ಧೋನಿ 2023 ರ ವಿಶ್ವಕಪ್ ತಂಡದಲ್ಲಿದ್ದರೆ ಮತ್ತೆ ಕ್ರಿಕೆಟ್ ಗೆ ಮರಳುವೆ- ಎಬಿಡಿ ವಿಲಿಯರ್ಲ್ಸ್
ಜಾರ್ಖಂಡದ ರಾಂಚಿಯಂತಹ ಸಣ್ಣ ನಗರದಿಂದ ಬಂದ ಎಂ.ಎಸ್.ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತನ್ನು ಮೂಡಿಸಿದ್ದಾರೆ. ಅವರ ಆಟದ ಪ್ರಭಾವ ಕೇವಲ ದೇಶಿಯ ಆಟಗಾರರಿಗೆ ಅಲ್ಲ ವಿದೇಶಿ ಆಟಗಾರರಿಗೂ ಸ್ಪೂರ್ತಿದಾಯಕವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡಿವಿಲಿಯರ್ಸ್ ಹೇಳಿರುವ ಮಾತೆ ಸಾಕ್ಷಿ.
ನವದೆಹಲಿ: ಜಾರ್ಖಂಡದ ರಾಂಚಿಯಂತಹ ಸಣ್ಣ ನಗರದಿಂದ ಬಂದ ಎಂ.ಎಸ್.ಧೋನಿ ಕ್ರಿಕೆಟ್ ಇತಿಹಾಸದಲ್ಲಿ ಅಚ್ಚಳಿಯದ ಗುರುತನ್ನು ಮೂಡಿಸಿದ್ದಾರೆ. ಅವರ ಆಟದ ಪ್ರಭಾವ ಕೇವಲ ದೇಶಿಯ ಆಟಗಾರರಿಗೆ ಅಲ್ಲ ವಿದೇಶಿ ಆಟಗಾರರಿಗೂ ಸ್ಪೂರ್ತಿದಾಯಕವಾಗಿದೆ.ಇದಕ್ಕೆ ಈಗ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಡಿವಿಲಿಯರ್ಸ್ ಹೇಳಿರುವ ಮಾತೆ ಸಾಕ್ಷಿ.
ಒಂದು ವೇಳೆ ಧೋನಿ 2023 ರ ವಿಶ್ವಕಪ್ ವರೆಗೆ ತಂಡದಲ್ಲಿದ್ದರೆ ತಾವು ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ ಆಟಕ್ಕೆ ಮರಳುವುದಾಗಿ ಹೇಳಿದ್ದಾರೆ.ಬ್ರೇಕ್ ಫಾಸ್ಟ್ ವಿತ್ ಚಾಂಪಿಯನ್ ಎಪಿಸೋಡ್ ನಲ್ಲಿ ಮಾತನಾಡಿದ ಅವರು "ನಾನು ಎಷ್ಟು ವಯಸ್ಸಿನವನಾಗಿರುತ್ತೇನೆ...39..ಧೋನಿ ಇದ್ದರೆ ನಾನು ಖಂಡಿತ ಮತ್ತೆ ತಂಡಕ್ಕೆ ಮರಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ನಡುವಿನ ಹೋಲಿಕೆ ಬಗ್ಗೆ ಮಾತನಾಡುತ್ತಾ ಇಬ್ಬರು ಆಟಗಾರರು ಭಿನ್ನ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಹೇಳಿದ ನಂತರ ಜಗತ್ತಿನಾದ್ಯಂತ ವಿವಿಧ ಟ್ವೆಂಟಿ ಟೂರ್ನಿ ಗಳಲ್ಲಿ ಆಡುತ್ತಿದ್ದಾರೆ.