ನವದೆಹಲಿ: ಸಚಿನ್ ತೆಂಡೂಲ್ಕರ್ ತಮ್ಮ ಬ್ಯಾಟಿಂಗ್ ಮೂಲಕ ಗಮನ ಸೆಳೆದಿರುವುದು ಎಲ್ಲರಿಗೂ ತಿಳಿದಿದೆ. ಆದರೆ ಅವರು ಆಗಾಗ ತಮ್ಮ ಬೌಲಿಂಗ್ ಮೂಲಕವು ಕೂಡ ಮೈದಾನದಲ್ಲಿ ಮಿಂಚಿದ್ದಾರೆ.



COMMERCIAL BREAK
SCROLL TO CONTINUE READING

 ಅವರು ನವಿ ಮುಂಬೈನಲ್ಲಿ ಸಚಿನ್ ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬಳೆ ಜೊತೆ ಅಭ್ಯಾಸ ಮಾಡುವ ಸಂದರ್ಭದಲ್ಲಿನ ವಿಡಿಯೋವೊಂದು ಈಗ ವೈರಲ್ ಆಗಿದೆ.ಈ ವಿಡಿಯೋ ಈಗ ಐಸಿಸಿ ಗಮನ ಕೂಡ ಸೆಳೆದಿದ್ದು, ತನ್ನ ಟ್ವೀಟರ್ ಖಾತೆಯಲ್ಲಿ ನಿಮ್ಮ ಫ್ರಂಟ್ ಫೂಟ್ ನೋಡಿ ಎಂದು ಅಂಪೈರ್  ಸ್ಟೀವ್ ಬಕ್ನರ್ ಅವರು ನೋಬಾಲ್ ನೀಡಿರುವ ಫೋಟೋ ವೊಂದನ್ನು ಶೇರ್ ಮಾಡಿಕೊಂಡಿದೆ.


ಇದಕ್ಕೆ ಸಚಿನ್ ಕೊಟ್ಟಿರುವ ಉತ್ತರ ಮಾತ್ರ ಸ್ವತಃ ಐಸಿಸಿಯನ್ನೇ ದಿಗಿಲು ಬಡಿಸಿದೆ. ಸಚಿನ್ ತಮ್ಮ ಟ್ವೀಟ್ ಮೂಲಕ " ಕನಿಷ್ಠ ಪಕ್ಷ ಈ ಬಾರಿ ನಾನು ಬೌಲಿಂಗ್ ಮಾಡುತ್ತಿದ್ದೇನೆ, ಹೊರತು ಬ್ಯಾಟಿಂಗ್ ಅಲ್ಲ. ಅಂಪೈರ್ ನಿರ್ಣಯವೇ ಅಂತಿಮ ನಿರ್ಣಯ" ಎಂದು ಐಸಿಸಿ ಕಾಲೆಳದಿದ್ದಾರೆ. 



24 ವರ್ಷಗಳ ದೀರ್ಘ ಅಂತರಾಷ್ಟ್ರೀಯ ಕ್ರಿಕೆಟ್ ಜೀವನವನ್ನು ಕಳೆದಿರುವ ಸಚಿನ್ ತೆಂಡೂಲ್ಕರ್, 34,357 ರನ್ ಗಳನ್ನು ಗಳಿಸಿದ್ದಾರೆ. ಈಗ ಟೆಸ್ಟ್ ಹಾಗೂ ಏಕದಿನದಲ್ಲಿ ಅತಿ ಹೆಚ್ಚು ಶತಕಗಳನ್ನು ಮತ್ತು ರನ್ ಗಳನ್ನು ಗಳಿಸಿರುವ ದಾಖಲೆ ಇವರ ಹೆಸರಿನಲ್ಲಿದೆ.