ICC AllRounder ODI Rankings : ಐಸಿಸಿ ಏಕದಿನ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಆಗ್ರಸ್ಥಾನದಲ್ಲಿದ್ದಾರೆ.  ಮೊದಲ ಬಾರಿ ಆಗ್ರಸ್ಥಾನಕ್ಕೇರಿದ್ದು, ಈ ಸ್ಥಾನಕ್ಕೇರಿದ ಅತ್ಯಂತ ಹಿರಿಯ ಆಟಗಾರ ಎಂಬ ಗೌರವವನ್ನು ಪಡೆದುಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಬೌಲರ್ ಗಳ ಪಟ್ಟಿಯಲ್ಲಿ ಜಸ್ಪ್ರಿತ್ ಬಮ್ರಾ ನಂಬರ್ 1 ಬೌಲರ್ ಆಗಿ ದೃಢವಾಗಿ ಅಗ್ರಸ್ಥಾನದಲ್ಲಿ ಉಳಿದುಕೊಂಡಿದ್ದು, ರವೀಂದ್ರ ಜಡೇಜಾ ಇನ್ನೂ ಟೆಸ್ಟ್ ಶ್ರೇಯಾಂಕದಲ್ಲಿ ನಂ.1 ಆಲ್‌ರೌಂಡರ್ ಆಗಿ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ.


ಇದನ್ನು ಓದಿ :UPSC EXAMS 2024 : ಪರೀಕ್ಷೆಗೆ ಅಧಿಸೂಚನೆ ಪ್ರಕಟ, ಅರ್ಜಿ ಸಲ್ಲಿಸಲು ಮಾರ್ಚ್ 5 ಕೊನೆಯ ದಿನಾಂಕ


ಟೆಸ್ಟ್ ರಾಂಕಿಂಗ್ ನಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ ಎಂದು  ಬುಧವಾರ, ಫೆಬ್ರವರಿ 14, 2024 ರಂದು ICC ಶ್ರೇಯಾಂಕಗಳ ಇತ್ತೀಚಿನ ಅಪ್‌ಡೇಟ್‌ನಲ್ಲಿ ತಿಳಿದುಬಂದಿದೆ. 


39 ವರ್ಷ 1 ತಿಂಗಳು, ನಬಿ ಐಸಿಸಿ ODI ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ, ಜೂನ್ 2015 ರಲ್ಲಿ ಅಗ್ರಸ್ಥಾನದಲ್ಲಿರುವಾಗ 38 ವರ್ಷ 8 ತಿಂಗಳಾಗಿದ್ದ ತಿಲಕರತ್ನೆ ದಿಲ್ಶಾನ್ ಅವರ ದಾಖಲೆಯನ್ನು ಮುರಿದರು. 


ಇದನ್ನು ಓದಿ : ರಾಜ್ಯಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್


ಏಕದಿನ ಬೌಲಿಂಗ್ ಶ್ರೇಯಾಂಕದಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.