ನವದೆಹಲಿ: ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ ಕಂಡಿದೆ. ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅವರ ಆಟದಿಂದಾಗಿ 136 ರನ್ ಗಳ ಜೊತೆಯಾಟ ತಂಡದ ರನ್ ಗತಿಯನ್ನು ಹೆಚ್ಚುವಂತೆ ಮಾಡಿತು.



COMMERCIAL BREAK
SCROLL TO CONTINUE READING

ಆದರೆ ವಹಾಬ್ ರಿಯಾಜ್ ಅವರ ಎಸೆತದಲ್ಲಿ ಲೋಕೇಶ್ ರಾಹುಲ್ ಅವರು  ಬಾಬರ್ ಅಜಂಗೆ ಸುಲಭ ಕ್ಯಾಚ್ ನೀಡಿ ನಿರ್ಗಮಿಸಿದರು.ರಾಹುಲ್ 78 ಎಸೆತಗಳಲ್ಲಿ 57 ರನ್ ಗಳಿಸಿದರು. ಇದರಲ್ಲಿ ಮೂರು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರ್ ಗಳು ಸೇರಿವೆ. ರಾಹುಲ್ ಅರ್ಧ ಶತಕವನ್ನು ಸಿಕ್ಸರ್ ಮೂಲಕ ಗಳಿಸಿರುವುದು ವಿಶೇಷವಾಗಿತ್ತು. 



ಇನ್ನೊಂದೆಡೆಗೆ ರೋಹಿತ್ ಶರ್ಮಾ ಈ ವಿಶ್ವಕಪ್ ಟೂರ್ನಿಯಲ್ಲಿ ಕೇವಲ ಮೂರು ಇನ್ನಿಂಗ್ಸ್ ನಲ್ಲಿ ಎರಡು ಶತಕಗಳನ್ನು ಗಳಿಸಿದರು. 86 ಎಸೆತಗಳಲ್ಲಿ  9 ಬೌಂಡರಿ ಹಾಗೂ ಸಿಕ್ಸರ್ ಗಳ ಮೂಲಕ 100 ಗಡಿಯನ್ನು ರೋಹಿತ್ ಶರ್ಮಾ ತಲುಪಿದರು.