ನವದೆಹಲಿ: ICC Women's Cricket World Cup: ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮಹಿಳಾ ಕ್ರಿಕೆಟ್ ವರ್ಲ್ಡ್ ಕಪ್ ಶೆಡ್ಯೂಲ್ ಬಿಡುಗಡೆ ಮಾಡಿದೆ. ಶೆಡ್ಯೂಲ್ ಪ್ರಕಾರ ಈ ಟೂರ್ನಿಯಲ್ಲಿ ಒಟ್ಟು 31 ಪಂದ್ಯಗಳು ನಡೆಯಲಿವೆ. ಟೂರ್ನಿಯ ಮೊದಲ ಪಂದ್ಯ ಮಾರ್ಚ್ 4, 2022 ರಲ್ಲಿ ವೆಲಿಂಗ್ಟನ್ ನ ಬೇಸಿನ್ ರಿಜರ್ವ್ ನಲ್ಲಿ ನಡೆಯಲಿದೆ. ಇನ್ನೊಂದೆಡೆ ಈ ಟೂರ್ನಿಯ ಫೈನಲ್ ಪಂದ್ಯ ಏಪ್ರಿಲ್, 3, 2022 ರಲ್ಲಿ ನ್ಯೂಜಿಲ್ಯಾಂಡ್ ನ ಕ್ರಾಯಿಸ್ಟ್ ಚರ್ಚ್ ನ ಹೆಗಲ್ ಓವಲ್ ಮೈದಾನದಲ್ಲಿ ನಡೆಯಲಿದೆ. ಐಸಿಸಿ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ನಲ್ಲಿ ಶೆಡ್ಯೂಲ್ ಕುರಿತು ಮಾಹಿತಿ ನೀಡಿದೆ.



COMMERCIAL BREAK
SCROLL TO CONTINUE READING

ಈ ಸೀರಿಸ್ ಗಾಗಿ ಒಟ್ಟು 6 ನಗರಗಳನ್ನು ಆಯ್ಕೆ ಮಾಡಲಾಗಿದೆ. ಈ ಕುರಿತು ಹೇಳಿಕೆ ನೀಡಿರುವ ICC Women's World Cup ನ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಂಡ್ರಿಯಾ ನೆಲ್ಸನ್, "ನಾವು ಟೂರ್ನಿಯನ್ನು ನಡೆಸಲು ಸಂಪೂರ್ಣ ಸನ್ನದ್ಧರಾಗಿದ್ದೇವೆ. ಶೀಘ್ರದಲ್ಲಿಯೇ ವಿಶ್ವಕ್ಕೆ ಹೊಸ ಚಾಂಪಿಯನ್ ತಂಡ ಸಿಗಲಿದೆ" ಎಂದು ಹೇಳಿದ್ದಾರೆ. ಜೊತೆಗೆ "ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಟೂರ್ನಿಯನ್ನು ವಿಕ್ಷೀಸಬೇಕು ಎಂಬುದು ನಮ್ಮ ಆಶಯ ಹಾಗೂ ತಮ್ಮ ನೆಚ್ಚಿನ ತಂಡ ಅವರು ಬೆಂಬಲಿಸಬೇಕು" ಎಂದಿದ್ದಾರೆ.



ಈ ಒರ್ಲ್ದ್ ಕಪ್ ನಲ್ಲಿ ಭಾರತ 7 ಪಂದ್ಯಗಳನ್ನು ಆಡಲಿದೆ
ಹಾಲಿ ಚಾಂಪಿಯನ್ ಇಂಗ್ಲೆಂಡ್ ಮಾರ್ಚ್ 5 ರಂದು ಸೆಡಾನ್ ಪಾರ್ಕ್‌ನಲ್ಲಿ ಪ್ರತಿಸ್ಪರ್ಧಿ ಆಸ್ಟ್ರೇಲಿಯಾ ವಿರುದ್ಧ ಪಂದ್ಯಾವಳಿಯನ್ನು ಪ್ರಾರಂಭಿಸಲಿದೆ. ಈ ವಿಶ್ವಕಪ್‌ನಲ್ಲಿ ಭಾರತ ಒಟ್ಟು ಏಳು ಪಂದ್ಯಗಳನ್ನು ಆಡಲಿದೆ. ಭಾರತದ ನಾಲ್ಕು ಪಂದ್ಯಗಳು ನ್ಯೂಜಿಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ವಿರುದ್ಧ ಮತ್ತು ಉಳಿದ ಮೂರು ಪಂದ್ಯಗಳು ಕ್ವಾಲಿಫೈಯರ್ ತಂಡಗಳ ಜೊತೆಗೆ ನಡೆಯಲಿವೆ. ಈ ಬಾರಿ ಮಿಥಾಲಿ ರಾಜ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.



2017 ರಲ್ಲಿ ಭಾರತಕ್ಕೆ ಉಪವಿಜೇತ ತಂಡವಾಗಿ ಹೊರಹೊಮ್ಮಿತ್ತು
ವಿಶೇಷವೆಂದರೆ, 2005 ರಲ್ಲಿ ಆಸ್ಟ್ರೇಲಿಯಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದರೆ, 2009 ರಲ್ಲಿ ಇಂಗ್ಲೆಂಡ್ ವಿಶ್ವಕಪ್ ಗೆದ್ದಿತು. ಇದರ ನಂತರ, 2013 ರಲ್ಲಿ, ಮತ್ತೊಮ್ಮೆ ಆಸ್ಟ್ರೇಲಿಯಾ ವಿಶ್ವಕಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಅದೇ ಸಮಯದಲ್ಲಿ, 2017 ರಲ್ಲಿ, ಇಂಗ್ಲೆಂಡ್ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. 2017 ರಲ್ಲಿ ಭಾರತ ವಿಶ್ವಕಪ್ ರನರ್ ಅಪ್  ಆಗಿ ಹೊರಹೊಮ್ಮಿತ್ತು