ನವದೆಹಲಿ: ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯವರ ಇತ್ತೀಚಿನ ಫಾರ್ಮ್ ತುಂಬಾ ಕಳಪೆಯಾಗಿದೆ. ಇಂಗ್ಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಕೊಹ್ಲಿ ಕೇವಲ 1 ರನ್ ಗಳಿಸಿ ಔಟಾದರು. ಹೀಗಾಗಿ ಭಾರತದ ಟಿ20 ತಂಡದಲ್ಲಿ ಅವರ ಸ್ಥಾನದ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕೊಹ್ಲಿ ಸ್ಥಾನಕ್ಕೆ ದೀಪಕ್ ಹೂಡಾ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಆಟಗಾರರು ಪೈಪೋಟಿ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಟಿ20 ಮಾದರಿಯಲ್ಲಿ ಕೊಹ್ಲಿ ಬ್ಯಾಟ್ ಕೆಲಸ ಮಾಡದಿದ್ದರೆ ಟೀಂ ಇಂಡಿಯಾದಿಂದ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಶ್ರೀಲಂಕಾ ಸರ್ಕಾರದ ವಿರುದ್ಧ ಕ್ರಿಕೆಟರ್ ಸನತ್ ಜಯಸೂರ್ಯ ಪ್ರತಿಭಟನೆ


ಬಿರುಗಾಳಿ ಎಬ್ಬಿಸಿದ ಜಡೇಜಾ ಹೇಳಿಕೆ!


ಈ ನಡುವೆ ವಿರಾಟ್ ಕೊಹ್ಲಿ ಬಗ್ಗೆ ಭಾರತೀಯ ಕ್ರಿಕೆಟ್ ದಿಗ್ಗಜರೊಬ್ಬರು ದೊಡ್ಡ ಹೇಳಿಕೆ ನೀಡಿದ್ದಾರೆ. ಮಾಜಿ ಕ್ರಿಕೆಟಿಗ ಮತ್ತು ಕಾಮೆಂಟೇಟರ್ ಅಜಯ್ ಜಡೇಜಾ ಹೇಳಿರುವ ಪ್ರಕಾರ, ‘ತಾವೊಂದು ವೇಳೆ ಸೆಲೆಕ್ಟರ್ ಆಗಿದ್ದರೆ ಟಿ20 ತಂಡದಿಂದ ವಿರಾಟ್ ಕೊಹ್ಲಿಯನ್ನು ಕೈಬಿಡುತ್ತಿದೆ’ ಎಂದಿದ್ದಾರೆ. ಕೊಹ್ಲಿ ಟಿ20 ಮಾದರಿಯಲ್ಲಿ ಆಡಬಾರದು ಎಂದು ಅವರು ಹೇಳಿದ್ದಾರೆ. ‘ಒಂದು ವೇಳೆ ನನಗೆ ಭಾರತ ತಂಡವನ್ನು ಆಯ್ಕೆ ಮಾಡುವ ಅವಕಾಶ ಸಿಕ್ಕಿದ್ದರೆ ನಾನು ವಿರಾಟ್ ಕೊಹ್ಲಿಯನ್ನು ಸೇರಿಸಿಕೊಳ್ಳುತ್ತಿರಲಿಲ್ಲ’ವೆಂದು ಅವರು ಹೇಳಿದ್ದಾರೆ. ಅಜಯ್ ಜಡೇಜಾ ಪ್ರಕಾರ, ‘ಭಾರತ ತಂಡದ ನಿರ್ವಹಣೆ ಮತ್ತು ನಾಯಕ ರೋಹಿತ್ ಶರ್ಮಾಗೆ ಎರಡು ಆಯ್ಕೆಗಳಿವೆ. ಕೊಹ್ಲಿ ಆಕ್ರಮಣಕಾರಿಯಾಗಿ ಆಡುಬಹುದು ಅಥವಾ ತನ್ನ ಹಳೆಯ ಶೈಲಿಯಲ್ಲಿಯೇ ಆಡಬಹುದು. ಕೊಹ್ಲಿಗೆ ಸಂಬಂಧಿಸಿದಂತೆ ರೋಹಿತ್ ಕಠಿಣ ನಿರ್ಧಾರ  ತೆಗೆದುಕೊಳ್ಳಬೇಕಾಗಬಹುದು. ಯಾರು ತಂಡವನ್ನು ಮುನ್ನಡೆಸುತ್ತಾರೋ ಅವರಿಗೆ ಎರಡು ಆಯ್ಕೆಗಳಿರುತ್ತವೆ. ಒಂದೋ ನೀವು ಹೀಗೆಯೇ ಆಡುತ್ತಿರಿ ಮತ್ತು ಯುವ ಆಟಗಾರರಿಗೆ ಅವಕಾಶ ನೀಡಿ ಅಥವಾ ನಿಮ್ಮ ಮೊದಲು ಆಡಿದ ಹಳೆಯ ತಂಡಕ್ಕೆ ಹೋಗಿ’ ಎಂದು ಜಡೇಜಾ ಹೇಳಿದ್ದಾರೆ.


ಇದನ್ನೂ ಓದಿ: IND vs ENG 2nd T20I : ಭಾರತಕ್ಕೆ 49 ರನ್ ಗಳ ಭರ್ಜರಿ ಗೆಲುವು, 2-0 ರಿಂದ ಸರಣಿ ವಶಕ್ಕೆ


ಕೊಹ್ಲಿ ಪ್ರದರ್ಶನ ತೃಪ್ತಿದಾಯಕವಾಗಿಲ್ಲ


‘ಕೊಹ್ಲಿ ವಿಶೇಷ ಆಟಗಾರ. ಅವರು ಕೊಹ್ಲಿಯಾಗಿರದೇ ಇದ್ದಿದ್ದರೆ ಟೆಸ್ಟ್ ತಂಡದ ಭಾಗವಾಗುತ್ತಿರಲಿಲ್ಲ. ಆದಾಗ್ಯೂ, ನೀವು ಅವರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ಅಗ್ರ ಕ್ರಮಾಂಕದಲ್ಲಿ ಆ ತೀಕ್ಷ್ಣತೆ ಬೇಕೇ ಅಥವಾ ರೋಹಿತ್ ಮತ್ತು ವಿರಾಟ್ ಅಗ್ರ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ಹಳೆಯ ಶೈಲಿಯಲ್ಲಿ ಆಡಬೇಕಾ?. ಕೊಹ್ಲಿಯ ಇತ್ತೀಚಿನ ಪ್ರದರ್ಶನ ನೋಡಿದರೆ ತುಂಬಾ ಕಳಪೆಯಾಗಿದೆ. ಒಂದು ವೇಳೆ ಭಾರತ ತಂಡದ ಆಯ್ಕೆ ಮಾಡುವ ಅವಕಾಶ ನನಗೆ ಸಿಕ್ಕಿದ್ದರೆ ನಾನು ವಿರಾಟ್ ಅನ್ನು ಖಂಡಿತ ಆಯ್ಕೆ ಮಾಡುತ್ತಿರಲಿಲ್ಲ’ವೆಂದು ಜಡೇಜಾ ಹೇಳಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ