ICC World Cup 2023: ಲಂಕಾ ಮಾರಕ ಬೌಲಿಂಗ್ ದಾಳಿಗೆ ಅಲ್ಪಮೊತ್ತಕ್ಕೆ ಕುಸಿದ ಆಂಗ್ಲರು!
ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‍ಗೆ ಶ್ರೀಲಂಕಾ ಶಾಕ್ ನೀಡಿದೆ. ಲಂಕಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿರುವ ಆಂಗ್ಲರು ಅಲ್ಪಮೊತ್ತಕ್ಕೆ ಕುಸಿತ ಕಂಡಿದ್ದಾರೆ.
ಬೆಂಗಳೂರು: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್ ಟೂರ್ನಿಯ 25ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್‍ಗೆ ಶ್ರೀಲಂಕಾ ಶಾಕ್ ನೀಡಿದೆ. ಲಂಕಾದ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿರುವ ಆಂಗ್ಲರು ಅಲ್ಪಮೊತ್ತಕ್ಕೆ ಕುಸಿತ ಕಂಡಿದ್ದಾರೆ.
ಇದನ್ನೂ ಓದಿ: World Cup 2023: ಕಿಂಗ್ ಕೊಹ್ಲಿ 49, 50ನೇ ಶತಕಗಳ ಬಗ್ಗೆ ಮೈಕಲ್ ವಾನ್ ಭವಿಷ್ಯ!
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 33.2 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಕೇವಲ 156 ರನ್ ಗಳಿಸಲಷ್ಟೇ ಶಕ್ತವಾಯಿತು. ಲಹಿರು ಕುಮಾರ(35ಕ್ಕೆ 3), ಏಂಜೆಲೊ ಮ್ಯಾಥ್ಯೂಸ್(14ಕ್ಕೆ 2) ಮತ್ತು ಕಸುನ್ ರಜಿತಾ(36ಕ್ಕೆ 2) ಮಾರಕ ಬೌಲಿಂಗ್ ದಾಳಿಗೆ ಆಂಗ್ಲರು ತತ್ತರಿಸಿ ಹೋದರು. ರನ್ ಗಳಿಸಲು ಪರದಾಟಿದ ಹಾಲಿ ಚಾಂಪಿಯನ್ನರು ಒಬ್ಬರ ಮೇಲೊಬ್ಬರಂತೆ ಪೆವಿಲಿಯನ್ ಹಾದಿ ಹಿಡಿದರು.
ಇದನ್ನೂ ಓದಿ: ಹಾರ್ದಿಕ್ ಪಾಂಡ್ಯಗೆ ಏನಾಗಿದೆ, ಎಷ್ಟು ಮ್ಯಾಚ್ ಆಡಲ್ಲ? ಸಂಪೂರ್ಣ ವಿವರ ಇಲ್ಲಿದೆ
ಇಂಗ್ಲೆಂಡ್ ಪರ ಬೆನ್ ಸ್ಟೋಕ್ಸ್(43), ಜಾನಿ ಬೈರ್‌ಸ್ಟೋ(30), ಡೇವಿಡ್ ಮಲನ್(28) ಮತ್ತು ಮೊಯಿನ್ ಅಲಿ(15) ರನ್ ಗಳಿಸಿದರು. ಇನ್ನುಳಿದ ಆಟಗಾರರು ಎರಡಂಕಿ ದಾಟಲು ಪರದಾಡಿ ಬಹುಬೇಗನೆ ವಿಕೆಟ್ ಒಪ್ಪಿಸಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ಉಭಯ ತಂಡಗಳು ಆಡಿರುವ 4 ಪಂದ್ಯಗಳಲ್ಲಿ ಕೇವಲ ಒದೊಂದು ಗೆಲುವು ಸಾಧಿಸಿದ್ದು, 3 ಪಂದ್ಯಗಳಲ್ಲಿ ಸೋಲು ಕಂಡಿವೆ. ಪಾಯಿಂಟ್ಸ್ ಪಟ್ಟಿಯಲ್ಲಿ ಶ್ರೀಲಂಕಾ 7ನೇ ಸ್ಥಾನದಲ್ಲಿದ್ದರೆ, ಇಂಗ್ಲೆಂಡ್ 8ನೇ ಸ್ಥಾನದಲ್ಲಿದೆ. ಆಂಗ್ಲರು ನೀಡಿರುವ 157 ರನ್‍ಗಳ ಅಲ್ಪಮೊತ್ತದ ಟಾರ್ಗೆಟ್‍ಅನ್ನು ಲಂಕಾ ಯಾವ ರೀತಿ ಚೇಸ್ ಮಾಡಿ ಗೆಲುವು ಸಾಧಿಸುತ್ತೆ ಅನ್ನೋದು ಕುತೂಹಲ ಮೂಡಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadan