ನವದೆಹಲಿ: ಇಂಗ್ಲೆಂಡ್ ಮತ್ತು ಐರ್ಲೆಂಡ್ ನಡುವಿನ ಏಕದಿನ ಸರಣಿ ಜುಲೈ 30 ರಿಂದ ಪ್ರಾರಂಭವಾಗಲಿದೆ. ಈ ಸರಣಿಯ ಆರಂಭದೊಂದಿಗೆ, ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್ ಕೂಡ ಆರಂಭಗೊಳ್ಳಲಿದೆ. ಈ ಬಗ್ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮಾಹಿತಿ ನೀಡಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಜೊತೆಗೆ ವಿಶ್ವಕಪ್ ಸೂಪರ್ ಲೀಗ್ ಅನ್ನು ಜೂನ್ 2018 ರಲ್ಲಿ ಘೋಷಿಸಲಾಗಿತ್ತು. ಈ ಲೀಗ್ ಮೂಲಕ ವಿವಿಧ ತಂಡಗಳು 2023 ರಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಅರ್ಹತೆ ಪಡೆಯಲಿವೆ.


COMMERCIAL BREAK
SCROLL TO CONTINUE READING

ಈಗಾಗಲೇ ಐಸಿಸಿ ಶ್ರೇಯಾಂಕದಲ್ಲಿರುವ 12 ತಂಡಗಳ ಜೊತೆಗೆ ನೆದರ್ಲ್ಯಾಂಡ್ಸ್ ತಂಡವು ಈ ಲೀಗ್‌ನ ಒಂದು ಭಾಗವಾಗಲಿದೆ. 2015-2017ರಲ್ಲಿ ಆದಲಾಗಿದ್ದ ವಿಶ್ವಕಪ್ ಕ್ರಿಕೆಟ್ ಲೀಗ್ ಎಂದು ನೆದರ್ಲ್ಯಾಂಡ್ಸ್ ಭಾರಿ ಹೆಡ್ ಲೈನ್ ಗಿಟ್ಟಿಸಿತ್ತು ಆತಿಥೇಯ ಭಾರತವನ್ನು ಹೊರತುಪಡಿಸಿ, ಲೀಗ್‌ನಲ್ಲಿ ಅಗ್ರ 7 ಸ್ಥಾನದಲ್ಲಿ ಉಳಿದಿರುವ ತಂಡಗಳು 2023 ರ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲಿವೆ.


ಅಂಕಗಳ ಹಂಚಿಕೆ ಹೀಗಿರಲಿದೆ
ಇಡೀ ಲೀಗ್ ಸಮಯದಲ್ಲಿ, ಒಂದು ತಂಡವು 8 ಸರಣಿಗಳನ್ನು ಆದಬೇಕಾಗಲಿದೆ. ಒಂದು ತಂಡವು ತನ್ನ ತವರಲ್ಲಿ ಒಟ್ಟು ನಾಲ್ಕು ಸರಣಿಗಳನ್ನು ಆಡಿದರೆ, ಉಳಿದ ನಾಲ್ಕು ಸರಣಿಗಳನ್ನು ವಿದೇಶದಲ್ಲಿ ಆಡಬೇಕು. ಒಂದು ಪಂದ್ಯ ಗೆದ್ದರೆ 10 ಅಂಕಗಳು ಸಿಗಲಿವೆ. ಒಂದು ವೇಳೆ ಪಂದ್ಯದ ಫಲಿತಾಂಶ ಬರದಿದ್ದರೆ ಅಥವಾ ಪಂದ್ಯ ಟೈ ಆದರೆ,  ಎರಡೂ ತಂಡಗಳಿಗೆ ತಲಾ ಐದು ಅಂಕಗಳನ್ನು ನೀಡಲಾಗುವುದು.


ಪ್ರತಿ ತಂಡಕ್ಕೆ ಎರಡು ಅವಕಾಶ
ಲೀಗ್‌ನಲ್ಲಿ ಆಡುವ ಸರಣಿಯು ಕೇವಲ ಮೂರು ಪಂದ್ಯಗಳನ್ನು ಹೊಂದಿರಲಿದೆ. ಒಂದು ವೇಳೆ ಯಾವುದೇ ತಂಡವು ಸರಣಿಯಲ್ಲಿ ಮೂರು ಪಂದ್ಯಗಳಿಗಿಂತ ಹೆಚ್ಚು ಪಂದ್ಯಗಳನ್ನು ಆಡಿದರೆ, ಆ ಪಂದ್ಯದ ಫಲಿತಾಂಶಗಳನ್ನು ಲೀಗ್‌ಗೆ ಸೇರಿಸಲಾಗುವುದಿಲ್ಲ.



ಶ್ರೇಯಾಂಕ ಪತಿಯಲ್ಲಿ ಕೆಳಗಿನ ಐದು ಸ್ಥಾನಗಳನ್ನು ಪಡೆದ ತಂಡಗಳಿಗೆ ವಿಶ್ವ ಕಪ್ ಗೆ ಅರ್ಹತೆ ಪಡೆಯಲು ಮತ್ತೊಂದು ಅವಕಾಶ ಸಿಗಲಿದೆ. ಈ ಐದು ತಂಡಗಳು ಒಟ್ಟು ಎರಡು ಸ್ಪಾಟ್ ಗಾಗಿ ಸೆಣೆಸಲಿವೆ.ಕ್ವಾಲಿಫೈರ್ ಪ್ಲೇ ಆಫ್ ಗಳ ಮೂಲಕ ಈ ತಂಡಗಳಿಗೆ ವಿಶ್ವಕಪ್ ಸೇರುವ ರೆಸ್ ನಲ್ಲಿರುವ ಅವಕಾಶ ನೀಡಲಾಗುವುದು.


ಇದಕ್ಕೂ ಮೊದಲು ಮೇ 2020ರಲ್ಲಿ ವಿಶ್ವಕಪ್ ಸೂಪರ್ ಲೀಗ್ ಆರಂಭವಾಗಬೇಕಿತ್ತು, ಆದರೆ ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಇದೀಗ ಜುಲೈ 30ಕ್ಕೆ ಇದು ಆರಂಭಗೊಳ್ಳಲಿದೆ.