ICC ODI World Cup 2023 : ಭಾರತದಲ್ಲಿ ಅಕ್ಟೋಬರ್‌ 5 ರಿಂದ ಐಸಿಸಿ ಏಕದಿನ ವಿಶ್ವಕಪ್‌ ನಡೆಯಲಿದೆ. ಇದೀಗ ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ (ಐಸಿಸಿ) ಪತ್ರ ಬರೆದಿದೆ ಎಂಬ ವರದಿಗಳಿವೆ. ಫೈನಲ್ ಹೊರತುಪಡಿಸಿ ಅಹಮದಾಬಾದ್‌ನಲ್ಲಿ ಯಾವುದೇ ಪಂದ್ಯವನ್ನು ನಿಗದಿಪಡಿಸದಂತೆ ಪಾಕ್‌ ಕೇಳಿಕೊಂಡಿದೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

ಆದರೆ, 2023 ರ ICC ODI ವಿಶ್ವಕಪ್‌ನ ಕರಡು ವೇಳಾಪಟ್ಟಿಯ ಪ್ರಕಾರ, ಅಕ್ಟೋಬರ್‌ನಲ್ಲಿ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ನಡೆಯಲಿದೆ ಎಂದು ನಿಯಂತ್ರಣ ಮಂಡಳಿ (ಬಿಸಿಸಿಐ) ಐಸಿಸಿಯೊಂದಿಗೆ ಹಂಚಿಕೊಂಡಿದೆ. 


ಇದನ್ನೂ ಓದಿ: ಬಡ ಯುವಕನ ಶೈಕ್ಷಣಿಕ ಬದುಕಿಗೆ ಕೆ.ಎಲ್.ರಾಹುಲ್ ಬೆಳಕು


2023ರ ಆವೃತ್ತಿಯು ಅಕ್ಟೋಬರ್ 5 ರಂದು ಪ್ರಾರಂಭವಾಗಲಿದೆ, ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನ MA ಚಿದಂಬರಂ ಕ್ರೀಡಾಂಗಣದಲ್ಲಿ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಬಿಸಿಸಿಐ ಕರಡು ವೇಳಾಪಟ್ಟಿಯನ್ನು ಐಸಿಸಿಯೊಂದಿಗೆ ಹಂಚಿಕೊಂಡಿದ್ದು, ಮುಂದಿನ ವಾರದ ಆರಂಭದಲ್ಲಿ ಅಂತಿಮ ವೇಳಾಪಟ್ಟಿಯನ್ನು ಬಿಡುಗಡೆಯಾಗಲಿದೆ. ಇದಕ್ಕೂ ಮುನ್ನ ಪ್ರತಿಕ್ರಿಯೆಗಾಗಿ ಭಾಗವಹಿಸುವ ದೇಶಗಳಿಗೆ ಈ ವೇಳಾಪಟ್ಟಿಯನ್ನು ಕಳುಹಿಸಲಾಗಿದೆ. ನವೆಂಬರ್ 15 ಮತ್ತು 16 ರಂದು ಸೆಮಿಫೈನಲ್‌ ನಡಯಲಿದ್ದು, ಇನ್ನೂ ಸ್ಥಳ ನಿಗಧಿಯಾಗಿಲ್ಲ.


2023ರ ICC ODI ವಿಶ್ವಕಪ್‌ನಲ್ಲಿ ಭಾರತ ತಂಡದ ಪ್ರಯಾಣದ ವಿವರ ಹೀಗಿದೆ


  • ಅಕ್ಟೋಬರ್ 8: ಚೆನ್ನೈನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ

  • ಅಕ್ಟೋಬರ್ 11: ದೆಹಲಿಯಲ್ಲಿ ಭಾರತ vs ಅಫ್ಘಾನಿಸ್ತಾನ

  • ಅಕ್ಟೋಬರ್ 15: ಅಹಮದಾಬಾದ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ

  • ಅಕ್ಟೋಬರ್ 19: ಪುಣೆಯಲ್ಲಿ ಭಾರತ vs ಬಾಂಗ್ಲಾದೇಶ

  • ಅಕ್ಟೋಬರ್ 22: ಧರ್ಮಶಾಲಾದಲ್ಲಿ ಭಾರತ vs ನ್ಯೂಜಿಲೆಂಡ್

  • ಅಕ್ಟೋಬರ್ 29: ಲಕ್ನೋದಲ್ಲಿ ಭಾರತ vs ಇಂಗ್ಲೆಂಡ್

  • ನವೆಂಬರ್ 2: ಮುಂಬೈನಲ್ಲಿ ಭಾರತ ವಿರುದ್ಧ ಕ್ವಾಲಿಫೈಯರ್

  • ನವೆಂಬರ್ 5: ಕೋಲ್ಕತ್ತಾದಲ್ಲಿ ಭಾರತ vs ದಕ್ಷಿಣ ಆಫ್ರಿಕಾ

  • ನವೆಂಬರ್ 11: ಬೆಂಗಳೂರಿನಲ್ಲಿ ಭಾರತ ಮತ್ತು ಅರ್ಹತಾ ಪಂದ್ಯಗಳು


ಅಹಮದಾಬಾದ್‌ನಲ್ಲಿ ಭಾರತ ವಿರುದ್ಧದ ಪಂದ್ಯದ ಹೊರತಾಗಿ, ಪಾಕ್‌ ತಂಡ ಭಾರತದಾದ್ಯಂತ 5 ಕ್ರೀಡಾಂಗಣಗಳಲ್ಲಿ ಆಡಲಿದೆ. ಅಕ್ಟೋಬರ್ 6 ಮತ್ತು 12 ರಂದು ಹೈದರಾಬಾದ್‌ನಲ್ಲಿ ಎರಡು ತಂಡಗಳ ವಿರುದ್ದ ಕಣಕ್ಕೀಳಿಯಲಿದೆ. ಇನ್ನು ನಾಲ್ಕು ತಿಂಗಳಲ್ಲಿ ವಿಶ್ವಕಪ್ ಆರಂಭವಾಗಲಿದ್ದು, ಈಗಾಗಲೇ ಪಂದ್ಯಗಳ ಘೋಷಣೆಯಲ್ಲಿ ವಿಳಂಬವಾಗಿದೆ. ವೇಳಾಪಟ್ಟಿ ವಿಳಂಬ ಹಿನ್ನಲೆ ಟಿಕೆಟ್ ವಿವರಗಳನ್ನು ಬಿಡುಗಡೆ ಮಾಡಲು ಐಸಿಸಿಗೆ ಸಾಧ್ಯವಾಗಿಲ್ಲ. ಇನ್ನು ಇತ್ತೀಚಿಗೆ ನಡೆದ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (WTC) ಫೈನಲ್‌ನಲ್ಲಿ ಭಾರತ ಸೋಲು ಅನುಭವಿಸಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.