ಹಾಕಿ ವಿಶ್ವಕಪ್: ಕೆನಡಾ ವಿರುದ್ದ 5-1 ಅಂತರದಲ್ಲಿ ಗೆದ್ದು ಕ್ವಾರ್ಟರ್ ಫೈನಲ್ ತಲುಪಿದ ಭಾರತ
ಹಾಕಿ ವಿಶ್ವಕಪ್ ನಲ್ಲಿ 5-1 ಅಂತರದಲ್ಲಿ ಗೆಲುವು ಗಳಿಸಿದ ಭಾರತ ತಂಡವು ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ.
ನವದೆಹಲಿ: ಹಾಕಿ ವಿಶ್ವಕಪ್ ನಲ್ಲಿ 5-1 ಅಂತರದಲ್ಲಿ ಗೆಲುವು ಗಳಿಸಿದ ಭಾರತ ತಂಡವು ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ.
ಭುವನೇಶ್ವರದ ಕಳಿಂಗ ಕ್ರೀಡಾಂಗಣದಲ್ಲಿ ನಡೆದ ಪ್ರೀ ಕ್ವಾರ್ಟರ್ ಫೈನಲ್ ನಲ್ಲಿ ಕೆನಡಾ ವಿರುದ್ದ ಗೆಲುವು ಸಾಧಿಸಿದ ಭಾರತ ತಂಡವು ಈಗ ಕ್ವಾರ್ಟರ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಇದಕ್ಕೂ ಮೊದಲು ಭಾರತ ತಂಡವು ಬಲಿಷ್ಠ ಬೆಲ್ಜಿಯಂ ತಂಡದ ವಿರುದ್ದ ಡ್ರಾ ಸಾಧಿಸಿತು.
ಜಿದ್ದಾ ಜಿದ್ದಿನ ಪಂದ್ಯದಲ್ಲಿ ಭಾರತದ ಪರ 12 ನೇ ನಿಮಿಷದಲ್ಲಿ ಹರ್ಮನ್ಪ್ರೀತ್ ಅವರು ಮೊದಲ ಗೋಲ್ ಗಳಿಸುವುದರ ಮೂಲಕ ತಂಡದ ಮುನ್ನಡೆಗೆ ಕಾರಣವಾದರು.ಇದಾದ ನಂತರ ಭಾರತದ ಪರ, ಚಿಂಗ್ಲೆನ್ಸನ್, ಲಲಿತ್, ರೋಹಿದಾಸ್ ಗೋಲು ಗಳಿಸುವ ಮೂಲಕ ಭರ್ಜರಿ ಮುನ್ನಡೆಗೆ ಕಾರಣಕರ್ತರಾದರು.ಇನ್ನೊಂದೆಡೆಗೆ ಕೆನಡಾ ಪರ ಫ್ಲೋರಿಸ್ ವಾನ್ ಸನ್ ಒಬ್ಬರೇ ಗಳಿಸಿದರು. ಆ ಮೂಲಕ ಭಾರತ 5-1 ರ ಅಂತರದಲ್ಲಿ ಹಾಕಿ ವಿಶ್ವಕಪ್ ಕ್ವಾರ್ಟರ್ ಫೈನಲ್ ತಲುಪಿತು.
ಪಂದ್ಯದ ಪ್ರಾರಂಭದಿಂದಲೂ ಕೆನಡಾ ವಿರುದ್ದ ಪ್ರಾಬಲ್ಯ ಸಾಧಿಸಿದ ಭಾರತ ತಂಡವು ಕೊನೆಯವರೆಗೂ ಉತ್ತಮ ಪ್ರದರ್ಶನವನ್ನು ನೀಡಿತು.