ನವದೆಹಲಿ:  ಈಗ ಭಾರತ-ನ್ಯೂಜಿಲೆಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯಕ್ಕೆ ಮಳೆ ಅಡಚಣೆಯಾದ ಹಿನ್ನಲೆಯಲ್ಲಿ, ಒಂದು ವೇಳೆ ಫೈನಲ್ ಪಂದ್ಯದಲ್ಲೂ ಹೀಗೆ ಆದರೆ ವಿಶ್ವಕಪ್ ಟ್ರೋಫಿಯನ್ನು ಯಾರಿಗೆ ನೀಡಲಾಗುತ್ತೆ ಎನ್ನುವ ವಿಚಾರವಾಗಿ ಈಗ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. 


COMMERCIAL BREAK
SCROLL TO CONTINUE READING

ನಿನ್ನೆ ನಡೆದ ಭಾರತದ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು.ಭಾರತದ ಭರ್ಜರಿ ಬೌಲಿಂಗ್ ದಾಳಿಯಿಂದಾಗಿ ನ್ಯೂಜಿಲೆಂಡ್ ತಂಡದ ರನ್ ಗತಿಗೆ ಕಡಿವಾಣ ಬಿದ್ದಿದೆ. ಮಳೆಯಿಂದ ಸ್ಥಗಿತಗೊಂಡ ಸಂದರ್ಭದಲ್ಲಿ ನ್ಯೂಜಿಲೆಂಡ್ ತಂಡವು 5 ವಿಕೆಟ್ ನಷ್ಟಕ್ಕೆ 211 ರನ್ ಗಳನ್ನು 46.1 ಓವರ್ ಗಳಲ್ಲಿ ಗಳಿಸಿತ್ತು.


ಮಳೆ ಬಂದಂತಹ ಸಂದರ್ಭದಲ್ಲಿ ಸುಮಾರು ನಾಲ್ಕು ಘಂಟೆ ಕಾಯ್ದ ಅಧಿಕಾರಿಗಳು ನಂತರ ಮೀಸಲು ದಿನಕ್ಕೆ ಆಟವನ್ನು ಮುಂದೂಡಿದ್ದಾರೆ. ಒಂದು ವೇಳೆ ಮೀಸಲು ದಿನದಂದು ಕೂಡ ಪಂದ್ಯಕ್ಕೆ ಮಳೆ ಅಡ್ಡಿಯಾದರೆ ಭಾರತ ಫೈನಲ್ ಗೆ ತಲುಪಲಿದೆ. ಇದೇ ನಿಯಮ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯಕ್ಕೂ ಅನ್ವಯವಾಗಲಿದೆ.


ಹಾಗಾದರೆ ಫೈನಲ್ ಪಂದ್ಯದಲ್ಲಿ ಮಳೆಯಾದರೆ ಟ್ರೋಫಿ ಯಾರಿಗೆ....?  


ಫೈನಲ್ ಪಂದ್ಯದಲ್ಲಿಯೂ ಕೂಡ ಮಳೆ ಬಂದರೆ ಆಗ ಪಂದ್ಯವನ್ನು ಮೀಸಲೂ ದಿನಕ್ಕೆ ಮುಂದೂಡಲಾಗುತ್ತದೆ. ಒಂದು ವೇಳೆ ಆಗಲೂ ಮಳೆ ಬಂದರೆ ಆಗ ಟ್ರೋಫಿಯನ್ನು ಎರಡು ತಂಡಗಳಿಗೆ ಜಂಟಿ ವಿಜೇತರೆಂದು ಘೋಷಣೆ ಮಾಡಲಾಗುತ್ತದೆ.