ನವದೆಹಲಿ: ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಆರ್ಸಿಬಿ ತಂಡದ ಶಿಮ್ರಾನ್ ಹೆತ್ಮಾರ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನು ವಹಿಸಿದರು.



COMMERCIAL BREAK
SCROLL TO CONTINUE READING

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಹೆತ್ಮಾರ್ ಕೇವಲ 47 ಎಸೆತಗಳಲ್ಲಿ 75 ರನ್ ಗಳನ್ನು ಗಳಿಸಿದರು.ಇನ್ನೊಂದೆಡೆಗೆ ಪ್ಲೇ ಆಫ್ ಹಂತ ತಲುಪಲು ಮಾಡು ಇಲ್ಲವೇ ಮಡಿ ಎನ್ನುವ ಸ್ಥಿತಿಯಲ್ಲಿದ್ದ ಹೈದಾರಾಬಾದ್ ತಂಡಕ್ಕೆ ನಿರಾಸೆಯಾಯಿತು.ಕೊನೆಯ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಮಾತನಾಡಿದ ಹೆತ್ಮಾರ್ " ನಾನು ವಿರಾಟ್ ಕೊಹ್ಲಿ ಹಾಗೂ ಎಬಿ.ಡಿವಿಲಿಯರ್ಸ್ ರಿಂದ ಸಾಕಷ್ಟು ಕಲಿತಿದ್ದೇನೆ ಆರ್ಸಿಬಿ ನಿಜಕ್ಕೂ ಉತ್ತಮ ಫ್ರಾಂಚೈಸ್ ಆಗಿದ್ದು, ನಾನು ನನ್ನ ಆಟವನ್ನು ಆಡಲು ಒಂದು ಹೆಜ್ಜೆ ಮುಂದೆ ಇಟ್ಟೆ ನನಗೆ ಎಷ್ಟು ಸಾಧ್ಯವಾಗುತ್ತೋ ಅಷ್ಟು ನಾನು ಪ್ರಯತ್ನಿಸಿದೆ" ಎಂದು ಹೇಳಿದರು.



ಈ ಹಿಂದೆ ಅವರನ್ನು ಕಳಪೆ ಪ್ರದರ್ಶನ ನೀಡಿದ್ದರಿಂದಾಗಿ ಅವರನ್ನು ಆಟದಿಂದ ಕೈ ಬಿಡಲಾಗಿತ್ತು, ಕೇವಲ ನಾಲ್ಕು ಪಂದ್ಯಗಳಲ್ಲಿ  15ರನ್ ಗಳನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾಗಿದ್ದರು.ಈ ಕುರಿತಾಗಿ ಮಾತನಾಡಿದ ಅವರು " ಇದು ನಿಜಕ್ಕೂ ಕಷ್ಟದ ಸಮಯವಾಗಿತ್ತು.ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಸವಾಲಿನ ಸಂಗತಿಯಾಗಿದ್ದರಿಂದ ನಾನು ತಂಡದ ಮ್ಯಾನೇಜ್ಮೆಂಟ್ ಜೊತೆಗೆ ಮಾತನಾಡಿದೆ,ಆಗ ಅವರ ಸಲಹೆಯಿಂದಾಗಿ ನನ್ನ ಯೋಜನೆಯನ್ನು ರೂಪಿಸಲು ಸಜ್ಜಾದೆ.ಈ ಐಪಿಎಲ್ ಅದ್ಬುತ ಅನುಭವ" ಎಂದು ಹೇಳಿದರು.