ನವದೆಹಲಿ: ಟೀಮ್ ಇಂಡಿಯಾದ 'ಹಿಟ್ಮ್ಯಾನ್' ರೋಹಿತ್ ಶರ್ಮಾ (Rohit Sharma) ಅವರ ಹೆಸರನ್ನು ಈ ವರ್ಷ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಇದು ದೇಶದ ಕ್ರೀಡಾಪಟುಗಳಿಗೆ ನೀಡಲಾಗುವ ಅತಿದೊಡ್ಡ ಕ್ರೀಡಾ ಪ್ರಶಸ್ತಿ. ರೋಹಿತ್ ಜೊತೆಗೆ ಮಹಿಳಾ ಕುಸ್ತಿಪಟು ವಿನೇಶ್ ಫೋಗಾಟ್, ಟೇಬಲ್ ಟೆನಿಸ್ ಆಟಗಾರ್ತಿ ಮಾನಿಕಾ ಬಾತ್ರಾ ಮತ್ತು 2016ರ ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಮರಿಯಪ್ಪನ್ ತಂಗವೇಲು ಕೂಡ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


ಜೀವನದ ಈ ಒಂದು ಹೊಡೆತ ಕೆ.ಎಲ್. ರಾಹುಲ್ ಅವರ ಚಿಂತನೆಯನ್ನೇ ಬದಲಾಯಿಸಿದೆ

COMMERCIAL BREAK
SCROLL TO CONTINUE READING

2020ರ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಸಂದರ್ಭದಲ್ಲಿ ಕಳೆದ ವರ್ಷ ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಗಳಿಸಿದ ಕ್ರೀಡಾಪಟುಗಳನ್ನು ರಾಷ್ಟ್ರಪತಿಗಳು ಗೌರವಿಸಲಿದ್ದಾರೆ. ಈ ದಿನ ಆಟಗಾರರಿಗೆ ಅರ್ಜುನ ಪ್ರಶಸ್ತಿ ಮತ್ತು ಅತ್ಯುತ್ತಮ ಆಟಗಾರನಿಗೆ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಇದಲ್ಲದೆ ಅತ್ಯುತ್ತಮ ಕೋಚ್‌ಗೆ ದ್ರೋಣಾಚಾರ್ಯ ಪ್ರಶಸ್ತಿಯನ್ನು ನೀಡಲಾಗುತ್ತದೆ.