Most Successful Captains in Cricket: ವಿಶ್ವ ಕ್ರಿಕೆಟ್‌ ಲೋಕದ ಈ 5 ಶ್ರೇಷ್ಠ ನಾಯಕರು ತಮ್ಮ ಬುದ್ಧಿವಂತ ನಾಯಕತ್ವ ಮತ್ತು ಆಕ್ರಮಣಕಾರಿ ತಂತ್ರದ ಮೂಲಕ ಜನಮೆಚ್ಚುಗೆ ಪಡೆದವರು. ಈ ನಾಯಕರು ನಿವೃತ್ತಿ ಪಡೆದಿದ್ದರೂ ಸಹ, ಇಂದಿಗೂ ಕ್ರಿಕೆಟ್‌ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಐವರು ನಾಯಕರ ಬಗ್ಗೆ ತಿಳಿದುಕೊಳ್ಳೋಣ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಟಿ20 ಸ್ವರೂಪದಲ್ಲಿ ತ್ರಿಶತಕ ಬಾರಿಸಿದ ವಿಶ್ವದ ಏಕೈಕ ಕ್ರಿಕೆಟಿಗ ಯಾರು ಗೊತ್ತಾ? ಇವರು ಭಾರತದವರೇ...


ರಿಕಿ ಪಾಂಟಿಂಗ್:


ರಿಕಿ ಪಾಂಟಿಂಗ್ ಅವರು ಆಸ್ಟ್ರೇಲಿಯಾದ ಉತ್ತಮ ನಾಯಕರಾಗಿದ್ದಾರೆ. ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಎರಡು ಬಾರಿ ಏಕದಿನ ವಿಶ್ವಕಪ್ ವಶಪಡಿಸಿಕೊಂಡಿತ್ತು. 2003 ಮತ್ತು 2007ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಅದಾದ ನಂತರ 2002 ಮತ್ತು 2012 ರ ನಡುವೆ 230 ODI ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಇದರಲ್ಲಿ ಕಾಂಗರೂ ಪಡೆ 165 ಪಂದ್ಯಗಳನ್ನು ಗೆದ್ದಿದ್ದರೆ, 51 ರಲ್ಲಿ ಮಾತ್ರ ಸೋತಿತ್ತು. ರಿಕಿ ಪಾಂಟಿಂಗ್ ನಾಯಕನಾಗಿ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ ತಂಡ 48 ಗೆದ್ದಿದೆ. ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ನಾಯಕ ರಿಕಿ ಪಾಂಟಿಂಗ್.


ಮಹೇಂದ್ರ ಸಿಂಗ್ ಧೋನಿ:


ಮಹೇಂದ್ರ ಸಿಂಗ್ ಧೋನಿ ತಮ್ಮ ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. ಮೂರು ವಿಭಿನ್ನ ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ. ಅವರ ನಾಯಕತ್ವದಲ್ಲಿ, 2007 ರ T20 ವಿಶ್ವಕಪ್, 2011 ODI ವಿಶ್ವಕಪ್ ಮತ್ತು 2013 ಚಾಂಪಿಯನ್ಸ್ ಟ್ರೋಫಿಯನ್ನು ಭಾರತ ಗೆದ್ದಿದೆ. 200 ODI ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದರು. ಇದರಲ್ಲಿ ತಂಡವು 110 ಗೆದ್ದಿತ್ತು.


ಗ್ರೇಮ್ ಸ್ಮಿತ್


ಗ್ರೇಮ್ ಸ್ಮಿತ್ ವಿಶ್ವದ ಶ್ರೇಷ್ಠ ಟೆಸ್ಟ್ ನಾಯಕ ಎಂದೆನಿಸಲ್ಪಟ್ಟಿದ್ದಾರೆ. ನಾಯಕನಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವ ಗ್ರೇಮ್ ಸ್ಮಿತ್, 109 ಟೆಸ್ಟ್ ಪಂದ್ಯಗಳಲ್ಲಿ 53 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ತಂಡ ಗೆಲ್ಲುವಂತೆ ಮಾಡಿದ್ದಾರೆ. ಇನ್ನುಇವರ ನಾಯಕತ್ವದಲ್ಲಿ 150 ODI ಪಂದ್ಯಗಳಲ್ಲಿ 92 ಪಂದ್ಯಗಳನ್ನು ಗೆದ್ದಿದೆ. ಆದರೆ ಗ್ರೇಮ್ ಸ್ಮಿತ್ ಅವರ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಒಂದೇ ಒಂದು ವಿಶ್ವಕಪ್ ಗೆಲ್ಲಲು ಸಾಧ್ಯವಾಗಲಿಲ್ಲ.


ಸ್ಟೀಫನ್ ಫ್ಲೆಮಿಂಗ್


ನ್ಯೂಜಿಲೆಂಡ್‌ʼನ ಮಾಜಿ ನಾಯಕ ಸ್ಟೀಫನ್ ಫ್ಲೆಮಿಂಗ್ ಹೆಚ್ಚಿನ ಏಕದಿನ ಪಂದ್ಯಗಳಲ್ಲಿ ನಾಯಕತ್ವದ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಸ್ಟೀಫನ್ ಫ್ಲೆಮಿಂಗ್ ನ್ಯೂಜಿಲೆಂಡ್‌ʼಗಾಗಿ ಅನೇಕ ಪಂದ್ಯಗಳನ್ನು ಸ್ವಂತವಾಗಿ ಗೆದ್ದಿಕೊಟ್ಟಿದಾರೆ. ಸ್ಟೀಫನ್ ಫ್ಲೆಮಿಂಗ್ ಅವರು 1997 ರಿಂದ 2007 ರವರೆಗೆ ನ್ಯೂಜಿಲೆಂಡ್ ತಂಡದ ನಾಯಕರಾಗಿದ್ದರು. ಈ ಸಮಯದಲ್ಲಿ ನಾಯಕರಾಗಿ 218 ಪಂದ್ಯಗಳನ್ನು ಆಡಿದ್ದರು.


ಇದನ್ನೂ ಓದಿ: ವಾಮಿಕಾ ಜನಿಸಿದ ಬಳಿಕ ನಮ್ಮ ಬದುಕಲ್ಲಿ ಹೀಗಾಯ್ತು... ಮಗಳ ಬಗ್ಗೆ ಅನುಷ್ಕಾ ಶರ್ಮಾ ಹೇಳಿಕೆ ವೈರಲ್


ಸ್ಟೀವ್ ವಾ:


ಆಸ್ಟ್ರೇಲಿಯಾದ ಸ್ಟೀವ್ ವಾ ಯಶಸ್ವಿ ಟೆಸ್ಟ್ ನಾಯಕ. 57 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ತಂಡದ ನಾಯಕತ್ವ ವಹಿಸಿದ್ದರು, ಅದರಲ್ಲಿ ತಂಡವು 41 ರಲ್ಲಿ ಅದ್ಭುತ ವಿಜಯವನ್ನು ದಾಖಲಿಸಿತು. ಅವರ ಕಾಲದ ಆಸ್ಟ್ರೇಲಿಯಾ ತಂಡವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಸ್ಟೀವ್ ವಾ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು 1999 ರ ಏಕದಿನ ವಿಶ್ವಕಪ್ ಅನ್ನು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಗೆದ್ದಿತು. ಸ್ಟೀವ್ ವಾ 106 ಪಂದ್ಯಗಳಲ್ಲಿ ODI ತಂಡದ ನಾಯಕತ್ವವನ್ನು ವಹಿಸಿಕೊಂಡರು, ಇದರಲ್ಲಿ ತಂಡವು 67 ಪಂದ್ಯಗಳನ್ನು ಗೆದ್ದಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ