ನವದೆಹಲಿ: ಭಾನುವಾರ ಹೆಡಿಂಗ್ಲಿಯಲ್ಲಿ ನಡೆದ ಮೂರನೇ ಆಶಸ್ ಟೆಸ್ಟ್ ನಲ್ಲಿ ಇಂಗ್ಲೆಂಡ್ ತಂಡದ ಬೆನ್ ಸ್ಟೋಕ್ಸ್ ಅಜೇಯ ಶತಕ ಗಳಿಸಿದ್ದರಿಂದಾಗಿ ಆಸ್ಟ್ರೇಲಿಯಾದ ವಿರುದ್ಧ ರೋಚಕ ಗೆಲುವನ್ನು ಸಾಧಿಸಿತ್ತು.



COMMERCIAL BREAK
SCROLL TO CONTINUE READING

ಈಗ ಹಿನ್ನಲೆಯಲ್ಲಿ ಐಸಿಸಿ ಈಗ ಮತ್ತೆ ಸಚಿನ್ ತೆಂಡೂಲ್ಕರ್ ಅವರನ್ನು ವ್ಯಂಗ್ಯವಾಡಿದೆ. ಇದಕ್ಕೂ ಮೊದಲು ಬೆನ್ ಸ್ಟೋಕ್ಸ್ ಅವರು ವಿಶ್ವಕಪ್ ನ ಫೈನಲ್ ಪಂದ್ಯದಲ್ಲಿ ತೋರಿದ ಏಕಾಂಗಿ ಪ್ರದರ್ಶನಕ್ಕೆ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಮತ್ತು ಸಚಿನ್ ತೆಂಡೂಲ್ಕರ್ ಎಂದು ಸ್ಟೋಕ್ ಹಾಗೂ ಸಚಿನ್ ಜೊತೆಗಿರುವ ಪೋಟೋವನ್ನು ಪೋಸ್ಟ್ ಮಾಡಿತ್ತು.



ಈಗ ಆಸ್ಟ್ರೇಲಿಯಾ ವಿರುದ್ಧ ಆಸಿಸ್ ಸರಣಿಯಲ್ಲಿ ಸ್ಟೋಕ್ ನೀಡಿದ ಅದ್ಬುತ ಪ್ರದರ್ಶನಕ್ಕೆ ಮತ್ತೆ ಅದೇ ಈ ಹಿಂದಿನ ಫೋಟೋವನ್ನು ಟ್ವೀಟ್ ಮಾಡಿ ವ್ಯಂಗ್ಯವಾಡಿದೆ. ಈಗ ಐಸಿಸಿ ನಡೆಗೆ ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಸೇತಿ ಸಾಹಬ್ ಎನ್ನುವವರು ಟ್ವೀಟ್ ಮಾಡಿ ' ನೀವು ಹೇಳಿದ ಮಾತ್ರಕ್ಕೆ ನಾವು ನಂಬುತ್ತಿರಿ ಅಂತಾ ತಿಳಿದಿದ್ದಿರಾ, ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಎಲ್ಲವೂ ಅವರ ನಂತರ ಪ್ರಾರಂಭವಾಗಿದೆ.. ನಿಮಗೆ ತಿಳಿತಾ ? ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.


ಸ್ಟೋಕ್ ಅವರು ಇದುವರೆಗಿನ ಅತ್ಯುತಮ ಟೆಸ್ಟ್ ಶತಕವನ್ನು ಗಳಿಸಿದರೂ ಕೂಡ ಅವರನ್ನು ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗ ಎಂದು ಕರೆಯಲು ಸಾಧ್ಯವಿಲ್ಲ ಎಂದು ಸಚಿನ್ ಅಭಿಮಾನಿಗಳು ಐಸಿಸಿ ಪೋಸ್ಟ್ ಗೆ ಉತ್ತರಿಸಿದ್ದಾರೆ.