ಡರ್ಬನ್‌: ಡರ್ಬನ್‌ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಮಹಿಳಾ ಮತ್ತು ಪುರುಷರ ಐಸಿಸಿ ಈವೆಂಟ್‌ಗಳಿಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಹಿಳಾ ಕ್ರಿಕೆಟ್‌ಗೆ ಹೊಸ ವೇಗವನ್ನು ನೀಡುವ ಸಲುವಾಗಿ, ಐಸಿಸಿ (ICC Historic Decision) ಇದೀಗ ಪುರುಷರ ಈವೆಂಟ್‌ಗಳಲ್ಲಿ ಪಡೆಯುವ ಬಹುಮಾನದ ಮೊತ್ತವನ್ನು ಮಹಿಳಾ ಸ್ಪರ್ಧೆಗಳಲ್ಲಿಯೂ ನೀಡಲು ನಿರ್ಧರಿಸಿದೆ. ಐಸಿಸಿಯ ಈ ನಿರ್ಧಾರದ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದುವರೆಗೆ, ಐಸಿಸಿ ಈವೆಂಟ್‌ಗಳಲ್ಲಿ ಪುರುಷರಿಗೆ ಹೋಲಿಸಿದರೆ (Cricket News In Kannada) ಮಹಿಳೆಯರಿಗೆ ಸಮಾನವಾದ ಬಹುಮಾನದ ಮೊತ್ತ ಸಿಗುತ್ತಿರಲಿಲ್ಲ.  2030 ರ ವೇಳೆಗೆ, ಈ ವಿಷಯವನ್ನು ಏಕರೂಪವಾಗಿ ಮಾಡಲಾಗುವುದು. ಈಗ ಪುರುಷರು ಮತ್ತು ಮಹಿಳೆಯರಲ್ಲಿ ಆಡಲಾಗುವ ODI, T20 ಮತ್ತು ಇತರ ICC ಪಂದ್ಯಾವಳಿಗಳು ಒಂದೇ ಬಹುಮಾನವನ್ನು ಹೊಂದಿರಲಿವೆ.


ಇದನ್ನೂ ಓದಿ-BSNL ಕಂಪನಿ ಈ ಅಗ್ಗದ ಯೋಜನೆಯಲ್ಲಿ 105 ದಿನಗಳ ವ್ಯಾಲಿಡಿಟಿ ನೀಡುತ್ತಿದೆ, ನಿತ್ಯ 2ಜಿಬಿ ಡೇಟಾ!


ಈ ನಿರ್ಧಾರದ ಬಗ್ಗೆ ಮಾತನಾಡಿರುವ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ, ಇದು ನಮಗೆ ದೊಡ್ಡ ಮತ್ತು ಐತಿಹಾಸಿಕ ನಿರ್ಧಾರವಾಗಿದೆ (Sports News In Kannada) ಮತ್ತು ಇನ್ಮುಂದೆ ಐಸಿಸಿ ಈವೆಂಟ್‌ಗಳಲ್ಲಿ ಪುರುಷ ಮತ್ತು ಮಹಿಳಾ ಆಟಗಾರರು ಸಮಾನ ಬಹುಮಾನವನ್ನು ಮೊತ್ತವನ್ನು ಪಡೆಯುತ್ತಾರೆ ಎಂದು ಹೇಳಲು ನನಗೆ ಸಂತೋಷವಾಗಿದೆ ಎಂದಿದ್ದಾರೆ. 2017 ರಿಂದ, ಸಮಾನ ಬಹುಮಾನದ ಹಣವನ್ನು ತಲುಪುವ ಸ್ಪಷ್ಟ ಗಮನದೊಂದಿಗೆ ನಾವು ಪ್ರತಿ ವರ್ಷ ಮಹಿಳಾ ಈವೆಂಟ್‌ಗಳಲ್ಲಿ ಬಹುಮಾನದ ಹಣವನ್ನು ಹೆಚ್ಚಿಸಿದ್ದೇವೆ.


ಇದನ್ನೂ ಓದಿ-Amazon ಪ್ರೈಮ್ ಡೇ ಸೆಲ್ ನಲ್ಲಿ ಒನ್ ಪ್ಲಸ್ ಕಂಪನಿಯ ಈ ಫ್ಲ್ಯಾಗ್ ಶಿಪ್ ಸ್ಮಾರ್ಟ್ ಫೋನ್ ಗಳ ಮೇಲೆ ಭಾರಿ ರಿಯಾಯಿತಿ!


ಸಂತಸ ವ್ಯಕ್ತಪಡಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ 
ಈ ಐತಿಹಾಸಿಕ ನಿರ್ಧಾರದ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ಮಾಡುವ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ, ಈ ನಿರ್ಧಾರದಿಂದ ನನಗೆ ತುಂಬಾ ಸಂತೋಷವಾಗಿದೆ, ಈಗ ಪುರುಷ ಮತ್ತು ಮಹಿಳಾ ತಂಡಗಳ ನಡುವಿನ ತಾರತಮ್ಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ. ಎರಡೂ ತಂಡಗಳು ಈಗ ಒಟ್ಟಿಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಈ ನಿರ್ಧಾರದ ಬಗ್ಗೆ ಮಂಡಳಿಯಲ್ಲಿ ಭಾಗಿಯಾಗಿರುವ ಎಲ್ಲ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.