ICC Mens T20 World Cup 2021: ಕಿವೀಸ್ ಕನಸು ಭಗ್ನ, ಆಸೀಸ್ ಗೆ ವಿಶ್ವ ಚಾಂಪಿಯನ್ ಪಟ್ಟ
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವು ಕಿವೀಸ್ ವಿರುದ್ಧ ಎಂಟು ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಟಿ-20 ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ-20 ವಿಶ್ವಕಪ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ತಂಡವು ಕಿವೀಸ್ ವಿರುದ್ಧ ಎಂಟು ವಿಕೆಟ್ ಗಳ ಗೆಲುವು ಸಾಧಿಸುವ ಮೂಲಕ ಮೊದಲ ಬಾರಿಗೆ ಟಿ-20 ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.
ಇದನ್ನೂ ಓದಿ :ಭಾರತ-ಪಾಕಿಸ್ತಾನದ ಕ್ರಿಕೆಟ್ ಸರಣಿ ಕುರಿತಾಗಿ ಮಹತ್ವದ ಹೇಳಿಕೆ ನೀಡಿದ ಸೌರವ್ ಗಂಗೂಲಿ..!
ಆಸ್ಟ್ರೇಲಿಯಾ ತಂಡವು ಟಾಸ್ ಗೆದ್ದು ಮೊದಲು ಬೌಲಿಂಗ್ ಅನ್ನು ಆಯ್ಕೆ ಮಾಡಿಕೊಂಡಿತು. ಇನ್ನೊಂದೆಡೆಗೆ ಬ್ಯಾಟಿಂಗ್ ಆರಂಭಿಸಿದ ಕಿವೀಸ್ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 172 ರನ್ ಗಳನ್ನು ಗಳಿಸಿತು.ನ್ಯೂಜಿಲೆಂಡ್ ಪರವಾಗಿ ವೇಗವಾಗಿ ಬ್ಯಾಟಿಂಗ್ ಬೀಸಿದ ನಾಯಕ ಕೇನ್ ವಿಲಿಯಮ್ಸನ್ ಕೇವಲ 48 ಎಸೆತಗಳಲ್ಲಿ 10 ಬೌಂಡರಿ ಹಾಗೂ ಮೂರು ಸಿಕ್ಸರ್ ಗಳ ನೆರವಿನಿಂದ 85 ರನ್ ಗಳನ್ನು ಗಳಿಸಿದರು.
Ind vs NZ Test Series : ಟೀಂ ಇಂಡಿಯಾಗೆ ಸಿಹಿ ಸುದ್ದಿ : ನ್ಯೂಜಿಲೆಂಡ್‌ನ ಈ ಅಪಾಯಕಾರಿ ಆಟಗಾರ ಟೆಸ್ಟ್ ಸರಣಿಯಿಂದ ಹೊರಗೆ!
ಈ ಗುರಿಯನ್ನು ಬೆನ್ನತ್ತಿದ ಆಸೀಸ್ ತಂಡವು 18.5 ಓವರ್ ಗಳಲ್ಲಿ ಕೇವಲ ಎರಡು ವಿಕೆಟ್ ಗಳನ್ನು ಕಳೆದುಕೊಂಡು 173 ರನ್ ಗಳ ಗೆಲುವಿನ ಗುರಿಯನ್ನು ತಲುಪಿತು. ಆಸೀಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಆಡಿದ ಡೇವಿಡ್ ವಾರ್ನರ್ 53, ಮಿಚೆಲ್ ಮಾರ್ಚ್ ಅಜೇಯ 77 ರನ್ ಗಳಿಸಿದರು.
ಇದನ್ನೂ ಓದಿ : ಐಸಿಸಿ ಹಾಲ್ ಆಫ್ ಫೇಮ್‌ಗೆ ಮಹೇಲಾ ಜಯವರ್ಧನಾ, ಶಾನ್ ಪೊಲಾಕ್, ಜಾನೆಟ್ ಬ್ರಿಟಿನ್ ಸೇರ್ಪಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ