ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಇದೀಗ ಅಂತಿಮ ಹಂತವನ್ನು ತಲುಪಿದ್ದು ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಫೈನಲ್ಸ್ ಪಂದ್ಯ  ಇಂಗ್ಲೆಂಡ್ ನ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾನುವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾಗಲಿದೆ. ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳು ಇದೇ ಮೊದಲ ಬಾರಿಗೆ ವಿಶ್ವಕಪ್ ಕ್ರಿಕೆಟ್ಟಿನ ಫೈನಲ್ ಪಂದ್ಯದಲ್ಲಿ ಎದುರಾಳಿಗಳಾಗಿ ಸೆಣಸಲಿವೆ. 


COMMERCIAL BREAK
SCROLL TO CONTINUE READING

ಇದು ಪುರುಷರ ಏಕದಿನ ಕ್ರಿಕೆಟ್‌ನ 12ನೇ ವಿಶ್ವಕಪ್ ಆವೃತ್ತಿಯಾಗಿದ್ದು, ಮಹಿಳಾ ವಿಶ್ವಕಪ್ ಆರಂಭವಾದ ಎರಡು ವರ್ಷಗಳ ಬಳಿಕ 1975ರಲ್ಲಿ ಆರಂಭವಾಯಿತು. ಸರ್ ಕ್ಲೈವ್ ಲಾಯ್ಡ್ ಅವರ ತಂಡ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ಚಾಂಪಿಯನ್ ಆಯಿತು. ಅದರಂತೆ ವೆಸ್ಟ್ ಇಂಡೀಸ್ 1979ರಲ್ಲಿ ವಿಶ್ವಕಪ್ ಗೆದ್ದಿತು. ಈ ರೀತಿಯಾಗಿ, ಮೊದಲ ಎರಡು ವಿಶ್ವಕಪ್‌ ಟ್ರೋಫಿಗಳನ್ನು ವೆಸ್ಟ್ ಇಂಡೀಸ್‌ ತನ್ನದಾಗಿಸಿಕೊಂಡಿತ್ತು.


ಇದಾದ ಬಳಿಕ ವಿಶ್ವಕಪ್ ಗೆದ್ದ ಎರಡನೇ ದೇಶ ಅಂದರೆ, ಅದು ಭಾರತ. ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ವೆಸ್ಟ್ ಇಂಡೀಸ್ ತಂಡವನ್ನು ಸೋಲಿಸಿ ವಿಶ್ವ ಚಾಂಪಿಯನ್ ಎಂಬ ಸ್ಥಾನಮಾನವನ್ನು ಪಡೆಯಿತು. ಮುಂದಿನ ವಿಶ್ವಕಪ್ ಅನ್ನು ಭಾರತದಲ್ಲಿ ಮತ್ತು ಪಾಕಿಸ್ತಾನದಲ್ಲಿ 1987 ರಲ್ಲಿ ಆಡಲಾಯಿತು. ಆತಿಥೇಯರಾಗಿದ್ದರಿಂದ, ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಸಹ ಸೆಮಿಫೈನಲ್ ತಲುಪಿದವು. ಆದರೆ ಫೈನಲ್ ಪಂದ್ಯ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ನಡೆಯಿತು. ಏಲನ್ ಬಾರ್ಡರ್ ನೇತೃತ್ವದ ಆಸ್ಟ್ರೇಲಿಯಾ ತಂಡ ಕಪ್ ಮೂರನೇ ವಿಶ್ವ ಚಾಂಪಿಯನ್ ಹೆಗ್ಗಳಿಕೆಗೆ ಪಾತ್ರವಾಯಿತು.


ವಿಶ್ವಕಪ್ ಗೆದ್ದ ಮುಂದಿನ ತಂಡ ಪಾಕಿಸ್ತಾನ. ಇಮ್ರಾನ್ ಖಾನ್ ಅವರ ವರ್ಚಸ್ವಿ ನಾಯಕತ್ವದಲ್ಲಿ ಪಾಕಿಸ್ತಾನ 1992ರಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸುವ ಮೂಲಕ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. 1996ರಲ್ಲಿ ನಡೆದ ಮುಂದಿನ ವಿಶ್ವಕಪ್‌ನಲ್ಲಿ ಶ್ರೀಲಂಕಾ ತಂಡ ಆಸ್ಟ್ರೇಲಿಯಾವನ್ನು ಸೋಲಿಸಿ ವಿಶ್ವಕಪ್ ತನ್ನದಾಗಿಸಿಕೊಳ್ಳುವ ಮೂಲಕ ಐದನೇ ವಿಶ್ವ ಚಾಂಪಿಯನ್ ಎಂಬ ಖ್ಯಾತಿ ಪಡೆಯಿತು.


1996 ರಿಂದ ಇದುವರೆಗೂ ಈ ಎರಡು ತಂಡಗಳೇ ವಿಶ್ವಕಪ್ ಪಡೆಯುತ್ತಿದೆ. ಆಸ್ಟ್ರೇಲಿಯಾ 1999, 2003 ಮತ್ತು 2007ರ ವಿಶ್ವಕಪ್ ಟ್ರೋಫಿಗಳನ್ನು ಗೆದ್ದು ಹ್ಯಾಟ್ರಿಕ್ ಬಾರಿಸಿತ್ತು. ಇದಾದ ಬಳಿಕ ಎಂ.ಎಸ್.ಧೋನಿ ನಾಯಕತ್ವದ ಟೀಂ ಇಂಡಿಯಾ ಆಸ್ಟ್ರೇಲಿಯಾದ ಹ್ಯಾಟ್ರಿಕ್ ದಾಖಲೆ ಮುರಿಯುವ ಮೂಲಕ 2011 ವಿಶ್ವಕಪ್ ಟ್ರೋಫಿ ತನ್ನದಾಗಿಸಿಕೊಂಡಿತು.  2015ರಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡವನ್ನು ಸೆಮಿಫೈನಲ್‌ನಲ್ಲಿ ಮತ್ತು ನ್ಯೂಜಿಲೆಂಡ್‌ ತಂಡವನ್ನು ಫೈನಲ್ಸ್ ನಲ್ಲಿ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮತ್ತೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು.


ಪ್ರಸ್ತುತ 2019ರ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಫೈನಲ್‌ನಲ್ಲಿವೆ. ಈ ಎರಡೂ ತಂಡಗಳು ಇನ್ನೂ ಚಾಂಪಿಯನ್ ಆಗಿಲ್ಲ. 1979, 1987 ಮತ್ತು 1992 ರಲ್ಲಿ ಇಂಗ್ಲೆಂಡ್ ಫೈನಲ್‌ನಲ್ಲಿ ಸೋತಿದೆ. ನ್ಯೂಜಿಲೆಂಡ್ 2015 ರಲ್ಲಿ ಫೈನಲ್‌ನಲ್ಲಿ ಸೋತಿದ್ದು, ಈ ಬಾರಿ ಯಾವುದೇ ತಂಡ ಗೆದ್ದರೂ ಅದು ಏಕದಿನ ಕ್ರಿಕೆಟ್‌ನ ಹೊಸ ಚಾಂಪಿಯನ್ ದಾಖಲೆ ಬರೆಯಲಿದೆ. ಅಲ್ಲದೆ, ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ತಮ್ಮದಾಗಿಸಿಕೊಳ್ಳಲಿದೆ. ಈಗಾಗಲೇ 2019ರ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಮಧ್ಯಾಹ್ನ 3 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ. ಈ ರೋಚಕ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬುದು ರಾತ್ರಿ 11 ಗಂಟೆ ವೇಳೆಗೆ ತಿಳಿಯಲಿದೆ.