ಲಕ್ನೋ (ಉತ್ತರ ಪ್ರದೇಶ): ಅಫ್ಘಾನಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ವೀಕ್ಷಿಸಲು ಭಾರತಕ್ಕೆ ಬಂದಿರುವ ಕ್ರಿಕೆಟ್ ಅಭಿಮಾನಿ ವಸತಿ ಸೌಕರ್ಯವನ್ನು ಹುಡುಕುವಲ್ಲಿ ತೊಂದರೆಯೊಂದು ಎದುರಾಗಿದೆ. ಅದುವೇ ಆತನ ಎತ್ತರ.


COMMERCIAL BREAK
SCROLL TO CONTINUE READING

8 ಅಡಿ ಮತ್ತು ಎರಡು ಇಂಚು ಎತ್ತರವಿರುವ ಶೇರ್ ಖಾನ್, ಉಳಿದುಕೊಳ್ಳಲು ಸ್ಥಳವನ್ನು ಹುಡುಕಲು ಹಲವಾರು ಹೋಟೆಲ್‌ಗಳಿಗೆ ಭೇಟಿ ನೀಡಿದ್ದರು. ಆದರೆ ಯಾವುದೇ ಹೋಟೆಲ್ ನಲ್ಲಿಯೂ ಆತನ ಎತ್ತರಕ್ಕೆ ಸರಿಹೊಂದುವ ರೂಂ ಸಿಗಲಿಲ್ಲ.


ಇದರಿಂದಾಗಿ ನಿರಾಸೆಗೊಂಡು ಹೊಸ ನಗರದಲ್ಲಿ ಏಕಾಂಗಿಯಾಗಿರುವ ಖಾನ್ ಸಹಾಯಕ್ಕಾಗಿ ಪೊಲೀಸರನ್ನು ಸಂಪರ್ಕಿಸಿದನು. ಪೊಲೀಸರು ಆತನನ್ನು ನಾಕಾ ಪ್ರದೇಶದ ರಾಜಧಾನಿಯ ಹೋಟೆಲ್ಗೆ ಕರೆದೊಯ್ಯಿತು. ಅಲ್ಲಿ ಶೇರ್ ಖಾನ್ ಮಂಗಳವಾರ ರಾತ್ರಿ ಕಳೆದರು. 


ಎಂಟಡಿ ಎತ್ತರದ ಕಾಬೂಲ್ ನಿವಾಸಿ ಯಾರು ಎಂದು ನೋಡಲು ನೂರಾರು ಜನರು ಹೋಟೆಲ್ ಹೊರಗೆ ಜಮಾಯಿಸಿದರು. "ಎಂಟು ಅಡಿ ಎತ್ತರದ ಶೇರ್ ಖಾನ್ ಅವರನ್ನು ನೋಡಲು ಸುಮಾರು 200 ಜನರು ಹೋಟೆಲ್ ನಲ್ಲಿ ಜಮಾಯಿಸಿದ್ದು, ಇದರಿಂದ ತುಂಬಾ ತೊಂದರೆಗೀಡಾಗಿರುವುದಾಗಿ" ಹೋಟೆಲ್ ಮಾಲೀಕ ರಾನು ಬುಧವಾರ ಎಎನ್‌ಐಗೆ ತಿಳಿಸಿದರು.


ಹೋಟೆಲ್ ಹೊರಗೆ ಜಮಾಯಿಸಿದ ಜನರಿಂದಾಗಿ, ಪೊಲೀಸರು ಖಾನ್ ಅವರನ್ನು ಎಕಾನಾ ಕ್ರೀಡಾಂಗಣಕ್ಕೆ ಕರೆದೊಯ್ಯಬೇಕಾಯಿತು, ಅಲ್ಲಿ ಅಂತರರಾಷ್ಟ್ರೀಯ ಪಂದ್ಯ ನಡೆಯುತ್ತಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಶೇರ್ ಖಾನ್ ನಗರದಲ್ಲಿಯೇ ಇರುತ್ತಾರೆ ಎಂದು ಹೋಟೆಲ್ ಮಾಲೀಕ ರಾನು ಹೇಳಿದರು.


(With ANI Inputs)