Rohit Sharma: ಟಿ20 ವಿಶ್ವಕಪ್‌ನಲ್ಲಿ ಭಾರತದ ಸೆಮಿಫೈನಲ್ ಸೋಲಿನ ನಂತರ ರೋಹಿತ್ ಶರ್ಮಾ ನಾಯಕತ್ವವನ್ನು ಹೆಚ್ಚು ಟೀಕಿಸಲಾಗಿದೆ. ಬ್ಯಾಟ್ಸ್‌ಮನ್‌ ಆಗಿ ದಯನೀಯವಾಗಿ ವಿಫಲರಾದ ಹಿಟ್‌ಮ್ಯಾನ್ ತೆಗೆದುಕೊಂಡ ಕೆಲವು ನಿರ್ಧಾರಗಳು ವಿಫಲವಾದವು. ಅದರಲ್ಲೂ ಅಕ್ಷರ್ ಪಟೇಲ್ ಹಾಗೂ ರವಿಚಂದ್ರನ್ ಅಶ್ವಿನ್ ಅಂತಿಮ ತಂಡದಲ್ಲಿ ಸತತ ವೈಫಲ್ಯ ಅನುಭವಿಸುತ್ತಿದ್ದರೂ ಅಂತಿಮ ತಂಡದಲ್ಲಿ ಮುಂದುವರಿದಿರುವುದು ತಂಡದ ವೈಫಲ್ಯದ ಮೇಲೆ ಪರಿಣಾಮ ಬೀರಿತು. ಹತ್ತು ವಿಕೆಟ್‌ಗಳಿಂದ ಅನುಭವಿಸಿದ ಸೋಲನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 World Cup ಕೈತಪ್ಪಲು ರೋಹಿತ್ ಹಠವೇ ಮುಖ್ಯ ಕಾರಣ! ಈ ಆಟಗಾರರಿಗೆ ಅವಕಾಶ ನೀಡದ್ದೇ ತಪ್ಪಾಯ್ತು!


ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು, ಬಿಸಿಸಿಐ ಈಗಿನಿಂದ ಶುದ್ಧೀಕರಣವನ್ನು ಪ್ರಾರಂಭಿಸಲು ಯೋಜಿಸುತ್ತಿದೆ. 2024ರಲ್ಲಿ ವಿಶ್ವಕಪ್ ನ್ನು ವೆಸ್ಟ್ ಇಂಡೀಸ್ ಮತ್ತು ಅಮೇರಿಕಾ ಜಂಟಿಯಾಗಿ ಆಯೋಜಿಸುತ್ತದೆ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ವಯಸ್ಸು ಸದ್ಯ 35 ವರ್ಷ.ಮುಂದಿನ ವಿಶ್ವಕಪ್ ವೇಳೆಗೆ 37 ವರ್ಷ ತಲುಪಲಿದ್ದಾರೆ. ನಾಯಕನಾಗಿ ಮುಂದುವರಿಯುವ ಸಾಧ್ಯತೆ ಇಲ್ಲ ಎಂಬುದು ತಜ್ಞರ ಅಭಿಪ್ರಾಯ. ರೋಹಿತ್ ಶರ್ಮಾ ನಾಯಕತ್ವಕ್ಕೆ ವಿದಾಯ ಹೇಳಿದರೆ ಮುಂದಿನ ನಾಯಕ ಯಾರು? ರೇಸ್‌ನಲ್ಲಿ ಯಾರಿದ್ದಾರೆ? ಎಂಬುದು ಈಗ ಗೊಂದಲಕ್ಕೆ ಕಾರಣವಾಗಿದೆ.


ಹಾರ್ದಿಕ್ ಪಾಂಡ್ಯ: ಟೀಂ ಇಂಡಿಯಾ ಟಿ20 ನಾಯಕನ ರೇಸ್ ನಲ್ಲಿ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಮೊದಲ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಬದಲಿಗೆ ಭಾರತ ಟಿ20 ತಂಡದ ನಾಯಕತ್ವ ವಹಿಸುವ ಸಾಮರ್ಥ್ಯ ಪಾಂಡ್ಯ ಅವರಿಗಿದೆ ಎಂದೂ ಕೆಲವು ಹಿರಿಯರು ಹೇಳುತ್ತಾರೆ. ಹಾರ್ದಿಕ್ ಪಾಂಡ್ಯ ನಾಯಕನಾಗಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗುಜರಾತ್ ಟೈಟಾನ್ಸ್‌ಗೆ ತಂದುಕೊಟ್ಟಿದ್ದರು. ನ್ಯೂಜಿಲೆಂಡ್ ವಿರುದ್ಧದ ಸರಣಿಗೂ ಪಾಂಡ್ಯ ಅವರನ್ನು ನಾಯಕರನ್ನಾಗಿ ನೇಮಿಸಲಾಯಿತು. ಮುಂದೆಯೂ ಅವರು ಟಿ20 ತಂಡದ ನಾಯಕರಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.


ರಿಷಬ್ ಪಂತ್: ಹೊಸ ಟಿ20 ನಾಯಕನ ರೇಸ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಬ್ ಪಂತ್ ಕೂಡ ಇದ್ದಾರೆ. ರಿಷಭ್ ಪಂತ್ ಅವರನ್ನು ಓಪನರ್ ಆಗಿ ಆಡಬೇಕೆಂಬ ಬೇಡಿಕೆ ಅನಾದಿ ಕಾಲದಿಂದಲೂ ಇತ್ತು ಎಂಬುದು ಗೊತ್ತೇ ಇದೆ. ಟೀಂ ಇಂಡಿಯಾ ನಾಯಕನಾಗಿ ಓಪನರ್ ಆಗಿ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿದೆ. ರಿಷಬ್ ಪಂತ್ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದಾರೆ. ರಿಷಬ್ ಪಂತ್ ಕೂಡ ನಾಯಕನಾಗುವ ಎಲ್ಲಾ ಅರ್ಹತೆಗಳನ್ನು ಹೊಂದಿದ್ದಾರೆ.


ಇದನ್ನೂ ಓದಿ: Team India : 'ಈ ಆಟಗಾರನನ್ನು 2024 ರ ವಿಶ್ವಕಪ್‌ಗೆ ಟಿ20 ತಂಡದ ಕ್ಯಾಪ್ಟನ್ ಮಾಡಿ'


ಸೂರ್ಯಕುಮಾರ್ ಯಾದವ್: ಟೀಂ ಇಂಡಿಯಾದ ಹೊಸ ಸೆನ್ಸೇಷನ್ ಸೂರ್ಯಕುಮಾರ್ ಯಾದವ್ ಕೂಡ ಭವಿಷ್ಯದಲ್ಲಿ ನಾಯಕತ್ವದ ರೇಸ್‌ನಲ್ಲಿರುವ ಸಾಧ್ಯತೆ ಇದೆ. ಸದ್ಯ ಟಿ20 ಮಾದರಿಯಲ್ಲಿ ನಂಬರ್ ವನ್ ಬ್ಯಾಟ್ಸ್ ಮನ್ ಆಗಿರುವ ಸೂರ್ಯಕುಮಾರ್ ಇತ್ತೀಚೆಗೆ ವಿಶ್ವಕಪ್ ನಲ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್ ನಿಂದ ಪ್ರಭಾವಿತರಾಗಿದ್ದರು. ಸೂರ್ಯಕುಮಾರ್ ಯಾದವ್ ಅವರು ಭವಿಷ್ಯದಲ್ಲಿ ಇದೇ ಫಾರ್ಮ್ ಅನ್ನು ಮುಂದುವರಿಸಿದರೆ ಭವಿಷ್ಯದಲ್ಲಿ ನಾಯಕರಾಗಿ ಕಾಣಿಸಿಕೊಳ್ಳಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.