ಬೇಕಿರೋದು ಇನ್ನೆರಡು ಸಿಕ್ಸ್… ಈ ವಿಷಯದಲ್ಲಿ ಧೋನಿಯನ್ನೇ ಹಿಂದಿಕ್ಕಿ ಇತಿಹಾಸ ಸೃಷ್ಟಿಸುವ ತವಕದಲ್ಲಿದ್ದಾರೆ ರೋಹಿತ್!
Rohit Sharma Test Sixes: ರಾಜ್‌ಕೋಟ್’ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ 2 ಸಿಕ್ಸರ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಷಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಲಿದ್ದಾರೆ.
Rohit Sharma Test Sixes: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಲಿದೆ. ಐದು ಪಂದ್ಯಗಳ ಟೆಸ್ಟ್ ಸರಣಿ ಸದ್ಯ 1-1ರಲ್ಲಿ ಸಮಬಲಗೊಂಡಿದೆ. ರಾಜ್‌ಕೋಟ್’ನಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆ ಬರೆಯಲಿದ್ದಾರೆ. ಅಷ್ಟೇ ಅಲ್ಲ, ಈ ದಾಖಲೆ ಮಾಡುವ ಮೂಲಕ ಮಹೇಂದ್ರ ಸಿಂಗ್ ಧೋನಿಯವರ ದಾಖಲೆಯನ್ನು ಬ್ರೇಕ್ ಮಾಡಲಿದ್ದಾರೆ.
ಇದನ್ನೂ ಓದಿ: ರಾಜಯೋಗದಿಂದ ಈ ಜನ್ಮರಾಶಿಗೆ ಶುಕ್ರದೆಸೆ ಶುರು: ಇನ್ಮುಂದೆ ಇವರದ್ದೇ ರಾಜ್ಯಭಾರ-ಹೆಜ್ಜೆಯಿಟ್ಟರೆ ಸಾಕು ಗೆಲುವಿನದ್ದೇ ವೈಭವ!
ರಾಜ್‌ಕೋಟ್’ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ 2 ಸಿಕ್ಸರ್ ಬಾರಿಸಿದರೆ, ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಷಯದಲ್ಲಿ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯನ್ನು ಹಿಂದಿಕ್ಕಲಿದ್ದಾರೆ. ಪ್ರಸ್ತುತ ಟೆಸ್ಟ್ ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ ಹೆಸರಲ್ಲಿ 77 ಸಿಕ್ಸರ್ ದಾಖಲೆಯಾಗಿದೆ. ಧೋನಿ ಆಟದ ಸುದೀರ್ಘ ಸ್ವರೂಪದಲ್ಲಿ 78 ಸಿಕ್ಸರ್ ಬಾರಿಸಿದ್ದರು. ಹೀಗಾಗಿ ರಾಜ್‌ಕೋಟ್’ನಲ್ಲಿ ಕೇವಲ 2 ಸಿಕ್ಸರ್ ಬಾರಿಸುವ ಮೂಲಕ ರೋಹಿತ್ ಶರ್ಮಾ ಧೋನಿ ಅವರನ್ನು ಮೀರಿಸಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸಿಕ್ಸರ್’ಗಳನ್ನು ಬಾರಿಸಿದವರು ಯಾರು?
ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆಯು ಇಂಗ್ಲೆಂಡ್’ನ ಆಲ್ ರೌಂಡರ್ ಮತ್ತು ನಾಯಕ ಬೆನ್ ಸ್ಟೋಕ್ಸ್ ಹೆಸರಿನಲ್ಲಿದೆ. ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್’ನಲ್ಲಿ 128 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ವಿಶ್ವ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ಇವರು 590 ಅಂತಾರಾಷ್ಟ್ರೀಯ ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ವೆಸ್ಟ್ ಇಂಡೀಸ್ ದಿಗ್ಗಜ ಬ್ಯಾಟ್ಸ್’ಮನ್ ಕ್ರಿಸ್ ಗೇಲ್ ಹೆಸರು ಎರಡನೇ ಸ್ಥಾನದಲ್ಲಿದ್ದು, 553 ಅಂತಾರಾಷ್ಟ್ರೀಯ ಸಿಕ್ಸರ್ ಬಾರಿಸಿದ್ದಾರೆ.
ಟೆಸ್ಟ್ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್’ಮನ್ಸ್:
128 ಸಿಕ್ಸರ್ಸ್ - ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
107 ಸಿಕ್ಸರ್ಸ್ - ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
100 ಸಿಕ್ಸರ್ಸ್ - ಆಡಮ್ ಗಿಲ್‌ಕ್ರಿಸ್ಟ್ (ಆಸ್ಟ್ರೇಲಿಯಾ)
98 ಸಿಕ್ಸರ್ಸ್ - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
97 ಸಿಕ್ಸರ್ಸ್ - ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ)
91 ಸಿಕ್ಸರ್ಸ್ - ವೀರೇಂದ್ರ ಸೆಹ್ವಾಗ್ (ಭಾರತ)
88 ಸಿಕ್ಸರ್ಸ್ - ಬ್ರಿಯಾನ್ ಲಾರಾ (ವೆಸ್ಟ್ ಇಂಡೀಸ್)
87 ಸಿಕ್ಸರ್ಸ್ - ಕ್ರಿಸ್ ಕ್ರೇನ್ಸ್ (ನ್ಯೂಜಿಲೆಂಡ್)
86 ಸಿಕ್ಸರ್ಸ್ - ಟಿಮ್ ಸೌಥಿ (ನ್ಯೂಜಿಲೆಂಡ್)
85 ಸಿಕ್ಸರ್ಸ್ - ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ)
84 ಸಿಕ್ಸರ್ಸ್ - ವಿವ್ ರಿಚರ್ಡ್ಸ್ (ವೆಸ್ಟ್ ಇಂಡೀಸ್)
82 ಸಿಕ್ಸರ್ಸ್ - ಆಂಡ್ರ್ಯೂ ಫ್ಲಿಂಟಾಫ್ (ಇಂಗ್ಲೆಂಡ್)
82 ಸಿಕ್ಸರ್ಸ್ - ಮ್ಯಾಥ್ಯೂ ಹೇಡನ್ (ಆಸ್ಟ್ರೇಲಿಯಾ)
81 ಸಿಕ್ಸರ್ಸ್ - ಮಿಸ್ಬಾ ಉಲ್ ಹಕ್ (ಪಾಕಿಸ್ತಾನ)
81 ಸಿಕ್ಸರ್ಸ್ - ಕೆವಿನ್ ಪೀಟರ್ಸನ್ (ಇಂಗ್ಲೆಂಡ್)
78 ಸಿಕ್ಸರ್ಸ್ - ಮಹೇಂದ್ರ ಸಿಂಗ್ ಧೋನಿ (ಭಾರತ)
77 ಸಿಕ್ಸರ್ಸ್ - ರೋಹಿತ್ ಶರ್ಮಾ (ಭಾರತ)
73 ಸಿಕ್ಸರ್ಸ್ - ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
ರೋಹಿತ್’ಗೆ 600 ಸಿಕ್ಸರ್ ಪೂರೈಸುವ ಅವಕಾಶ
ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್’ನಲ್ಲಿ ಇನ್ನು 10 ಸಿಕ್ಸರ್‌ಗಳನ್ನು ಬಾರಿಸಿದರೆ, ಅಂತರರಾಷ್ಟ್ರೀಯ ಕ್ರಿಕೆಟ್’ನಲ್ಲಿ 600 ಸಿಕ್ಸರ್‌ಗಳನ್ನು ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಲಿದ್ದಾರೆ. ರೋಹಿತ್ ಶರ್ಮಾ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 590 ಸಿಕ್ಸರ್’ಗಳನ್ನು ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ.
ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಬ್ಯಾಟ್ಸ್‌ಮನ್
590 ಸಿಕ್ಸರ್ಸ್ - ರೋಹಿತ್ ಶರ್ಮಾ (ಭಾರತ)
553 ಸಿಕ್ಸರ್ಸ್ - ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್)
476 ಸಿಕ್ಸರ್ಸ್ - ಶಾಹಿದ್ ಅಫ್ರಿದಿ (ಪಾಕಿಸ್ತಾನ)
398 ಸಿಕ್ಸರ್ಸ್ - ಬ್ರೆಂಡನ್ ಮೆಕಲಮ್ (ನ್ಯೂಜಿಲೆಂಡ್)
383 ಸಿಕ್ಸರ್ಸ್ - ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್)
359 ಸಿಕ್ಸರ್ಸ್ - ಮಹೇಂದ್ರ ಸಿಂಗ್ ಧೋನಿ (ಭಾರತ)
ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಭಾರತೀಯ ಬ್ಯಾಟ್ಸ್’ಮನ್
590 ಸಿಕ್ಸರ್ಸ್ - ರೋಹಿತ್ ಶರ್ಮಾ
359 ಸಿಕ್ಸರ್ಸ್- ಮಹೇಂದ್ರ ಸಿಂಗ್ ಧೋನಿ
294 ಸಿಕ್ಸರ್ಸ್ - ವಿರಾಟ್ ಕೊಹ್ಲಿ
264 ಸಿಕ್ಸರ್ಸ್ - ಸಚಿನ್ ತೆಂಡೂಲ್ಕರ್
251 ಸಿಕ್ಸರ್ಸ್ - ಯುವರಾಜ್ ಸಿಂಗ್
247 ಸಿಕ್ಸರ್ಸ್ - ಸೌರವ್ ಗಂಗೂಲಿ
243 ಸಿಕ್ಸರ್ಸ್ - ವೀರೇಂದ್ರ ಸೆಹ್ವಾಗ್
ಇದನ್ನೂ ಓದಿ: ಕುತ್ತಿಗೆಗೆ ಚಾಕು ಇರಿದು ಮಹಿಳೆಯ ಕೊಲೆ: ಆರೋಪಿ ಪರಾರಿ, ಪೊಲೀಸರಿಂದ ಪ್ರಕರಣ ದಾಖಲು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ