ನವದೆಹಲಿ: ನ್ಯೂಜಿಲೆಂಡ್ ತಂಡ ಈಗ ಅಫ್ಘಾನಿಸ್ತಾನವನ್ನು ಎಂಟು ವಿಕೆಟ್‌ಗಳಿಂದ ಸೋಲಿಸುವ ಮೂಲಕ ICC T20 ವಿಶ್ವಕಪ್ 2021 ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಪ್ರವೇಶಿಸಿದೆ.ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನ ಮತ್ತು ಭಾರತ ತಂಡವನ್ನು ಸ್ಪರ್ಧೆಯಿಂದ ಹೊರಬಿದ್ದಿವೆ.


COMMERCIAL BREAK
SCROLL TO CONTINUE READING

ಈ ಪಂದ್ಯದಲ್ಲಿ ಅಫ್ಘಾನಿಸ್ತಾನ್ ತಂಡವು ಗೆದ್ದಿದ್ದರೆ ಸರಾಸರಿಯ ಲೆಕ್ಕಾಚಾರದ ಮೇಲೆ ಭಾರತ ತಂಡಕ್ಕೆ ಸೆಮಿಫೈನಲ್ ಗೆ ಪ್ರವೇಶಿಸುವ ಅವಕಾಶವಿತ್ತು.ಆದರೆ ಈಗ ಭಾರತ ತನ್ನ ಪಂದ್ಯವನ್ನು ಗೆದ್ದರು ಕೂಡ ಸೆಮಿಫೈನಲ್ ಗೆ ತಲುಪುವ ಅದರ ಲೆಕ್ಕಾಚಾರ ಕೊನೆಗೆಗೊಂಡಿದೆ.


 ಇದನ್ನೂ ಓದಿ: ಹರ್ಭಜನ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ T20 XI ಕ್ರಿಕೆಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ..!


ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ಮೊಹಮ್ಮದ್ ನಬಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಆದರೆ ಅಫ್ಘಾನಿಸ್ತಾನ್ ತಂಡವು ಆರಂಭದಲ್ಲಿಯೇ ನಾಲ್ಕು ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ತೀವ್ರ ಸಂಕಷ್ಟಕ್ಕೆ ಸಿಲುಕಿತು.ಒಂದು ಹಂತದಲ್ಲಿ ತಂಡದ ಗಡಿ ನೂರು ತಲುಪುವುದರೊಳಗೆ ಆಲೌಟ್ ಆಗುವ ಹಂತದಲ್ಲಿ ಇತ್ತು, ಆದಾಗ್ಯೂ, ನಜಿಬುಲ್ಲಾ ಜದ್ರಾನ್ (48 ಎಸೆತಗಳಲ್ಲಿ 73) ಮತ್ತು ಮೊಹಮ್ಮದ್ ನಬಿ (20 ಎಸೆತಗಳಲ್ಲಿ 14) ಜೊತೆಗೂಡಿ ಐದನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟದ ಮೂಲಕ ಅಫ್ಹಾನಿಸ್ತಾನ ತಂಡವನ್ನು ಒಂದು ಲಯಕ್ಕೆ ತಂದರು.


ಇದನ್ನೂ ಓದಿ: Cricketers : ಈ ಸ್ಟಾರ್ ಕ್ರಿಕೆಟಿಗರು ತಮ್ಮ ಪತ್ನಿಯರಿಗೆ 'ಪ್ರಪೋಸ್' ಮಾಡಿದ್ದು ಹೇಗೆ? ಇಲ್ಲಿದೆ ಇಂಟರಸ್ಟಿಂಗ್ ಸ್ಟೋರಿಗಳು!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ