ಹುಬ್ಬಳ್ಳಿ:  ಬಹಳ‌ ದಿನಗಳ‌ ನಂತರ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಂತರಾಷ್ಟ್ರೀಯ ಕ್ರಿಕೇಟ್ ಪಂದ್ಯ ನಡೆಯಲಿದೆ. ಇದರಿಂದ ಕ್ರಿಕೆಟ್ ಪ್ರೇಮಿಗಳಲ್ಲಿ ಸಂಭ್ರಮ ಮನೆ ಮಾಡಿದೆ ಸುಮಾರು 3 ವರ್ಷಗಳ ಬಳಿಕ ಹುಬ್ಬಳ್ಳಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಂಚಿಕೆಯಾಗಿದೆ.
ಸೆಪ್ಟೆಂಬರ್ 8 ರಿಂದ 11ರವರೆಗೆ ರಾಜನಗರ ಕೆಎಸ್‌ಸಿಎ (ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ) ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವೆ ಚತುರ್ದಿನ (ಟೆಸ್ಟ್) ಪಂದ್ಯ ನಡೆಯಲಿದೆ.


COMMERCIAL BREAK
SCROLL TO CONTINUE READING

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಉಭಯ ತಂಡಗಳ ನಡುವಿನ 3 ಚತುರ್ದಿನ ಪಂದ್ಯಗಳನ್ನು ಬೆಂಗಳೂರಿಗೆ ಹಂಚಿಕೆ ಮಾಡಿತ್ತು. ಅದರಲ್ಲಿ 2ನೇ ಚತುರ್ದಿನ ಪಂದ್ಯ ಹುಬ್ಬಳ್ಳಿಗೆ ಲಭ್ಯವಾಗಿದೆ. ಮೊದಲ ಹಾಗೂ 3ನೇ ಚತುರ್ದಿನ ಪಂದ್ಯ ಬೆಂಗಳೂರಿನಲ್ಲಿಯೇ ನಡೆಯಲಿದೆ. ಹುಬ್ಬಳ್ಳಿಯಲ್ಲಿ ಈ ಹಿಂದೆ 2019ರ ಮೇ ತಿಂಗಳಲ್ಲಿ ಭಾರತ-ಶ್ರೀಲಂಕಾ ಎ ತಂಡಗಳ ನಡುವೆ 1 ಚತುರ್ದಿನ ಪಂದ್ಯ ಹಾಗೂ 2 ಏಕದಿನ ಪಂದ್ಯಗಳು ನಡೆದಿದ್ದವು.


ಇದನ್ನೂ ಓದಿ: DK Shivakumar : 'ಸೆ.1 ರಂದು ರಾಜ್ಯಕ್ಕೆ ಬರಲಿದೆ ದೆಹಲಿಯಿಂದ ಕಾಂಗ್ರೆಸ್ ಸ್ಪೆಷಲ್ ಟೀಂ' 


ಇದಕ್ಕೂ ಮೊದಲು 2017ರಲ್ಲಿ ಭಾರತ-ಬಾಂಗ್ಲಾದೇಶ ಎ ಮಹಿಳಾ ತಂಡಗಳ ನಡುವೆ ಕ್ರಿಕೆಟ್ ಪಂದ್ಯಕ್ಕೆ ಕೆಎಸ್ಸಿಎ ಮೈದಾನ ಆತಿಥ್ಯ ವಹಿಸಿತ್ತು...ಹುಬ್ಬಳ್ಳಿಯಲ್ಲಿ 2013ರಲ್ಲಿ ಭಾರತ- ವೆಸ್ಟ್ ಇಂಡೀಸ್ ಎ ತಂಡಗಳ ನಡುವೆ ಮೊದಲ ಬಾರಿ ಆಯೋಜನೆಯಾಗಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವು ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆಗ ಖ್ಯಾತನಾಮ ಆಟಗಾರರಾದ ವಿರೇಂದ್ರ ಸೆಹ್ವಾಗ್, ಗೌತಮ್‌ ಗಂಭೀರ, ಜಹೀರ ಖಾನ್‌ ಆಡಿದ್ದರು. ಈಗ ಭಾರತ ಟೆಸ್ಟ್ ತಂಡದಲ್ಲಿರುವ ಚೇತೇಶ್ವರ ಪೂಜಾರ ಈ ಮೈದಾನದಲ್ಲಿ ಅಜೇಯ ತ್ರಿಶತಕ ಬಾರಿಸಿದ್ದು, ಕ್ರಿಕೆಟ್ ಪ್ರೇಮಿಗಳ ನೆನಪಿನಲ್ಲಿ ಉಳಿದಿದೆ.ಈ ಬಾರಿ ಋತುರಾಜ ಗಾಯಕವಾಡ, ಪ್ರಸಿದ್ಧ ಕೃಷ್ಣ, ರಾಹುಲ ಚಹ‌, ಕುಲದೀಪ ಯಾದವ, ಉಮ್ರಾನ್ ಮಲ್ಲಿಕ್ ಅವರಂಥ ಅಂತಾರಾಷ್ಟ್ರೀಯ ಆಟಗಾರರು ಭಾರತ ಎ ತಂಡದಲ್ಲಿ ಇದ್ದಾರೆ. ಕಳೆದ 3 ವರ್ಷಗಳಿಂದ ಹುಬ್ಬಳ್ಳಿ ರಾಜನಗರ ಮೈದಾನದಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಿರಲಿ, ದೇಶೀಯ ಕ್ರಿಕೆಟ್ (ರಣಜಿ) ಪಂದ್ಯಗಳೂ ನಡೆದಿಲ್ಲ. ಇದೀಗ ಕೆಎಸ್‌ಸಿಎ ಅರ್ಜನ್ ಎನ್‌. ಆಯೋಜಿಸಿರುವ ಮಹಾರಾಜ ಟ್ರೋಫಿ ಟ್ವೆಂಟಿ-20 ಕ್ರಿಕೆಟ್ ಪಂದ್ಯವು ಮಳೆಯ ಕಾರಣಕ್ಕೆ ಹುಬ್ಬಳ್ಳಿಗೆ ಹಂಚಿಕೆಯಾಗಿರಲಿಲ್ಲ. ಇದೀಗ ಭಾರತ-ನ್ಯೂಜಿಲೆಂಡ್ ಎ ತಂಡಗಳ ನಡುವಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಹಂಚಿಕೆ ಆಗಿರುವುದು ಇಲ್ಲಿಯ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.