ನವದೆಹಲಿ: ಕ್ರಿಕೆಟ್ ನ ಎಲ್ಲ ಮಾದರಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನೀಡುತ್ತಿರುವ ಪ್ರದರ್ಶನಕ್ಕೆ ಮಾಜಿ ಆಟಗಾರ ಮೊಹಿಂದರ್ ಅಮರನಾಥ್  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಟೈಮ್ಸ್ ಆಫ್ ಇಂಡಿಯಾ ಗೆ ಬರೆದ ಅಂಕಣದಲ್ಲಿ ತಿಳಿಸಿರುವ ಅವರು " ಕೊಹ್ಲಿಯವರಲ್ಲಿ ಮಹತ್ತರ ಅಂಶವೇನೆಂದರೆ ಪರೀಕ್ಷೆಯ ಸಂದರ್ಭದಲ್ಲಿ ಅವರು ಆಡುತ್ತಿದ್ದಾರೆ ಅಲ್ಲದೆ ಅವರು ಬೇಗನೆ ಆಯಾ ಸಂದರ್ಭಕ್ಕೆ ಬೇಗನೆ  ಹೊಂದಿಕೊಳ್ಳುತ್ತಿದ್ದಾರೆ.ಇಂಗ್ಲೆಂಡ್ ನಲ್ಲಿ ಆಟವಾಡುವುದು ಜಗತ್ತಿನ ಬೇರೆ ಭಾಗದಲ್ಲಿ ಆಡುವುದಕ್ಕಿಂತ ಭಿನ್ನ.ಅದಕ್ಕೆ ಪರಿಸ್ಥಿತಿಗೆ ತಕ್ಕಂತೆ  ತಮ್ಮ ತಂತ್ರಗಳಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುತ್ತಿದ್ದಾರೆ.ಆದ್ದರಿಂದಾಗಿ ಇದೆಲ್ಲವೂ  ಸಾಧ್ಯವಾಗುತ್ತಿದೆ ಎಂದು ತಿಳಿಸಿದರು.


ಕೊಹ್ಲಿ ಈಗ ಇಂಗ್ಲೆಂಡ್ ಟೂರ್ನಿಯಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಪ್ರದರ್ಶನದ ಮೂಲಕ ಮಿಂಚುತ್ತಿದ್ದಾರೆ.