೈರಲ್‌ ಆಗುತ್ತಿದೆ. ವಿರಾಟ್ ಕೊಹ್ಲಿಗೆ ಕೆಲವು ಸ್ಟಾರ್ ಆಟಗಾರರ ಪುತ್ರರು ಸಹ ಅಭಿಮಾನಿಗಳಾಗಿದ್ದಾರೆ. ಅವರಲ್ಲಿ ಲಂಕಾದ ದಂತಕಥೆಯ ಪುತ್ರನೂ ಒಬ್ಬ.


ಶ್ರೀಲಂಕಾದ ಮಾಜಿ ಆಟಗಾರ ಸನತ್ ಜಯಸೂರ್ಯ ಪುತ್ರ ರಾನುಕ್ ಜಯಸೂರ್ಯ. ಸನತ್ ಜಯಸೂರ್ಯ ಕೂಡ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವವರು. ಆದರೆ ಇವರ ಪುತ್ರ  ರಾನುಕ್ ಜಯಸೂರ್ಯ ಕಿಂಗ್ ಕೊಹ್ಲಿಯ ಕಟ್ಟಾ ಅಭಿಮಾನಿ. ತನ್ನ ನೆಚ್ಚಿನ ಕ್ರಿಕೆಟಿಗನ್ನು ಭೇಟಿಯಾಗಲು ರಾನುಕ್ ಜಯಸೂರ್ಯ ಕಾಯುತ್ತಿದ್ದರಂತೆ. ಆಗಸ್ಟ್ ತಿಂಗಳಿನಲ್ಲಿ ರಾನುಕ್‌ ಅವರಿಗೆ ಈ ಗುಡ್‌ ಟೈಮ್‌ ಬಂದಿದೆ. 


ಇದನ್ನೂ ಓದಿ: ಕ್ರಿಕೆಟ್‌ ಲೋಕವೇ ಮೆಚ್ಚಿದ ಆಟಗಾರ ವಿರಾಟ್ ಕೊಹ್ಲಿ...‌ ಆದ್ರೆ ವಿರಾಟ್‌ʼಗೆ ಈ ಕ್ರಿಕೆಟರ್ ಅಂದ್ರೆ ಪಂಚ್ರಪ್ರಾಣ! ʼಆʼ ಕ್ರಿಕೆಟರ್ ಯಾರು ಗೊತ್ತಾ?


ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ನಿರ್ಗಮಿಸುವ ಸಂದರ್ಭದಲ್ಲಿ ಸನತ್ ಜಯಸೂರ್ಯ ತಮ್ಮ ಪುತ್ರ ರಾನುಕ್ ಜಯಸೂರ್ಯ ಅವರನ್ನು ವಿರಾಟ್ ಕೊಹ್ಲಿಗೆ ಭೇಟಿ ಮಾಡಿಸಿದ್ದಾರೆ. ಇದೇ ವೇಳೆ ರಾನುಕ್ ಕಿಂಗ್ ಕೊಹ್ಲಿಯಿಂದ ಆಟೋಗ್ರಾಫ್ ಪಡೆದು ಫೋಟೊ ಸಹ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.


ರಾನುಕ್ ಜಯಸೂರ್ಯ ಕೂಡ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ತಂದೆಯ ಹಾದಿಯಲ್ಲೇ ಸಾಗುತ್ತಿರುವ 17ರ ಹರೆಯದ ರಾನುಕ್ ಈಗಾಗಲೇ  ಶ್ರೀಲಂಕಾ ಕ್ರಿಕೆಟ್ ಮೇಜರ್ ಲೀಗ್ ಅಂಡರ್-23 ಟೂರ್ನಿಯಲ್ಲಿ ಆಡಿದ್ದಾರೆ. ತಮ್ಮ ಅದ್ಭುತ ಪ್ರದರ್ಶನದ ಮೂಲಕ ಆಕರ್ಷಕ ಅರ್ಧಶತಕ ಬಾರಿಸುವ ಸಿಡಿಸಿದ್ದಾರೆ.  


ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಸನತ್ ಜಯಸೂರ್ಯ. ಇವರು ಶ್ರೀಲಂಕಾ ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶ್ರೀಲಂಕಾ 27 ವರ್ಷಗಳ ನಂತರ ಭಾರತದ ವಿರುದ್ಧ ಏಕದಿನ ಸರಣಿಯನ್ನು ಗೆದ್ದು ಬೀಗಿತು. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಶ್ರೀಲಂಕಾ ತಂಡ ಕ್ಲೀನ್ ಸ್ವೀಪ್ ಮಾಡಿದೆ. ಸನತ್ ಜಯಸೂರ್ಯ ಕೋಚಿಂಗ್ ನಲ್ಲಿ ಶ್ರೀಲಂಕಾ ತಂಡ ಬಲಿಷ್ಠ ಶಕ್ತಿಯಾಗುತ್ತಿದೆ ಎಂಬುದರಲ್ಲಿ ಎರಡು ಮಾತಿಲ್ಲ.


ಇದನ್ನೂ ಓದಿ: IPL ಆರಂಭಕ್ಕೂ ಮುನ್ನವೇ RCBಗೆ ಬಿಗ್ ಶಾಕ್; ಕೈಕೊಟ್ಟ ದುಬಾರಿ ಆಟಗಾರ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.