Test Ranking 2024: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಶುಕ್ರವಾರ ಎಲ್ಲಾ ಮೂರು ಸ್ವರೂಪಗಳ ಅಂದರೆ ಟೆಸ್ಟ್, ODI ಮತ್ತು T20 ವಾರ್ಷಿಕ ಶ್ರೇಯಾಂಕಗಳನ್ನು ಅಪ್ಡೇಟ್ ಮಾಡಿ ಬಿಡುಗಡೆ ಮಾಡಿದೆ. ಇದರಲ್ಲಿ ಭಾರತ ತಂಡ ಟೆಸ್ಟ್ ಕಿರೀಟವನ್ನು ಅಂದರೆ ನಂಬರ್-1 ಸ್ಥಾನವನ್ನು ಕಳೆದುಕೊಂಡಿದೆ.


COMMERCIAL BREAK
SCROLL TO CONTINUE READING

2021-23ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌’ನ ಫೈನಲ್‌’ನಲ್ಲಿ ಭಾರತ ತಂಡವನ್ನು ಸೋಲಿಸಿದ ಆಸ್ಟ್ರೇಲಿಯಾ ತಂಡವು ನಂಬರ್-1 ಟೆಸ್ಟ್ ತಂಡವಾಗಿ ಹೊರಹೊಮ್ಮಿದೆ. ಭಾರತ ಈಗ ಎರಡನೇ ಸ್ಥಾನಕ್ಕೆ ಕುಸಿದಿದೆ. ಟೆಸ್ಟ್ ಶ್ರೇಯಾಂಕದಲ್ಲಿ ಈ ಎರಡು ತಂಡಗಳ ಸ್ಥಾನಗಳಲ್ಲಿ ಬದಲಾವಣೆಯಾಗಿದ್ದು, 4 ರಿಂದ 9 ನೇ ಸ್ಥಾನದಲ್ಲಿರುವ ತಂಡಗಳ ಸ್ಥಾನಗಳು ಸ್ಥಿರವಾಗಿವೆ. WTC 2023 ಫೈನಲ್‌’ನಲ್ಲಿ ಭಾರತವು ಆಸ್ಟ್ರೇಲಿಯಾದ ವಿರುದ್ಧ 209 ರನ್‌’ಗಳ ಸೋಲನ್ನು ಅನುಭವಿಸಬೇಕಾಯಿತು


ಇದನ್ನೂ ಓದಿ: ಒಂದು ಲೋಟ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗುತ್ತೆ! ಯಾವ ಔಷಧಿಯೂ ಬೇಕಿಲ್ಲ!


ಈ ಗೆಲುವು ಆಸ್ಟ್ರೇಲಿಯಾಕ್ಕೆ ತನ್ನ ರೇಟಿಂಗ್ ಅನ್ನು ಸುಧಾರಿಸುವ ಅವಕಾಶವನ್ನು ನೀಡಿದೆ. 124 ಅಂಕಗಳೊಂದಿಗೆ ನಂಬರ್-1 ತಲುಪಿದರೆಮ ಭಾರತ 120 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಇಂಗ್ಲೆಂಡ್ (105 ಅಂಕ) ಮೂರನೇ ಸ್ಥಾನದಲ್ಲಿದೆ.


ಸೀಮಿತ ಓವರ್‌’ಗಳಲ್ಲಿ ಪ್ರಾಬಲ್ಯ:


ಭಾರತ ತಂಡವು ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡಿರಬಹುದು. ಆದರೆ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪ್ರಾಬಲ್ಯವು ಹಾಗೇ ಉಳಿದಿದೆ. ಭಾರತ ತಂಡ ODI ಮತ್ತು T20 ಅಂತರಾಷ್ಟ್ರೀಯ ತಂಡಗಳ ಶ್ರೇಯಾಂಕಗಳೆರಡರಲ್ಲೂ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಏಕದಿನದಲ್ಲಿ 122 ರೇಟಿಂಗ್ ಹೊಂದಿದ್ದು, ಆಸ್ಟ್ರೇಲಿಯಾ (116)ಗಿಂತ ಆರು ಅಂಕ ಮುಂದಿದೆ. ದಕ್ಷಿಣ ಆಫ್ರಿಕಾ (112) ಮೂರನೇ, ಪಾಕಿಸ್ತಾನ (106) ನಾಲ್ಕನೇ ಮತ್ತು ನ್ಯೂಜಿಲೆಂಡ್ (101) 5ನೇ ಸ್ಥಾನದಲ್ಲಿದೆ.


ಇದನ್ನೂ ಓದಿ: ಕ್ಲಾಸ್ ಟಾಪರ್ ಅನುಷ್ಕಾ ಶರ್ಮಾ.. ಹಾಗಾದ್ರೆ ವಿರಾಟ್ ವಿದ್ಯಾರ್ಹತೆ ಏನು? ಶಿಕ್ಷಣ ಪೂರ್ಣಗೊಳಿಸಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ!


ಇನ್ನು ಟಿ20 ಅಂತರಾಷ್ಟ್ರೀಯ ತಂಡಗಳ ಶ್ರೇಯಾಂಕದಲ್ಲಿ ಸಹ ಭಾರತ ತಂಡವು 264 ರೇಟಿಂಗ್‌’ನೊಂದಿಗೆ ಅಗ್ರಸ್ಥಾನದಲ್ಲಿದೆ. ಆಸ್ಟ್ರೇಲಿಯಾ (257) ಎರಡನೇ ಸ್ಥಾನದಲ್ಲಿದೆ ಇಂಗ್ಲೆಂಡ್ ತಂಡ (252) ಮೂರನೇ ಸ್ಥಾನದಲ್ಲಿದ್ದು, ದಕ್ಷಿಣ ಆಫ್ರಿಕಾ (250) ಆರನೇ ಸ್ಥಾನದಿಂದ ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಪಾಕಿಸ್ತಾನ ಎರಡು ಸ್ಥಾನ ಕಳೆದುಕೊಂಡು ಏಳನೇ ಸ್ಥಾನಕ್ಕೆ ಕುಸಿದಿದೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.