ICC Big Descision:T20 WC 2021 ನಲ್ಲಿ ಜಾರಿಗೆ ಬರಲಿದೆ ಈ ಹೊಸ ನಿಯಮ
T20 World cup: ಮುಂಬರುವ ಟಿ 20 ವಿಶ್ವಕಪ್ ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ICC) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಡಿಆರ್‌ಎಸ್ ಅನ್ನು ಮೊದಲ ಬಾರಿಗೆ ಜಾರಿಗೊಳಿಸಲಾಗುವುದು ಎಂದು ICC ಹೇಳಿದೆ.
T20 World Cup 2021: ಮುಂಬರುವ ಟಿ 20 ವಿಶ್ವಕಪ್ (ICC T20 World Cup 2021) ಬಗ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ICC) ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಯುಎಇ ಮತ್ತು ಒಮಾನ್‌ನಲ್ಲಿ ನಡೆಯಲಿರುವ ಪುರುಷರ ಟಿ 20 ವಿಶ್ವಕಪ್‌ನಲ್ಲಿ ಡಿಆರ್‌ಎಸ್ ಅನ್ನು ಮೊದಲ ಬಾರಿಗೆ ಜಾರಿಗೊಳಿಸಲಾಗುವುದು ಎಂದು ICC (International Cricket Council) ಹೇಳಿದೆ. ಪಂದ್ಯಾವಳಿಗಳಲ್ಲಿ DRS (Descision Review System) ಬಳಕೆಯನ್ನು ಐಸಿಸಿ ಅನುಮೋದಿಸಿದೆ. ಮುಂಬರುವ ಪಂದ್ಯಾವಳಿಯಲ್ಲಿ ಐಸಿಸಿ ಆಟದ ನಿಯಮಗಳಲ್ಲಿ ಡಿಆರ್‌ಎಸ್ ಅನ್ನು ಸೇರಿಸಿದೆ. ಪುರುಷರ ಟಿ 20 ವಿಶ್ವಕಪ್ ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ ನಡೆಯಲಿದೆ.
ಇದನ್ನೂ ಓದಿ-T20 World Cup 2021: ICCಯಿಂದ ವಿಶ್ವ T-20 ಆಯೋಜನೆಯ ಜಾಗ ಮತ್ತು ದಿನಾಂಕಗಳ ಘೋಷಣೆ
ESPN CrickInfo ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಪ್ರತಿ ತಂಡವು ಪ್ರತಿಯೊಂದು ಇನ್ನಿಂಗ್ಸ್‌ನಲ್ಲಿ ಒಟ್ಟು ಎರಡು DRS ಅವಕಾಶಗಳನ್ನು ಪಡೆಯಲಿದೆ. ಈ ಹಿಂದೆ ಡಿಆರ್‌ಎಸ್ ಅನ್ನು ಟಿ 20 ವಿಶ್ವಕಪ್‌ನಲ್ಲಿ ಬಳಸಲಾಗಿರಲಿಲ್ಲ. 2016 ರಲ್ಲಿ ಕೊನೆಯ ಬಾರಿ ಟಿ 20 ವಿಶ್ವಕಪ್ ಆಡಿದಾಗ ಡಿಆರ್ ಎಸ್ ಅನ್ನು ಈ ರೂಪ ಪಂದ್ಯಾವಳಿಗಳಲ್ಲಿ ಬಳಸಿರಲಾಗಿಲ್ಲ. ವೆಸ್ಟ್ ಇಂಡೀಸ್‌ನಲ್ಲಿ ಆಡಿದ ಮಹಿಳಾ ಟಿ 20 ವಿಶ್ವಕಪ್ 2018 ರಲ್ಲಿ ಐಸಿಸಿ ಟಿ 20 ಟೂರ್ನಿಯಲ್ಲಿ ಡಿಆರ್‌ಎಸ್ ಅನ್ನು ಮೊದಲ ಬಾರಿಗೆ ಬಳಸಲಾಯಿತು. ಇದರ ನಂತರ, ಈ ವ್ಯವಸ್ಥೆಯನ್ನು 2020 ರಲ್ಲಿ ಆಸ್ಟ್ರೇಲಿಯಾದಲ್ಲಿ ಆಡಿದ ಮಹಿಳಾ ಟಿ 20 ವಿಶ್ವಕಪ್‌ನಲ್ಲಿಯೂ ಬಳಸಲಾಗಿದೆ.
ಇದನ್ನೂ ಓದಿ-IPL 2021, CSK vs DC: ಇಂದು ಮೊದಲ ಕ್ವಾಲಿಫೈಯರ್, ಫೈನಲ್ ಗಾಗಿ ‘ಗುರು-ಶಿಷ್ಯ’ರ ಕಾಳಗ..!
DRS ಏಕೆ ಬಳಕೆಯಾಗುತ್ತದೆ?
ಫೀಲ್ಡ್ ಅಂಪೈರ್ ಮೂಲಕ ಆಟಗಾರಾರನ್ನು ಔಟ್ ಘೋಷಿಸಲಾದ ಸಂದರ್ಭಗಳಲ್ಲಿ ಆಗುವ ತಪ್ಪುಗಳನ್ನು ಸುಧಾರಿಸಲು DRS ನಿಯಮ ರೂಪಿಸಲಾಗಿದೆ. ಒಂದು ವೇಳೆ ಫೀಲ್ಡ್ ಅಂಪೈರ್ ಫೀಲ್ಡಿಂಗ್ ಫೀಲ್ಡಿಂಗ್ ಗೆ ಇಳಿದ ತಂಡದ ಆಟಗಾರರ ಮನವಿಯನ್ನು ತಿರಸ್ಕರಿಸಿದ ಗಳಲ್ಲಿಯೂ ಕೂಡ ಆಗುವ ತಪ್ಪುಗಳನ್ನು ಸುಧಾರಿಸಲು ಕ್ಷೇತ್ರ ರಕ್ಷಣಾ ತಂಡದ ನಾಯಕ ಇದನ್ನು ಬಳಸಬಹುದು. ಆಗ ರಿಪ್ಲೆ ವಿಕ್ಷೀಸಿದ ಬಳಿಕ ಟಿವಿ ಅಂಪೈರ್ ಸರಿಯಾದ ನಿರ್ಣಯವನ್ನು ಘೋಷಿಸುತ್ತಾರೆ.
ಇದನ್ನೂ ಓದಿ-IND vs PAK ಪಂದ್ಯ: ರೋಹಿತ್ ಶರ್ಮಾಗೆ ಟಿಕೆಟ್ ಬೇಡಿಕೆಯಿಟ್ಟ ಅಭಿಮಾನಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ