ICC T20 Rankings : ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ವಿರುದ್ಧದ ಭಾರತದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಭರ್ಜರಿ ಪ್ರದರ್ಶನ ನೀಡಿ, ಅಭಿಮಾನಿಗಳ ಮನಸ್ಸು ಗೆದಿದ್ದರು. ಅಲ್ಲದೆ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಟಿ20 ರ‍್ಯಾಂಕಿಂಗ್ ನಲ್ಲಿ ಎಂಟನೇ ಸ್ಥಾನ ಪಡೆದು, ವೃತ್ತಿಜೀವನದಲ್ಲಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ. 


COMMERCIAL BREAK
SCROLL TO CONTINUE READING

ಪಾಕ್ ವಿರುದ್ಧ ಪಂದ್ಯದಲ್ಲಿ ಹಾರ್ದಿಕ್ ಕೇವಲ 17 ಎಸೆತಗಳಲ್ಲಿ ಅಜೇಯ 33 ರನ್ ಗಳಿಸಿ 25 ರನ್ ನೀಡಿ ಮೂರು ವಿಕೆಟ್ ಕಬಳಿಸಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದಲ್ಲಿ ಅವರ ಪಾತ್ರ ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಇದು ತೋರಿಸುತ್ತದೆ.


ಇದನ್ನೂ ಓದಿ : ICC : ಭಾರತ ಮತ್ತು ಪಾಕಿಸ್ತಾನ ತಂಡಗಳಿಗೆ ಭಾರಿ ದಂಡ ವಿಧಿಸಿದ ಐಸಿಸಿ!


ಅಫ್ಘಾನಿಸ್ತಾನ ಆಟಗಾರರಿಗೂ ಲಾಭ


ಏಷ್ಯಾಕಪ್ ನಲ್ಲೂ ಅಫ್ಘಾನಿಸ್ತಾನ ಬಿರುಸಿನ ಆರಂಭ ಎಲ್ಲರ ಗಮನ ಸೆಳೆದಿದೆ. ತಂಡದ ಆಟಗಾರರು ಶ್ರೇಯಾಂಕದಲ್ಲಿ ಲಾಭ ಪಡೆದಿದ್ದಾರೆ. ರಶೀದ್ ಖಾನ್ ನಂಬರ್ ಒನ್ ಬೌಲರ್ ಆಗುವತ್ತ ಹೆಜ್ಜೆ ಹಾಕಿದ್ದಾರೆ ಎಂದು ಐಸಿಸಿ ಪ್ರಕಟಣೆ ತಿಳಿಸಿದೆ. ಅವರು ಸಹ ಲೆಗ್ ಸ್ಪಿನ್ನರ್‌ಗಳಾದ ಆದಿಲ್ ರಶೀದ್ ಮತ್ತು ಆಡಮ್ ಝಂಪಾ ಅವರನ್ನು ಹಿಂದಿಕ್ಕಿ ಎರಡು ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಅವರು 708 ಅಂಕಗಳನ್ನು ಹೊಂದಿದ್ದಾರೆ. ರಶೀದ್ ಈಗ ಎಡಗೈ ಮಣಿಕಟ್ಟಿನ ಸ್ಪಿನ್ನರ್ ತಬ್ರೇಜ್ ಶಮ್ಸಿ (716) ಮೇಲೆ ಕಣ್ಣಿಟ್ಟಿದ್ದಾರೆ ಆದರೆ ಜೋಶ್ ಹ್ಯಾಜಲ್‌ವುಡ್ (792) ಅಗ್ರಸ್ಥಾನದಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.


ಟಾಪ್-10 ಪ್ರವೇಶಿಸಿದ ಮುಜೀಬ್ ಉರ್ ರೆಹಮಾನ್


ಮುಜೀಬ್ ಉರ್ ರಹಮಾನ್ (660) 7 ಸ್ಥಾನ ಮೇಲೇರಿ ಟಾಪ್-10 ಪ್ರವೇಶಿಸಿದ್ದಾರೆ. ಅವರು ಭಾರತದ ಭುವನೇಶ್ವರ್ ಕುಮಾರ್ (661) ಅವರನ್ನು ಹಿಂದಿಕ್ಕಿ ಎಂಟನೇ ಸ್ಥಾನದಲ್ಲಿದ್ದಾರೆ. ಭುವನೇಶ್ವರ್ 26 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಟಿ20 ಅಂತರಾಷ್ಟ್ರೀಯ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಯಾವುದೇ ಹೊಸ ಆಟಗಾರರು ಟಾಪ್10 ರೊಳಗೆ ಪ್ರವೇಶಿಸಿಲ್ಲ. ಆದರೆ, ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ 796 ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ಏರಿದ್ದಾರೆ ಮತ್ತು ಪಾಕ್ ಕ್ಯಾಪ್ಟನ್ ಬಾಬರ್ ಅಜಮ್ (810) ಟಾಪ್ ಎರಡು ಸ್ಥಾನದಲ್ಲಿ ಮಿಂಚಿದ್ದಾರೆ.


14 ನೇ ಸ್ಥಾನಕ್ಕೆ ತಲುಪಿದ ಹಜರತುಲ್ಲಾ ಜಝೈ 


ಅಫ್ಘಾನಿಸ್ತಾನದ ಹಜರತುಲ್ಲಾ ಝಜೈ 23 ಮತ್ತು 37 ರ ಎರಡು ಇನ್ನಿಂಗ್ಸ್‌ನೊಂದಿಗೆ ಮೂರು ಸ್ಥಾನ ಮೇಲಕ್ಕೆರಿ 14 ನೇ ಸ್ಥಾನಕ್ಕೆ ತಲುಪಿದ್ದಾರೆ. ಹಾಗೆ, ಅವರ ಸಹ ಆಟಗಾರ ರಹಮಾನುಲ್ಲಾ ಗುರ್ಬಾಜ್ ಐದು ಸ್ಥಾನಗಳನ್ನು ಹೆಚ್ಚಿಸಿಕೊಂಡು 29ನೇ ಸ್ಥಾನಕ್ಕೆ ತಲುಪಿದ್ದಾರೆ. ಉಳಿದೆರಡು ಸ್ವರೂಪಗಳಲ್ಲಿ ಹಲವು ಬದಲಾವಣೆಗಳಾಗಿವೆ. ಕ್ಯಾಪ್ಟನ್ ಬೆನ್ ಸ್ಟೋಕ್ಸ್ ಅವರು ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಕಾರಣ ಎಲ್ಲಾ ಮೂರು ಟೆಸ್ಟ್ ಶ್ರೇಯಾಂಕಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. 


ಇದನ್ನೂ ಓದಿ : India vs Hong Kong : ಹಾಂಕಾಂಗ್ ವಿರುದ್ಧ ರಾಹುಲ್ ಬದಲಿಗೆ ಈ ಆಟಗಾರ : ರೋಹಿತ್ ಜೊತೆ ಹೊಸ ಓಪನರ್!


ಶತಕ ಗಳಿಸಿದ್ದಲ್ಲದೆ, ಸ್ಟೋಕ್ಸ್ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ ಎರಡು ವಿಕೆಟ್ ಪಡೆದರು. ಅವರು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಒಂಬತ್ತು ಸ್ಥಾನ ಮೇಲಕ್ಕೆತ್ತಿ 18 ನೇ ಸ್ಥಾನಕ್ಕೆ ಬಂದಿದ್ದಾರೆ, ಬೌಲಿಂಗ್ ರ‍್ಯಾಂಕಿಂಗ್‌ನಲ್ಲಿ ಐದು ಸ್ಥಾನ ಮೇಲಕ್ಕೆದ್ದು 38 ನೇ ಸ್ಥಾನಕ್ಕೆ ಮತ್ತು ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.