ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ನಲ್ಲಿ ನೂತನ ದಾಖಲೆ ಬರೆದ ಹಿಮಾದಾಸ್
ನವದೆಹಲಿ: ಫಿನ್ಲೆಂಡ್ ನಲ್ಲಿ ಗುರುವಾರ ವಿಶ್ವ ಮಟ್ಟದಲ್ಲಿ ಚಿನ್ನದ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ ಅಥ್ಲೀಟ್ ಎನ್ನುವ ಖ್ಯಾತಿಗೆ ಹಿಮಾ ದಾಸ್ ಪಾತ್ರರಾಗಿದ್ದಾರೆ. ಫಿನ್ಲೆಂಡ್ನಲ್ಲಿ ನಡೆದ IAAF ವಿಶ್ವ ಅಂಡರ್ -20 ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನಲ್ಲಿ ಅವರು 400 ಮೀಟರ್ ಫೈನಲ್ ನಲ್ಲಿ ಚಿನ್ನದ ಪದಕವನ್ನು ಕೊರಳಿಗೆ ಏರಿಸಿಕೊಂಡರು.
18 ವರ್ಷ ವಯಸ್ಸಿನ ಹಿಮಾ, 51.46 ಸೆಕೆಂಡುಗಳಲ್ಲಿ ಅವರು ಈ ಸಾಧನೆ ಮಾಡಿದರು. ಕಳೆದ ತಿಂಗಳು ಗುವಾಹಟಿ ಯಲ್ಲಿ ನಡೆದ ಅಂತರಾಜ್ಯ ಚಾಂಪಿಯನ್ ಶಿಪ್ ನಲ್ಲಿ 51.13 ಇದುವರೆಗಿನ ಅತ್ಯುತ್ತಮ ಸಾಧನೆಯಾಗಿದೆ.ಹಿಮಾ ದಾಸ್ ಇದೇ ಮೊದಲ ಬಾರಿಗೆ ಜಾಗತಿಕ ಮಟ್ಟದಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಚಿನ್ನದ ಪದಕವನ್ನು ಗೆದ್ದ ಮೊದಲ ಭಾರತೀಯಳು ಎನ್ನುವ ಖ್ಯಾತಿಗೆ ಪಾತ್ರರಾದರು.ಪುರುಷರು ಕೂಡ ಈವರೆಗೆ ಈ ವಿಭಾಗದಲ್ಲಿ ಈ ಸಾಧನೆಯನ್ನು ಮಾಡಿಲ್ಲ ಎನ್ನುವುದು ನಾವು ಗಮನಿಸಬಹುದು.
ನಂಬರ್ 4 ರ ಸಾಲಿನಲ್ಲಿ ತಮ್ಮ ಓಟವನ್ನು ಪ್ರಾರಂಭಿಸಿದ ಹಿಮಾ ರೊಮೇನಿಯಾದ ಆಂಡ್ರಿಯಾ ಮಿಕ್ಲೊಸ್ ಅವರ ಹಿಂದೆ ಇದ್ದರು ಆದರೆ ಅಂತಿಮ ಹಂತದಲ್ಲಿ ಅವರನ್ನು ಹಿಂದಿಕ್ಕುವ ಮೂಲಕ ಈ ಅಪರೂಪದ ಸಾಧನೆ ಮಾಡಿದರು.ಮಿಕ್ಲೋಸ್ 52.07 ಬೆಳ್ಳಿ ಪಡೆದರು ಮತ್ತು ಅಮೆರಿಕಾದ ಟೇಲರ್ ಮ್ಯಾನ್ಸನ್ 52.28 ರಲ್ಲಿ ಮೂರನೇ ಸ್ಥಾನ ಪಡೆದು ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡರು.
ಹಿಮಾ ದಾಸ್ ಅವರ ಈ ಸಾಧನೆಗೆ ಪ್ರಧಾನಿ,ರಾಷ್ಟ್ರಪತಿ ಹಾಗೂ ಇತರ ಗಣ್ಯವ್ಯಕ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಚಿನ್ನದ ಪದಕವನ್ನು ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಹಿಮಾದಾಸ್ " ವಿಶ್ವ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕವನ್ನು ಗೆದ್ದಿರುವುದಕೆ ನಿಜಕ್ಕೂ ಸಂತಸವಾಗಿದೆ. ನಾನು ನಾನು ಎಲ್ಲ ಭಾರತೀಯರಿಗೆ ಮತ್ತು ನನಗೊಸ್ಕರ್ ಕೇಕೆ ಹಾಕಿ ಬೆಂಬಲ ನಿದಿದವರಿಗೆ ನಾನು ಧನ್ಯವಾದಗಳನ್ನು ಹೇಳಲು ಇಚ್ಚಿಸುತ್ತೇನೆ.ಈ ರೀತಿಯ ಬೆಂಬಲ ನನಗೆ ನಿಜಕ್ಕೂ ಸ್ಪೂರ್ತಿದಾಯಕ ಎಂದು ಅವರು ಸ್ಪರ್ಧೆಯ ನಂತರ ತಿಳಿಸಿದರು.